ಕಂಪ್ಲಿ : ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಸೇವಾ ಹಿರಿತನ ಸುಲಭವಾಗಿ ಗುರುತಿಸಲು ಸಮವಸ್ತ್ರದ ಮೇಲೆ ವಿಶೇಷ ಬ್ಯಾಡ್ಜ್ ಅಳವಡಿಸುವಂತೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಮೋಹನ್‌ ಕುಮಾರ್‌ ದಾನಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಪೊಲೀಸ್‌ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಅಧಿಕಾರಿಗಳ ಅನುಭವ ಮತ್ತು • ಸರ್ಕಾರಕ್ಕೆ ಸೇವಾ ಹಿರಿತನಕ್ಕೆ ಸೂಕ್ತ ಮನ್ನಣೆ ನೀಡುವಂತೆ ಪ್ರಸ್ತಾಪಿಸಿದ್ದಾರೆ.

 

ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಸೇವಾ ಅನುಭವ, ಜವಾಬ್ದಾರಿ ಹಾಗೂ ಹಿರಿತನವನ್ನು ಸಾರ್ವಜನಿಕರು ಮತ್ತು ಇಲಾಖೆಯ ಇತರ ಸಿಬ್ಬಂದಿ ಸುಲಭವಾಗಿ ಗುರುತಿಸುವಂತಾಗಬೇಕು. ಇದರಿಂದ ಪೊಲೀಸ್‌ ಇಲಾಖೆಯಲ್ಲಿ ಶಿಸ್ತು, ಗೌರವ ಹಾಗೂ ಆಡಳಿತಾತ್ಮಕ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಐಪಿಎಸ್ ಅಧಿಕಾರಿಗಳಲ್ಲದ ಪೊಲೀಸ್ ಅಧಿಕಾರಿಗಳ ಸೇವಾ ಅವಧಿಯನ್ನು ಆಧರಿಸಿ ಅವರಿಗೆ ಪ್ರತ್ಯೇಕ ಗುರುತಿನ ಬ್ಯಾಡ್ಜ್‌ಗಳನ್ನು ನೀಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಅದರಂತೆ, 5 ವರ್ಷ ಸೇವೆ ಸಲ್ಲಿಸಿದವರಿಗೆ ‘ಸೀನಿಯರ್’, 10 ವರ್ಷ ಸೇವೆ ಸಲ್ಲಿಸಿದವರಿಗೆ ‘ಸೂಪ‌ರ್ ಸೀನಿಯರ್’ ಹಾಗೂ 15 ವರ್ಷ ಸೇವೆ ಸಲ್ಲಿಸಿದವರಿಗೆ ‘ಮೋಸ್ಟ್ ಸೀನಿಯರ್’ ಎಂಬ ಗುರುತಿನ ಬ್ಯಾಡ್ಜ್‌ಗಳನ್ನು ಸಮವಸ್ತ್ರದ ಮೇಲೆ ಅಳವಡಿಸುವಂತೆ ಸಲಹೆ ನೀಡಿದ್ದಾರೆ.

 

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *

You missed

*ಪೊಲೀಸ್ ಸಮವಸ್ತ್ರಕ್ಕೆ ಸೇವಾ ಹಿರಿತನದ ಬ್ಯಾಡ್ಜ್: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೋಹನ್‌ ಕುಮಾರ್‌ ಪ್ರಸ್ತಾವನೆ* ಕಂಪ್ಲಿ : ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಸೇವಾ ಹಿರಿತನ ಸುಲಭವಾಗಿ ಗುರುತಿಸಲು ಸಮವಸ್ತ್ರದ ಮೇಲೆ ವಿಶೇಷ ಬ್ಯಾಡ್ಜ್ ಅಳವಡಿಸುವಂತೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಮೋಹನ್‌ ಕುಮಾರ್‌ ದಾನಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಪೊಲೀಸ್‌ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಅಧಿಕಾರಿಗಳ ಅನುಭವ ಮತ್ತು • ಸರ್ಕಾರಕ್ಕೆ ಸೇವಾ ಹಿರಿತನಕ್ಕೆ ಸೂಕ್ತ ಮನ್ನಣೆ ನೀಡುವಂತೆ ಪ್ರಸ್ತಾಪಿಸಿದ್ದಾರೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಸೇವಾ ಅನುಭವ, ಜವಾಬ್ದಾರಿ ಹಾಗೂ ಹಿರಿತನವನ್ನು ಸಾರ್ವಜನಿಕರು ಮತ್ತು ಇಲಾಖೆಯ ಇತರ ಸಿಬ್ಬಂದಿ ಸುಲಭವಾಗಿ ಗುರುತಿಸುವಂತಾಗಬೇಕು. ಇದರಿಂದ ಪೊಲೀಸ್‌ ಇಲಾಖೆಯಲ್ಲಿ ಶಿಸ್ತು, ಗೌರವ ಹಾಗೂ ಆಡಳಿತಾತ್ಮಕ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಐಪಿಎಸ್ ಅಧಿಕಾರಿಗಳಲ್ಲದ ಪೊಲೀಸ್ ಅಧಿಕಾರಿಗಳ ಸೇವಾ ಅವಧಿಯನ್ನು ಆಧರಿಸಿ ಅವರಿಗೆ ಪ್ರತ್ಯೇಕ ಗುರುತಿನ ಬ್ಯಾಡ್ಜ್‌ಗಳನ್ನು ನೀಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಅದರಂತೆ, 5 ವರ್ಷ ಸೇವೆ ಸಲ್ಲಿಸಿದವರಿಗೆ ‘ಸೀನಿಯರ್’, 10 ವರ್ಷ ಸೇವೆ ಸಲ್ಲಿಸಿದವರಿಗೆ ‘ಸೂಪ‌ರ್ ಸೀನಿಯರ್’ ಹಾಗೂ 15 ವರ್ಷ ಸೇವೆ ಸಲ್ಲಿಸಿದವರಿಗೆ ‘ಮೋಸ್ಟ್ ಸೀನಿಯರ್’ ಎಂಬ ಗುರುತಿನ ಬ್ಯಾಡ್ಜ್‌ಗಳನ್ನು ಸಮವಸ್ತ್ರದ ಮೇಲೆ ಅಳವಡಿಸುವಂತೆ ಸಲಹೆ ನೀಡಿದ್ದಾರೆ. ವರದಿ : ಜಿಲಾನಸಾಬ್ ಬಡಿಗೇರ್