ಲಿಂಗಸಗೂರು: ಸಮಾಜದಲ್ಲಿ ಪರಸ್ಪರ ಸ್ನೇಹ, ಸಾಮರಸ್ಯ ಹಾಗೂ ಧಾರ್ಮಿಕ ಸಹಿಷ್ಣುತೆಯನ್ನು ಉತ್ತೇಜಿಸುವ ಉದ್ದೇಶದಿಂದ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿ ವತಿಯಿಂದ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂಭ್ರಮವಾಗಿ ಆಯೋಜಿಸಲಾಯಿತು.
ಗುರುಸ್ವಾಮಿಗಳಾದ ಸಿದ್ದರಾಮ ಸ್ವಾಮಿ ಅವರ ನೇತೃತ್ವದಲ್ಲಿ ಮಾಲಾಧಾರಿಗಳು ಧಾರ್ಮಿಕ ಶ್ರದ್ಧೆಯಿಂದ ಮಕರವಿಲಕ್ಕಿನ ಯಾತ್ರೆಗೆ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ, ಅಂಜುಮನ್ ವತಿಯಿಂದ ಆತ್ಮೀಯ ಆತಿಥ್ಯ ನೀಡಲಾಯಿತು. ಮಾಲಾದಾರಿಗಳಿಗೆ ಅನ್ನ, ನೀರು ಮತ್ತು ತಾಜಾ ಊಟವನ್ನು ವ್ಯವಸ್ಥಿತವಾಗಿ ಒದಗಿಸಿ, “ಧರ್ಮ ಬೇರೆ — ಮಾನವೀಯತೆ ಒಂದೇ” ಎಂಬ ಸಂದೇಶವನ್ನು ಜಾಗೃತಗೊಳಿಸಲಾಯಿತು.
ಸಮಾಜದಲ್ಲಿ ಭಾವೈಕ್ಯತೆಯ ಮಾದರಿ ವೈವಿಧ್ಯಮಯ ಧರ್ಮ ಗಳಿದ್ದರೂ, ಪರಸ್ಪರ ಗೌರವ ಮತ್ತು ಸ್ನೇಹಪೂರ್ಣ ಸಹಭಾಗಿತ್ವ ಇರಬೇಕು ಎಂಬ ಆಶಯದಿಂದ ಈ ಕಾರ್ಯಕ್ರಮವನ್ನು ಕಮಿಟಿ ಶ್ಲಾಘನೀಯವಾಗಿ ನಿರ್ವಹಿಸಿತು. ಸ್ಥಳದಲ್ಲಿ ಮಾಲಾದಾರಿಗಳು ಮತ್ತು ಸ್ವಾಮಿಗಳಿಂದ ಅಂಜುಮನ್ ಸದಸ್ಯರಿಗೆ ಧನ್ಯವಾದದ ಮಾತುಗಳು ಕೇಳಿಬಂದವು.
ಮುಖ್ಯ ಅತಿಥಿಗಳು ಮತ್ತು ಕಮಿಟಿ ಸದಸ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ
ಸಹನಾ ಮೊಬೈಲ್ ಅಂಗಡಿ ಮಾಲೀಕರಾದ ವಿಜಯ್ ಸರ್ದಾರ್,
ಅಂಜುಮನ್ ಕಮಿಟಿಯ ಗೌರವಾಧ್ಯಕ್ಷ ಅನ್ಸರ್ ಭಾಯಿ,
ಅಧ್ಯಕ್ಷ ಹುಸೇನ್ ಭಾಷಾ,
ಉಪಾಧ್ಯಕ್ಷ ಮುಸ್ತಫಾ,
ಪ್ರಧಾನ ಕಾರ್ಯದರ್ಶಿ ಅಮೀನ್ ಭಾಯಿ, ಸಲೀಮ್, ಆಸೀಫ್, ಆರಿಫ್, ಇಬ್ರಾಹಿಂ, ಹಸನ್, ಆದಿಲ್, ರಫಿ ಸಂಪಂಗಿ, ರಜ್ಜಬ್
ಇವರೊಂದಿಗೆ ಮುಸ್ಲಿಂ ಸಮಾಜದ ಅನೇಕ ಮುಖಂಡರು ಹಾಜರಿದ್ದರು.
ಅನ್ನ ಸೇವೆ ಕಾರ್ಯಕ್ರಮವನ್ನು ಸಮರ್ಪಕ ವ್ಯವಸ್ಥೆಯೊಂದಿಗೆ ಮುಗಿಸಲಾಗಿದ್ದು, ಭಾಗವಹಿಸಿದ ಪ್ರತಿಯೊಬ್ಬರೂ ಪರಸ್ಪರ ಸೌಹಾರ್ದತೆ ಹಾಗೂ ಬಾಂಧವ್ಯವನ್ನು ಹೃತ್ಪೂರ್ವಕವಾಗಿ ಮೆಚ್ಚಿಕೊಂಡರು.

Leave a Reply

Your email address will not be published. Required fields are marked *