ಮನುಷ್ಯನಿಗೆ ಜೀವನದಲ್ಲಿ ಹೊಸ ಅನುಭವಗಳು ಖುಷಿಯ ವಿಚಾರಗಳು ಜೀವನದಲ್ಲಿ ಬಂದಾಗ ಮಾತ್ರ ಅದನ್ನು ನಾವು ಹೊಸ ವರ್ಷ ಎಂದು ಆಚರಿಸಲು ಸಾಧ್ಯ.
ಆದರೆ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಹಲವಾರು ಜನರಿಗೆ ಹಳೆಯ ಅನುಭವಗಳೇ ಆಗುತ್ತದೆ ಮಕ್ಕಳು, ಸ್ತ್ರೀಯರು, ಅಂಗವಿಕಲರು, ಅನಾಥರು, ರೈತರು, ಬಡವರು,ನಿರುದ್ಯೋಗಿಗಳು ದಲಿತರು, ಕತ್ತಲೆಯಲ್ಲಿ ಕಷ್ಟಗಳ ಸರಮಾಲೆಯಲ್ಲಿ ಬದುಕುತ್ತಿದ್ದಾರೆ ಇವರಿಗೆಲ್ಲಿ ಹೊಸ ವರ್ಷ ಯಾವಾಗ ಹೊಸ ಜೀವನ ?
ಮಕ್ಕಳೇ ದೇವರು ಎನ್ನುವ ನಮ್ಮ ದೇಶದಲ್ಲಿ ಮಕ್ಕಳಿಗೆ ಏನೆಲ್ಲ ಕಾನೂನುಗಳು ಇದ್ದರೂ ಸಹ ಸರಿಯಾದ ರಕ್ಷಣೆ ಇಲ್ಲ ಮಕ್ಕಳಿಗೆ ರಕ್ಷಣೆ ಎಲ್ಲಿದೆ ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ, ಬಾಲಕಾರ್ಮಿಕರಾಗಿದ್ದಾರೆ, ಕುಟುಂಬದಿಂದ ದೂರ ಉಳಿದ ಎಷ್ಟೋ ಮಕ್ಕಳಿದ್ದಾರೆ ಮಕ್ಕಳ ಹಕ್ಕುಗಳು ನಮ್ಮ ಸಂವಿಧಾನದಲ್ಲಿದ್ದರೂ ಸಹ ಇನ್ನುವರೆಗೂ ಕೂಡ ಮಕ್ಕಳು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಮಕ್ಕಳಿಗೆ ಸ್ವಾತಂತ್ರ್ಯದ ಖುಷಿಯ ಅನುಭವವಿಲ್ಲದ ಎಷ್ಟೋ ಮಕ್ಕಳು ನಮ್ಮ ದೇಶದಲ್ಲಿದ್ದಾರೆ ಇಂತಹ ಮಕ್ಕಳಿಗೆಲ್ಲಿ ಹೊಸ ವರ್ಷ, ಯಾವಾಗ ಹೊಸ ಜೀವನ?
ಹಾಗೆಯೇ ಸ್ತ್ರೀಯರಿಗೂ ಸಹ ಏನೆಲ್ಲ ಸಮಾನತೆ ಇದ್ದರೂ ಅದು ಹೆಸರಿಗೆ ಮಾತ್ರ ಇದೆ ಸರಿಯಾದ ರಕ್ಷಣೆ ಇಲ್ಲ ಕುಟುಂಬದಲ್ಲಿಂದ ಹಿಡಿದು ಸಮಾಜದಲ್ಲಿಯೂ ಶೋಷಣೆ ನಡೆಯುತ್ತದೆ ಸ್ತ್ರೀಯು ಕೂಡ ಪುರುಷನಷ್ಟೇ ಸಮಾನಳು ಎಂದರು ಸಹ ನಮ್ಮ ದೇಶದಲ್ಲಿ ಇಂದಿಗೂ ಕೂಡ ಕೆಲವು ದೇವಾಲಯಗಳಲ್ಲಿ ಪ್ರವೇಶವಿಲ್ಲ ಹಾಗೆಯೇ ಸಮಾಜದಲ್ಲಿಯೂ ಕೂಡ ಸಮಾನಳು ಅಂತಕ್ಕಂತಹ ಮಾತು ಕಾನೂನಿನಲ್ಲಿದೆ ಆದರೆ ನಿಜ ಜೀವನದಲ್ಲಿ ಅದು ಜಾರಿಯಾಗುತ್ತಿಲ್ಲ “ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೋ ಅಲ್ಲಿ ದೇವರು ವಾಶಿಸುತ್ತಾನೆ” ಎಂಬ ಮಾತು ಬರಿ ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಆದ್ದರಿಂದ ಇವರಿಗೆಲ್ಲಿ ಹೊಸ ವರ್ಷ, ಯಾವಾಗ ಹೊಸ ಜೀವನ ?
