ಸಿಂಧನೂರು: ಡಿ.02
ಮಾನ್ಯ ಪ್ರಧಾನ ಕಾರ್ಯದರ್ಶಿ ಯವರಿಂದ ನೂತನ ಮಾನವ ಸಂಪನ್ಮೂಲ ನೀತಿ ತಕ್ಷಣ ಹಿಂಪಡೆಯಲು ಸೂಕ್ತ ಕ್ರಮವಹಿಸಬೇಕು ಎಂದು ಎನ್.ಹೆಚ್.ಎಮ್ ಅಡಿಯಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಒತ್ತಾಯಿಸಿದರು
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಸ್ತಾಪಿಸಿರುವ ನೂತನ ಮಾನವ ಸಂಪನ್ಮೂಲ (HR) ನೀತಿಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ಇಂದು ಗುತ್ತಿಗೆ ನೌಕರರು ಆರೋಗ್ಯ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ ಸಂಘಗಳು (KSHCOEA-BMS) ವಿಧಾನಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ ರವರಿಗೆ ಮನವಿ ಪತ್ರ ನೀಡಿ ನೌಕರ ಸಹಾಯಕ್ಕೆ ಬರಲು ಒತ್ತಾಯಿಸಿದರು
ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ದಡಿಯಲ್ಲಿ ಸುಮಾರು 30 ಸಾವಿರ ಗುತ್ತಿಗೆ ನೌಕರರು 18-20 ವರ್ಷಗಳಿಂದ ಕಡಿಮೆ ವೇತನದಲ್ಲಿ ಯಾವೂದೆ ಸರ್ಕಾರಿ ನೌಕರರಿಗೆ ಸಿಗುವ ಭತ್ಯೆಗಳನ್ನು ಪಡೆಯದೆ ಸೇವೆ ಸಲ್ಲಿಸುತ್ತಿದ್ದು, ಹೊಸ ನೀತಿಯಡಿ ಕಡ್ಡಾಯ ವರ್ಗಾವಣೆ ಮತ್ತು ಮರು ನೇಮಕಾತಿ ಮಾಡಲಿರುವುದು ನೌಕರರ ಭವಿಷ್ಯಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ದಶಕಗಳ ಸೇವೆಯ ನಂತರವೂ ನೌಕರಿಯ ಭರವಸೆ ನೀಡದೇ, ಮರು ನೇಮಕಾತಿಯ
ಹೆಸರಿನಲ್ಲಿ ಮನೆಗೆ ಕಳುಹಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೌಕರರ ನ್ಯಾಯಯುತ ಬೇಡಿಕೆಗಳಿಗೆ , ಹಿತಾಸಕ್ತಿಗೆ ಧಕ್ಕೆಯಾಗುವ ಕ್ರಮ ಕೈಗೊಳ್ಳದಂತೆ ಕ್ರಮಕ್ಕಾಗಿ ತಮ್ಮ ಬೆಂಬಲ ಅವಶ್ಯಕ ವಿದೆ ಕಾರಣ ಬಡವರ ಬಂಧು ಮತ್ತ ಅನ್ಯಾಯದ ವಿರುದ್ಧ ಯಾವಾಗಲೂ ಧ್ವನಿ ಎತ್ತುವ ತಮ್ಮಗಳ ಬೆಂಬಲ ನಾವು ಬಯಸುತ್ತೇವೆ ಎಂದು ಸ್ಥಳಿಯ ಮುಖಂಡರಾದ ಎಫ್.ಎ.ಹಣಗಿ,ತಿಪ್ಪೆಸ್ವಾಮಿ,ಡಾ.ಮೌನೇಶ ಪೂಜಾರ, ಹಾಗೂ ತ್ರಿವೇಣಿ ಭಂಡಾರಿ ಯವರು ಒತ್ತಾಯಿಸಿದರು
ವಿಧಾನ ಪರಿಷತ್ ಸದಸ್ಯರಾದ ಬಸವನಗೌಡ ಬಾದರ್ಲಿ ಮಾತನಾಡಿ ನಿಮ್ಮ ಕಾರ್ಯಕ್ರಮವು ಬಹಳ ದಿನಗಳಿಂದ ನಡೆಯುತ್ತಿದ್ದು ಇದರ ಸಾಧನೆಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಮತ್ತು ಸರ್ಕಾರದ ಮುಖ್ಯಸ್ಥರ ರಿಗೆ ಪತ್ರ ಮುಖೇನ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಆಗುತ್ತಿರುವ ಅನ್ಯಾಯಕ್ಕೆ ಕಾಲಮಿತಿಯೊಳಗೆ ನ್ಯಾ ಕೊಡಿಸುವ ಕಾರ್ಯ ಮಾಡಲಾಗುವುದು ಯಾವೂದೆ ಕಾರಣಕ್ಕೂ ವಿಚಲಿತರಾಗದೆ ಪ್ರಾಮಾಣಿಕವಾಗಿ ನಿಮ್ಮ ನಿಮ್ಮ ಕಾರ್ಯ ನಿರ್ವಹಣೆಗೆ ಮುಂದಾಗಿ
