ರಾಯಚೂರು ಜನವರಿ 06 (ಕರ್ನಾಟಕ ವಾರ್ತೆ): ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷತೆಯಲ್ಲಿ ಜನವರಿ 7ರ ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಜೋನಲ್-2 ಕೋರ್ಟ ಹಾಲ್ (ಹಳೆ ಜಿಲ್ಲಾಧಿಕಾರಿಗಳ ಕಚೇರಿ) ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಯಚೂರು ಮಹಾನಗರಪಾಲಿಕೆ ವತಿಯಿಂದ ಅನುಷ್ಠಾನವಾಗುತ್ತಿರುವ ಶೇ.29 ಪ.ಜಾತಿ & ಪ.ಪಂಗಡ ಶೇ.7.25 ಇತರೆ ಹಿಂದುಳಿದ ಜನಾಂಗ ಶೇ.5 ವಿಕಲಚೇತನರ ಮುಂತಾದ ಬಡತನ ನಿರ್ಮೂಲನ ಯೋಜನೆಗಳ ಕುರಿತು, ಬಾಕಿ ಉಳಿದ ಅನುದಾನಕ್ಕೆ ಆರ್ಹ ಬಡವರಿಗೆ ಸದುಪಯೋಗವಾಗುವಂತ ಚಟುವಟಿಕೆಗಳ ಕ್ರಿಯಾ ಯೋಜನೆ ಕೈಗೆತ್ತಿಕೊಳ್ಳಬೇಕಾಗಿರುತ್ತದೆ. ಆದಕಾರಣ ಪ.ಜಾತಿ/ಪ.ಪಂಗಡ, ಇತರೆ ಹಿಂದುಳಿದ ವರ್ಗ, ವಿಕಲಚೇತನರು, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಮುಂತಾದ ಸಂಘಟನೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕರೆದಿರುವ ಸಭೆಗೆ ತಪ್ಪದೆ ಹಾಜರಾಗಿ ಕ್ರಿಯಾ ಯೋಜನೆಯನ್ನು ಸುತ್ತೋಲೆ ಪ್ರಕಾರ ರೂಪಿಸುವುದಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
