ಸರ್ಕಾರಿ ಪದವಿಪೂರ್ವ ಕಾಲೇಜು ಅಲಬನೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿಂಧನೂರು ನೊಬೆಲ್ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಪರಶುರಾಮ ಮಲ್ಲಾಪುರ ಅವರು “ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ “ಪ್ರಕೃತಿಯೇ ನಮ್ಮ ಗುರು” ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಅದು ಮಾನವನ ಆಸೆಗಳನ್ನ ಪೂರೈಸುತ್ತದೆ ವಿನಃ ದುರಾಸೆಗಳನ್ನಲ್ಲ ..ಆದ್ದರಿಂದ “ಪರಿಸರವನ್ನು ನಾವು ಪ್ರೀತಿಸಿದರೆ, ಪರಿಸರವು ನಮ್ಮನ್ನು ಪ್ರೀತಿಸುತ್ತದೆ” ಎಂದು ಎನ್ ಎಸ್ ಎಸ್ ಶಿಬಿರಾರ್ಥಿಗಳಿಗೆ ತಿಳಿಸಿದರು. ಈ ದಿನದ ಕಾರ್ಯಕ್ರಮದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಮೌನೇಶ ಬಳಗನೂರು ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಕ್ಸ್ಫರ್ಡ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ಶ್ರೇಷ್ಠಿ, ವಿಜಡಮ್ ಕಾಲೇಜಿನ ಶ್ರೀ ಆರ್ ಅನಿಲಕುಮಾರ, ಮಾಡಶಿರಿವಾರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಕುಲಕರ್ಣಿ, ಶ್ರೀ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ ರಾಮರೆಡ್ಡಿ ಹುಡಾ ಹಾಗೂ ಕಾಲೇಜಿನ ಉಪನ್ಯಾಸಕರಾದ ಕೆ.ಮಹಿಬೂಬ್, ಪಂಪಾಪತಿ ಕಲ್ಮಂಗಿ, ಶಂಕರಗೌಡ ಬೂತಲದಿನ್ನಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಯಾದ ಬಿ.ರವಿಕುಮಾರ ಸಾಸಲಮರಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಿಬಿರಾರ್ಥಿ ಜೆ. ಪುಷ್ಪಾ ಬೆಳಗುರ್ಕಿ ನಿರೂಪಿಸಿದರೆ, ಮಮತಾ ಬೆಳಗುರ್ಕಿ ಸ್ವಾಗತಿಸಿದರು ಹಾಗೂ ವೆಂಕಟೇಶ ಹರೇಟನೂರು ವಂದಿಸಿದರು.

