ಮಸ್ಕಿ : ಇದೆ 31 ಡಿಸೆಂಬರ್,2025 ರಂದು ದೇವಾನಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಮಸ್ಕಿ,ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು,ಇವರ ಸಹಯೋಗದಲ್ಲಿ ಮಸ್ಕಿ ಕಾಲೇಜಿನಲ್ಲಿ “ಮಸ್ಕಿ ಪರಿಸರ : ಪುರಾತತ್ವ,ಇತಿಹಾಸ ಮತ್ತು ಸಂಸ್ಕೃತಿ”.ವಿಷಯ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್ ರವರು ಮಾತನಾಡಿ
ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ,ಕುಲಸಚಿವರಾದ ಡಾ.ಎ.ಚನ್ನಪ್ಪ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಇತಿಹಾಸ ತಜ್ಞರು,ಪ್ರಾಧ್ಯಾಪಕರು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರು ಭಾಗವಹಿಸಲಿದ್ದಾರೆ.ಹಾಗೆಯೇ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿ ಇವರು ವಿಷಯ ಮಂಡಿಸಲಿದ್ದು,ತದನಂತರ ತಜ್ಞರಿಂದ ಗೋಷ್ಠಿಗಳು ನಡೆಯಲಿವೆ.ಇದರ ಸದುಪಯೋಗವನ್ನು ಇತಿಹಾಸ ವಿದ್ಯಾರ್ಥಿಗಳು,ಇತಿಹಾಸ ಆಸಕ್ತರು ಹಾಗೂ ಸಮಸ್ತ ನಾಗರಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದರು.

Leave a Reply

Your email address will not be published. Required fields are marked *