ಲಿಂಗಸಗೂರು : ಜ 6 ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕಾ ಅಧ್ಯಕ್ಷ ಜಿಲಾನಿ ಪಾಷಾ ರವರ 46ನೇ ಹುಟ್ಟುಹಬ್ಬದ ಪ್ರಯುಕ್ತ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಾಲು ಹಾಗೂ ಬ್ರೆಡ್ ವಿತರಣೆ ಮಾಡುವ ಮೂಲಕ ಮಾನವೀಯ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರೋಗಿಗಳಿಗೆ
ಹಾಲು ಮತ್ತು ಬ್ರೇಡ್ ವಿತರಿಸಿ ನಂತರ ಮಾತನಾಡಿದ ಜಿಲಾನಿ ಪಾಷಾ ಸಮಾಜದ ದುರ್ಬಲ ವರ್ಗದವರ ನೋವಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಹುಟ್ಟು ಹಬ್ಬದಂತಹ ವಿಶೇಷ ಸಂದರ್ಭಗಳಲ್ಲಿ ವೈಭವಕ್ಕಿಂತ ಸೇವೆಯೇ ಶ್ರೇಷ್ಠ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ರುದ್ರಗೌಡ, ರವಿಕುಮಾರ್ ಬರಗುಡಿ, ಅಜೀಜ್ ಪಾಷಾ, ಮೋಸಿನ್ ಖಾನ್, ಅಲ್ಲಾವುದ್ದೀನ್ ಬಾಬಾ, ಬಸನಗೌಡ, ಜಮೀರ್ ಖಾನ್, ತಿಮ್ಮನಗೌಡ ಭೂಪುರ, ಮಲ್ಲನಗೌಡ ಮರಿಯಪ್ಪ ಹಟ್ಟಿ, ರಹೀಂ ಬಾಬಾ, ಅವಟಿ ಆರಿಫ್, ಅಮರೇಶ್ ಗೊರೆಬಾಳ್, ಪ್ರಭುಗೌಡ ಭಗೀರಥ, ಬಸವರಾಜ್, ರಾಜು ಯಲಗಟ್ಟಾ, ನನ್ನೇ ಸಾಬ್, ಪರಮಣ್ಣ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

