ಸಿಂಧನೂರು— ಸುವರ್ಣ ಗಿರಿ ವಿರಕ್ತ ಮಠ ಯದ್ದಲದೊಡ್ಡಿ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಇವರುಗಳ ವತಿಯಿಂದ ಹಮ್ಮಿಕೊಂಡಿದ್ದ ಸಿಂಧನೂರು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶರಣಪ್ಪ ಗೋನಾಳ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಅಮರೇಶ ಅಲಬನೂರು ಖಜಾಂಚಿಗಳಾಗಿ ಆಯ್ಕೆಯಾದ ಚಂದ್ರಶೇಖರ ಬೆನ್ನೂರು ಉಪಾಧ್ಯಕ್ಷರುಗಳಾಗಿ ಆಯ್ಕೆಯಾದ ಯಮನಪ್ಪ ಪವಾರ ಹಾಗೂ ದುರುಗೇಶ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದ ವೀರೇಶ ಗಡ್ಡಿಮಾಳ ಚನ್ನಬಸವ ಕಟ್ಟಿಮನಿ ಇವರುಗಳಿಗೆ ಯದ್ದಲದೊಡ್ಡಿ ಸುವರ್ಣ ಗಿರಿ ವಿರಕ್ತಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಮಹಾಲಿಂಗ ಮಹಾಸ್ವಾಮಿಗಳು ಗೌರವಿಸಿ ಶುಭಾಶೀರ್ವಾದ ಪ್ರಾಪ್ತಿಸಿ ಒಳಬಳ್ಳಾರಿ ಲಿಂಗಕ್ಕೆ ಶ್ರೀ ಚನ್ನಬಸವ ಮಹಾಶಿವಯೋಗಿಗಳ ಭಾವಚಿತ್ರಗಳನ್ನು ನೆನಪಿನ ಕಾಣಿಕೆಯಾಗಿ ವಿತರಿಸಿ ಆಶೀರ್ವದಿಸಿದರು. ಶುದ್ಧ ಸಮಾಜ ನಿರ್ಮಾಣವಾಗುವುದರಲ್ಲಿ ಪತ್ರಕರ್ತರ ಪಾತ್ರ ವಿಶೇಷವಾದುದು ಸಮಾಜದಲ್ಲಿನ ಅದೆಷ್ಟೋ ಅನ್ಯಾಯ ಭ್ರಷ್ಟಾಚಾರ ಅವ್ಯವಸ್ಥೆಯ ಬಗ್ಗೆ ವರದಿ ಮಾಡಿ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯ ಮತ್ತು ನಮ್ಮ ಈ ಕಾರುಣ್ಯ ಆಶ್ರಮದ ಸೇವೆಯನ್ನು ನಾಡಿಗಳದೆ ದೇಶದ ಮಟ್ಟಿಗೆ ತೋರಿಸಿಕೊಟ್ಟಿರುವ ಕೀರ್ತಿ ಪತ್ರಕರ್ತರಿಗೆ ಸಲ್ಲುತ್ತದೆ. ಪತ್ರಕರ್ತರ ದಿಟ್ಟತನ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ತಾವುಗಳು ಸಮಾಜದ ಬಹುದೊಡ್ಡ ಆಸೆಯಾಗಿದ್ದೀರಿ. ನಮಗೆ ಕಾರುಣ್ಯಾ ಶ್ರಮಕ್ಕೆ ಸ್ವಂತ ಜಾಗ ಹಾಗೂ ಸರ್ಕಾರದ ಅನುದಾನವನ್ನು ಒದಗಿಸುವಲ್ಲಿ ತಾವುಗಳು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತಿದ್ದೀರಿ. ಯಾವಾಗಲೂ ನಿಮ್ಮಗಳ ಸಹಾಯ ಸಹಕಾರ ಮಾರ್ಗದರ್ಶನವೇ ಕಾರುಣ್ಯ ಕುಟುಂಬದ ಸೇವೆಗೆ ಸ್ಪೂರ್ತಿಯಾಗಿದೆ ಎಂದು ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶರಣಪ್ಪ ಗೋನಾಳ ಮಾತನಾಡಿ ತ್ರಿಗಳ ಆಶೀರ್ವಾದವೇ ನಮಗೆ ಶ್ರೀರಕ್ಷೆ ನಿಸ್ವಾರ್ಥತೆಯ ಪ್ರಾಮಾಣಿಕ ಸೇವೆ ಮಾಡುವಂತಹ ಕಾರುಣ್ಯ ಆಶ್ರಮದ ಸೇವೆಯನ್ನು ಸಾರ್ವಜನಿಕರಿಗೆ ಸರ್ಕಾರಕ್ಕೆ ತಲುಪಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಕಾರುಣ್ಯ ಆಶ್ರಮವು ಸಿಂಧನೂರಿನ ಕರುಣೆಯ ಕಾರುಣ್ಯ ಕುಟುಂಬವಾಗಿರುವುದು ಪ್ರತಿಯೊಬ್ಬ ಪತ್ರಕರ್ತರ ಪ್ರೀತಿಗೆ ಪಾತ್ರವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ. ಜ್ಯೋತಿ. ಮತ್ತು ಆಶ್ರಮದಲ್ಲಿನ ಎಲ್ಲಾ ಹಿರಿಯರು ವಯಸ್ಕರ ಬುದ್ದಿಮಾಂದ್ಯರು ಪತ್ರಕರ್ತರುಗಳಿಗೆ ಶುಭ ಹಾರೈಸಿದರು

Leave a Reply

Your email address will not be published. Required fields are marked *