ಹಾಗೆಯೇ ಅಂಗವಿಕಲರಿಗೂ ಸಹ ನಮ್ಮ ದೇಶದಲ್ಲಿ ಏನೆಲ್ಲಾ ಕಾನೂನುಗಳು ಇದ್ದರೂ ಸಹ ಅವರಿಗೂ ಕೂಡ ಸಮಾಜದಲ್ಲಿ “ಎಲ್ಲರಂತೆ ನಾವು” ಎಂದು ಬದುಕುವ ವಾತಾವರಣವು ಸೃಷ್ಟಿಯಾಗಿಲ್ಲ ಬದುಕುವ ಸ್ವಾತಂತ್ರ್ಯವೂ ಅವರಿಗಿಲ್ಲದಂತಾಗಿದೆ ಇದರಿಂದ ಅವಮಾನಗಳಿಂದ ನೋವುಗಳಿಂದ ಅವರು ಬದುಕುತ್ತಿದ್ದಾರೆ ಇವರಿಗೆಲ್ಲಿ ಹೊಸ ವರ್ಷ, ಯಾವಾಗ ಹೊಸ ಜೀವನ ?
ಬಡವರು ಕೂಡ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಸರ್ಕಾರ ಬಡತನ ನಿವಾರಣೆಗಾಗಿ ಏನೆಲ್ಲಾ ಯೋಜನೆಗಳನ್ನು ಜಾರಿಗೆ ತಂದರು ಕೂಡ ಬಡತನದ ಸಮಸ್ಯೆ ಕಾಡುತ್ತಿದೆ ಬಡತನದಲ್ಲಿ ಕೈ ತೊಳೆಯುತ್ತಾರೆ ಇಂತಹವರಿಗೆಲ್ಲಿ ಹೊಸ ವರ್ಷ, ಯಾವಾಗ ಹೊಸ ಜೀವನ ?
ನಮ್ಮ ದೇಶದಲ್ಲಿ ರೈತರು ಕೂಡ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ” ರೈತ ದೇಶದ ಒಂದು ಕಣ್ಣು, ರೈತನೇ ದೇಶದ ಬೆನ್ನೆಲುಬು”ಎಂಬುದು ಬರಿ ಮಾತಲ್ಲಿದೆ ಅಷ್ಟೇ ರೈತರಿಗೆ ಸರಿಯಾದ ಮಳೆ ಇಲ್ಲ, ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ, ಸರಿಯಾದ ಬೆಳೆ ಇಲ್ಲ, ಬೆಳೆದರೂ ಬೆಳಗೆ ತಕ್ಕ ಬೆಲೆ ಇಲ್ಲ , ಬೆಂಬಲ ಬೆಲೆ ಇಲ್ಲ ರೈತರಿಗೆ ವಿಶೇಷ ಯೋಜನೆಗಳಿಲ್ಲ ಇದ್ದರೂ ಸರಿಯಾಗಿ ಜಾರಿಯಾಗುತ್ತಿಲ್ಲ .
ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ ರೈತರ ಮೇಲೆ ಗೋಲಿಬಾರ್ ಮಾಡಲಾಗುತ್ತದೆ ಹೀಗೆ ರೈತರ ಬೆಳೆಗೆ ಸರಿಯಾದ ಬೆಲೆ ಇಲ್ಲದೆ ಸಾಲದ ಸುಳಿಯಲ್ಲಿ ಸಿಕ್ಕು ನಮ್ಮ ದೇಶದಲ್ಲಿ ಸುಮಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಇವರಿಗೆಲ್ಲಿ ಹೊಸ ವರ್ಷ, ಯಾವಾಗ ಹೊಸ ಜೀವನ ?
