ದೇವದುರ್ಗ : ಹುಬ್ಬಳಿಯ ಇನಾಂ ಮೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಗೇಡು ಹತ್ಯೆ ಖಂಡಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಮಿತಿ ಪದಾಧಿಕಾರಿಗಳು ಸಾರ್ವಜನಿಕ ಕ್ಲಬ್‌ ಆವರಣದಿಂದ ಮೌನ ಪ್ರತಿಭಟನೆ ತಹಶೀಲ್‌ ಕಚೇರಿಗೆ ಆಗಮಿಸಿ ಸಿಎಂಗೆ ಬರೆದ ಮನವಿ ತಹಶೀಲ್ದಾರಗೆ ಸಲ್ಲಿಸಿದರು. ಭೀಮ ಆರ್ಮಿ ಸಂಘಟನೆ ತಾಲೂಕಾಧ್ಯಕ್ಷ ವಿಶ್ವನಾಥ ಬಲ್ಲಿದವ್‌ ಮಾತನಾಡಿ, ರಾಜ್ಯದಲ್ಲಿ ದಿನೇ-ದಿನೇ ಜಾತಿ ವೈಷಮ್ಯ ಹೆಚ್ಚಾಗಿ ಆತಂಕಾರಿ ಬೆಳವಣಿಗೆಗಳು ಸಂಭವಿಸುತ್ತಿವೆ. ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಹಗೆಟ್ಟಿದ್ದು, ದಲಿತರು ಪ್ರೀತಿಸಿ ಮದುವೆ ಆಗಬಾರದೆಂಬ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದರು. ಇನಾಂ ಮೀರಾಪುರ ಗ್ರಾಮದಲ್ಲಿ ನಡೆದಿರುವ ಘಟನೆ ರಾಜ್ಯವೇ ತಲೆತೆಗ್ಗಿಸುವಂತಾಗಿದೆ. ರಾಜ್ಯ ಸರಕಾರ ಇಂತಹ ಘೋರ ಆಪರಾಧಗಳನ್ನು ನಿಗ್ರಹಿಸಲು ಉಗ್ರ ಕಾನೂನನ್ನು ರೂಪಿಸಿ ಜಾರಿಗೆ ತರಬೇಕಾಗಿದೆ. ಅಂತರ್‌ ಜಾತಿ ವಿವಾಹಗಳಾದ ಮಕ್ಕಳನ್ನು ಪೋಷಕರೇ ಕಾನೂನಿನ ಭಯವಿಲ್ಲದೇ ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ರೈತರು ಬೆಳೆಯುವ ಅನ್ನ, ಆರೋಗ್ಯ ಸಮಸ್ಯೆ ಇದ್ದಾಗ ನೀಡುವ ರಕ್ತ ಇವುಗಳಿಗೆ ಯಾವುದೇ ಜಾತಿ ಅಡ್ಡ ಬರುವುದಿಲ್ಲ. ಪ್ರೀತಿಸಿ ಮದುವೆಗಳು ಆದಾಗ ಅಲ್ಲಿ ಜಾತಿ ಬರುತ್ತಿದೆ ಎಂದು ದೂರಿದರು. ಪ್ರೀತಿಸಿ ಮದುವೆಯಾದ ಮಗಳನ್ನೇ ಒಬ್ಬ ತಂದಿ ಕೊಲೆ ಮಾಡಿರುವುದು ನಿಜಕ್ಕೂ ದುರಂತ. ಎಂಆರ್‌ಎಚ್‌ಎಸ್‌ ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪೂರಿ ಮಾತನಾಡಿ, ಮೀರಾಪುರ ಗ್ರಾಮದಲ್ಲಿ ನಡೆದಿರುವ ಘಟನೆ ಈರಾಜ್ಯದಲ್ಲಿ ದಲಿತ ಯುವಕರು ಪ್ರೀತಿ ಮಾಡಬಾರದೆಂಬತಾಗಿದೆ. ಇಂತಹ ಘಟನೆಗಳು ಮರಕಳಸದಂತೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ನೂಂದ ಕುಟುಂಬಕ್ಕೆ ಸರಕಾರಿ ಸೂಕ್ತ ಪರಿಹಾರ ನೀಡುವ ಜೊತೆಗೆ ಭದ್ರತೆ ಒದಗಿಸಬೇಕು. ಬಂಧಿಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿರುವ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹನುಮಂತ್ರಾಯ ದೊರೆ, ಮೋಹನ್‌ ಬಲ್ಲಿದವ್‌, ಕ್ರಾಂತಿಕುಮಾರ ರಾಯಚೂರಕರ್‌, ಮಹಾಂತೇಶ ಭವಾನಿ, ರಂಗನಾಥ ಕೊಂಭೀನ್‌, ರಮೇಶ ನಾಯಕ, ಚಂದ್ರ ನಾಯಕ, ನಾಗರಾಜ, ಬಸವರಾಜ ಜಗ್ಲಿ, ಬಸವರಾಜ, ವಲೀ ಖರೇಶಿ, ಮೌನೇಶ, ಚಾಂದಪಾಷ್‌ ಬಡಿಗೇರಾ, ಮಲ್ಲಿಕಾರ್ಜನ್‌ ಸಂಗ್ರಿ ಸೇರಿದಂತೆ ಇತರರು ಇದ್ದರು.
ದೇವದುರ್ಗ: ಹುಬ್ಬಳಿಯ ಇನಾಂ ಮೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಗೇಡು ಹತ್ಯೆ ಖಂಡಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಮಿತಿ ಶುಕ್ರವಾರ ಮೌನ ಪ್ರತಿಭಟನೆ ಮೂಲಕ ಸಿಎಂಗೆ ಬರೆದ ಮನವಿ ಉಪ ತಹಶೀಲ್ದಾರಿಗೆ ಸಲ್ಲಿಸಿದರು. ಹಲವು ಮುಖಂಡರು ಪಾಲ್ಗೊಂಡಿದರು.

Leave a Reply

Your email address will not be published. Required fields are marked *