ಮಾನ್ವಿ : ಪಟ್ಟಣದ ಪತ್ರಿಕಾ ಭವನದಲ್ಲಿ ಸಮಾಜ ಸೇವಕರಾದ ಗುರುರಾಜ್ ನಾಗಲಾಪುರ್ ಮಾತನಾಡಿ ಪಟ್ಟಣದ ಚೀಕಲಪರ್ವಿ ರಸ್ತೆಯಲ್ಲಿ ಬರುವ ಕೋನಾಪುರ ಪೇಟೆ ಅಭಿವೃದ್ದಿಯಲ್ಲಿ ವಂಚಿತವಾಗಿದ್ದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡ ಸಂಬದಿಸಿದ ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಜ.12 ರಂದು ಕೋನಾಪುರ ಪೇಟೆಯಲ್ಲಿನ ಅಂಬೇಡ್ಕರ್ ನಗರದಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು. ಚೀಕಲಪರ್ವಿ ರಸ್ತೆಯಲ್ಲಿ ಪ್ರತಿದಿನ ಬಾರಿ ವಾಹನಗಳ ಸಂಚಾರ ದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು ವಾಹನ ದಟ್ಟಣೆ ನಿವಾರಣೆಗಾಗಿ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡಬೇಕು. ಪುರಸಭೆ ವತಿಯಿಂದ ನಿರಂತರವಾಗಿ ಶುದ್ದವಾದ ಕುಡಿಯುವ ನೀರಿನ ಪೂರೈಕೆಗಾಗಿ ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ದೂಳು ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ಪ್ರವಾಸಿ ಮಂದಿರದ ಹತ್ತಿರ ವಿರುವ ಸರ್ಕಾರಿ ಜಾಗದಲ್ಲಿ ಉದ್ಯಾನವನ ನೀರ್ಮಾಣ ಮಾಡಬೇಕು, ಆರೋಗ್ಯ ಇಲಾಖೆಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವುದಕ್ಕಾಗಿ ಖಾಲಿ ಇರುವ ಹುದ್ದೆಗಳನ್ನು ತುಂಬುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು, ಅಗತ್ಯ ತಜ್ಞ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ನೇಮಕಮಾಡಬೇಕು, ಪುರಸಭೆ ವತಿಯಿಂದ ಐತಿಹಾಸಿಕ ಸಂಜಿವರಾಯ ದೇವಸ್ಥಾನದ ಹತ್ತಿರ ತ್ಯಾಜ್ಯ ಸುರಿಯುತ್ತಿರುವುದರಿಂದ ಭಕ್ತರಿಗೆ ಅನಾನುಕೂಲವಾಗುತ್ತಿದ್ದು ಸ್ಥಳಾಂತರ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನರಸಿಂಹ ಹೆಳವರ್,ವೆಂಕಟೇಶ ಯಾದವ್, ಆನಿಲ್ ಗೌಡ, ವೀರೇಶ ಯಾದವ್ ಇದ್ದರು.

