ಸೋಲಿಡಾಡಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ರಾಜ್ಯ ನಿಯೋಗ ಮಾನ್ಯ ಸಭಾಪತಿ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ (ಕರ್ನಾಟಕ ವಿಧಾನ ಪರಿಷತ್ತು) ಅವರನ್ನು ಭೇಟಿಯಾಗಿ, ಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸೈಬರ್ ವಂಚನೆ ವಿಷಯಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟು ವಿವರವಾದ ಚರ್ಚೆಯನ್ನು ನಡೆಸುವಂತೆ ಹಾಗೂ ಈ ಕುರಿತು ಕಠಿಣ ಮತ್ತು ಪರಿಣಾಮಕಾರಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿರುವ ಅಗತ್ಯವನ್ನು ಮನವಿ ಮೂಲಕ ಒತ್ತಿ ಹೇಳಿದೆವು.
ಇದೇ ಸಂದರ್ಭದಲ್ಲಿ, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಚಿಸಿರುವ ‘ಡಿಜಿಟಲ್ ಸ್ವಾತಂತ್ರ್ಯ’ ಪುಸ್ತಕವನ್ನು ಮಾನ್ಯ ಸಭಾಪತಿಗಳಿಗೆ ವಿನಯಪೂರ್ವಕವಾಗಿ ಸಲ್ಲಿಸಲಾಯಿತು.
ಮಾನ್ಯ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಅವರು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕೈಗೊಂಡಿರುವ ಈ ಸಾಮಾಜಿಕ ಹಿತದ ಕಾರ್ಯವನ್ನು ಶ್ಲಾಘಿಸಿ, ಸೈಬರ್ ಸುರಕ್ಷತೆ ಕುರಿತ ಎಲ್ಲಾ ರಚನಾತ್ಮಕ ಪ್ರಯತ್ನಗಳಿಗೆ ತಮ್ಮ ಪೂರ್ಣ ಸಹಕಾರವನ್ನು ನೀಡುವುದಾಗಿ ವಿಶ್ವಾಸ ನೀಡಿದರು.