“ಉದ್ಯೋಗಂ ಪುರುಷ ಲಕ್ಷಣಂ” ಎಂಬ ಮಾತಿನಂತೆ ಪ್ರತಿಯೊಬ್ಬರಿಗೂ ಉದ್ಯೋಗವು ಪುರುಷನ ಲಕ್ಷಣ ಆದರೆ ಉದ್ಯೋಗವೇ ಸಿಗದೇ ನಿರುದ್ಯೋಗಿಗಳಾಗಿ ಯುವಕರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಆಳುವ ಸರ್ಕಾರಗಳು ಚುನಾವಣೆಯ ಸಂದರ್ಭದಲ್ಲಿ ನಾವು ಅಷ್ಟು ಉದ್ಯೋಗ ಸೃಷ್ಟಿ ಮಾಡುತ್ತೇವೆ, ಇಷ್ಟು ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಆಶ್ವಾಸನೆಗಳನ್ನು ಕೊಟ್ಟು ಯುವಕರನ್ನ ಆಕರ್ಷಿಸಿ ಮತಗಳನ್ನು ಪಡೆದು ಆಡಳಿತಕ್ಕೆ ಬಂದಮೇಲೆ ಯಾವುದೇ ಉದ್ಯೋಗಗಳನ್ನ ಸೃಷ್ಟಿ ಮಾಡದೆ, ಇರುವ ಉದ್ಯೋಗಕ್ಕೂ ಭದ್ರತೆ ನೀಡಿದೆ ನಿರುದ್ಯೋಗಿಗಳನ್ನಾಗಿ ಮಾಡಲಾಗುತ್ತದೆ ಆದ್ದರಿಂದ ನಿರುದ್ಯೋಗಿಗಳಾಗಿ ಅಲೆದಾಡುವಂತಹ ಪರಿಸ್ಥಿತಿಯಾಗಿದೆ ದಿನನಿತ್ಯ ಜೀವನ ಮಾಡಲಿಕ್ಕೂ ಕಷ್ಟದ ಪರಿಸ್ಥಿತಿಯಾಗಿದೆ ಇಂತಹವರಿಗೆಲ್ಲಿ ಹೊಸ ವರ್ಷ, ಯಾವಾಗ ಹೊಸ ಜೀವನ ?
ಹಾಗೆಯೇ ನಮ್ಮ ದೇಶದಲ್ಲಿ ದಲಿತರಿಗಂತೂ ಹೇಳಿಕೊಳ್ಳಲಾಗದಷ್ಟು ಸಮಸ್ಯೆಗಳು ಪ್ರತಿನಿತ್ಯ ಶೋಷಣೆ ಪ್ರತಿನಿತ್ಯ ದಲಿತರ ಕೊಲೆಗಳು ದಲಿತರ ಮೇಲೆ ದೌರ್ಜನ್ಯ ಸಮಾಜದಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕು ಅವರಿಗೂ ಇಲ್ಲದಂತಾಗಿದೆ ಸಂವಿಧಾನದಲ್ಲಿ 17ನೇ ವಿಧಿ ಇದ್ದು ಅಸ್ಪೃಶ್ಯತೆ ನಿವಾರಣೆಗೆ ಏನೆಲ್ಲ ಕ್ರಮಗಳನ್ನು ಕೈಗೊಂಡರು ಸಹ ದಲಿತರ ದೌರ್ಜನ್ಯಗಳು ನಿಲ್ಲುತ್ತಿಲ್ಲ ಇವರಿಗೆಲ್ಲಿ ಹೊಸ ವರ್ಷ, ಯಾವಾಗ ಹೊಸ ಜೀವನ ?
ಹೀಗೆ ಒಂದಲ್ಲ ಎರಡಲ್ಲ ಸಮಸ್ಯೆಗಳು ಸರಮಾಲೆಯಾಗಿ ನಮ್ಮ ದೇಶದಲ್ಲಿ ತುಂಬಿತುಳುಗುತ್ತಿವೆ ಸರ್ಕಾರಗಳು ಇನ್ನೂ ಉತ್ತಮ ಯೋಜನೆಗಳನ್ನು ಮತ್ತು ಕಾನೂನುಗಳನ್ನ ಜಾರಿಗೆ ತಂದು ಇವರಿಗೂ ಹೊಸ ವರ್ಷ ಆಚರಿಸುವಂತ ಸುವರ್ಣ ಅವಕಾಶ ದೊರಕಿಸಿ ಕೊಡಲಿ , ಇವರೆಲ್ಲರಿಗೂ ಹೊಸ ಜೀವನದ ಅನುಭವವಾಗಲಿ ಎಂದು ಆಶಿಸೋಣ, ಹಾರೈಸೋಣ .

📝 ಸುಭಾಸ ಹರ್ವಾಪೂರು ಉಪನ್ಯಾಸಕರು ಹಾಗೂ ಪತ್ರಕರ್ತರು ಸಿಂಧನೂರು.

Leave a Reply

Your email address will not be published. Required fields are marked *