ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ದಿಟ್ಟ ನುಡಿಗಳ ಮಾತುಗಾರ, ಛಲಗಾರ, ಪರಿಶ್ರಮದ ರಾಜಕಾರಣಿ ಈ ಮುಂಚೆ ದೇವರಾಜ ಅರಸು ಅವರ ಅವಧಿಯನ್ನು ಸರಿಗಟ್ಟಿದ ಹಿನ್ನೆಲೆಯಲ್ಲಿ ಸಿಂಧನೂರು ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕೇಕ್ ಕಟ್ ಮಾಡಿ ಪರಸ್ಪರ ಕೇಕ್ ತಿನಿಸಿ, ತಮ್ಮ ನೆಚ್ಚಿನ ನಾಯಕನಿಗೆ ಜೈಕಾರ ಕೂಗಿ ಸಂಭ್ರಮಿಸಿದರು.

ನಂತರ ಕಾಂಗ್ರೆಸ್ ಮುಖಂಡ ಹನುಮೇಶ ಬಾಗೋಡಿ ಮಾತನಾಡಿ, ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದೀರ್ಘಕಾಲದ ಅವಧಿಯವರೆಗೆ 7 ವರ್ಷ 7 ತಿಂಗಳು 21 ದಿನಗಳ ಪೂರೈಸಿದ ರಾಜ್ಯದ ಏಕೈಕ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು, ಈ ಹಿಂದೆ ಅತಿ ಹೆಚ್ಚು
ದೀರ್ಘಾವಧಿಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಡಿ.ದೇವರಾಜ ಅರಸು ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿ ಈಗ ಅತಿ ಹೆಚ್ಚಿನ ಅವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿದ್ದಾರೆ.

ಇನ್ನೂ ರಾಜ್ಯದ ಮುಖ್ಯಮಂತ್ರಿ ಮುಂದುವರೆಯಲಿ
ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷ ಪೂರ್ಣಗೊಳಿಸಲಿ ದೇವರು ಅವರಿಗೆ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಮತ್ತು ಉತ್ತಮ ಆಡಳಿತ ರಾಜ್ಯಕ್ಕೆ ನೀಡಲಿ ಎಂದು ಶುಭಹರಸಿ ಹಾರೈಸಿದರು.

ಕೇಕ್ ಕತ್ತರಿಸುವ ಸಂಭ್ರಮದಲ್ಲಿ ನಗರದ ಎಪಿಎಂಸಿ ವರ್ತಕರು, ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು
ಅಹಿಂದ ತಾಲೂಕು ಅಧ್ಯಕ್ಷ ಪರಶುರಾಮ, ವರ್ತಕರ ಸಂಘದ ಅಧ್ಯಕ್ಷ ದೊಡ್ಡನಗೌಡ, ಕಾರ್ಯದರ್ಶಿ ಫಕೀರಪ್ಪ ತಿಡಿಗೋಳ, ಮಲ್ಲಪ್ಪ ಮೈಲಾರ್, ಬಸವರಾಜ ಗೊರೇಬಾಳ, ಶಿವರಾಜ ಹಸಮಕಲ್, ಖಾಜಾಸಾಬ್, ರಫೀ, ವಿಜಯಸೇಠ್, ಲಲಿತ್, ಆನಂದಸೇಠ್, ಸಾಬಣ್ಣ ಅಂಗಡಿ ವಿರುಪಾಪುರ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಇದ್ದರು.

Leave a Reply

Your email address will not be published. Required fields are marked *