ಇಲ್ಲಿಯವರೆಗೆ ನಿಮಗೆಲ್ಲ ಆದ ಅನ್ಯಾಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು
ಶೇಕಡಾ 2% ಮಾತ್ರ ಗುತ್ತಿಗೆ ಸಿಬ್ಬಂದಿಗಳು ವರ್ಗಾವಣೆ ಬಯಸ್ಸಿದ್ದರೂ ಪ್ರಧಾನ ಕಾರ್ಯದರ್ಶಿಗಳು ಇದಕ್ಕೆ ಪರ್ಯಾಯ ಮಾರ್ಗ ಎಂಬಂತೆ ಎಲ್ಲಾ ಸಿಬ್ಬಂದಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಪುನಃ ನೇಮಕಾತಿ ಮಾಡಲು ಅವಕಾಶ ಇರುವಂತೆ ಪ್ರಸ್ತಾವನೆ ಸಲ್ಲಿಸಲು ಇಲಾಖೆಯಲ್ಲಿ ಒತ್ತಡ ತಂದಿರುವುದು ವಿಷಾದನೀಯ ಅವರ ಕಛೇರಿಯ ಪತ್ರದಲ್ಲಿ ಈ ವಿಷಯ ಎದ್ದು ಕಂಡಿರುತ್ತದೆ ಮತ್ತು ನೌಕರರು ನಿರ್ವಹಿಸುತ್ತಿರುವ ಅದೆ ಹುದ್ದೆಯಲ್ಲಿ ಮುಂದುವರೆಸುವ ಯಾವೂದೆ ಆದೇಶ/ಆಶ್ವಾಸನೆ ವಿಲ್ಲದೆ ಏಕಾ ಏಕಿ ತೆಗೆದುಹಾಕುವುದು ಸಮಂಜಸವಲ್ಲ ಮಾನ್ಯ ಆರೋಗ್ಯ ಸಚಿವರಿಗೆ ಖುದ್ದು ದೂರವಾಣಿ ಅಥವಾ ಭೇಟಿ ಮಾಡಿ ಪ್ರಸ್ತುತ ಆರೋಗ್ಯ ಇಲಾಖೆಯು ಉತ್ತಮವಾಗಿ ಸೇವೆ ನೀಡುತ್ತಿದ್ದು ದೇಶದಲ್ಲೇ ಆರೋಗ್ಯ ಸೇವೆ ನೀಡುವಲ್ಲಿ ಒಳ್ಳೆಯ ಸ್ಥಾನದಲ್ಲಿದೆ. ಇನ್ನೂ ಉತ್ತಮ ಸ್ಥಾನಕ್ಕೆ ಏರಲು ಎಲ್ಲರೂ ಕೈ ಜೋಡಿಸಲು ನಿಮ್ಮ ಪರವಾಗಿ ದ್ವನಿಯಾಗಿ ವಿವರಿಸಲಾಗುವುದು ಮತ್ತು ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಲ್ಲಿಯೂ ಸಿಬ್ಬಂದಿಗಳಿಗೆ ಮಾರಕ ಆಗುವಂತಹ ಯಾವುದೇ ವರದಿಗಳನ್ನು ಸರ್ಕಾರ ಒಪ್ಪಬಾರದು ಎಂದು ಕೋರಲಾಗುವುದು ಹಾಗೂ ಸರ್ಕಾರದ ಹೆಸರಿಗೆಮಸಿ ಬಳೆಯುವ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆಯೂ ಸಹ ಕೇಳಿಕೊಳ್ಳುತ್ತೇನೆ ಎಙದರು
ಸಿಬ್ಬಂದಿಗಳಿಗೆ ಮಾರಕ ಆಗುವಂತಹ ಹಾಗೂ ಸಿಬ್ಬಂದಿಗಳನ್ನು ಬೀದಿಗೆ ತಳ್ಳುವಂತಹ ಯಾವುದೇ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸದೆ ಬಡ ಮತ್ತು ಹಲವು ವರ್ಷಗಳಿಂದ ಸರ್ಕಾರಗಳ ಜೊತೆಗೆ ಹೆಲಿಗೆ ಹೆಗಲು ನೀಡಿ ಆರೋಗ್ಯ ಇಲಾಖೆಯನ್ನು ಸದ್ರಡಗೊಳಿಸಿದ ಇವರಿಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಮಾನ್ಯ ಉಪಮುಖ್ಯಂತ್ರಿಗಳು ಹಾಗೂ ಆರೋಗ್ಯ ಸಚಿವರು ನ್ಯಾಯ ವದಗಿಸಲು ಪತ್ರ ಮುಖೇನ ಮತ್ತು ಶೂನ್ಯ ವೇಳೆಯಲ್ಲಿ ಪ್ರಶ್ನೆಗಳನ್ನು ಚರ್ಚೆಗೆ ಎತ್ತಲು ಪ್ರಯತ್ನಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ನೌಕರರಾದಡಾ.ಮೌನೇಶ.ಪುಜಾರಿ ಆಯುಶ್ ವೈದ್ಯಾಧಿಕಾರಿಗಳು , ತಾಲೂಕಾ ವ್ಯವಸ್ಥಾಪಕಿ ಕು.ತ್ರಿವೇಣಿ, ತಿಪ್ಪೇರುದ್ರಪ್ಪ, ಸುಮಿತ್ರಾ ಹಿರೆಮಠ, ಅಕೌಂಟ್ ಅಸಿಸ್ಟಂಟ್ ದುರಗೇಶ , ಆರೋಗ್ಯ ಸಹಾಯಕಿ ಕು.ದುರ್ಗಾ, ಹಮೀದ,ಯಮನೂರಪ್ಪ,ಸುರೇಶ್ ರೆಡ್ಡಿ , ಸಂಗಮೇಶ ಹಾಗೂ ಪ್ರಸಾದ,ಹನುಮಂತಪ್ಪ , ಈರಣ್ಣ,ಮಲ್ಲಪ್ಪ, ತ್ರೇಜಾ,ರಾಜೇಶ್ವರಿ ದೇವೇಂದ್ರಪ್ಪ ಹಾಜರಿದ್ದರು

