ಮನವಿ ಬಾಷುಮಿಯಾ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಅಭಿಯಾನದ ಪ್ರಯುಕ್ತ ತಾಲ್ಲೂಕ ಆಸ್ಪತ್ರೆ ಮಾನ್ವಿಯ ಐ.ಸಿ.ಟಿ.ಸಿ. ಕೌನ್ಸಿಲರ್ ಆಗಿರುವ ಶ್ರೀ ರಾಜೇಶ್ವರಿ ಅವರು ಉದ್ಘಾಟಕರಾಗಿ ಆಗಮಿಸಿ ಏಡ್ಸ್ ಹರಡುವಿಕೆ, ಮುನ್ನೆಚ್ಚರಿಕೆ ಮತ್ತು ಪರಿಣಾಮಗಳ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು. ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಜೆ.ಎಲ್. ಈರಣ್ಣ ಮಾತಾಡಿ ಏಡ್ಸ್ ಮತ್ತು ಕ್ಯಾನ್ಸರ್ ಸಮಾಜದ ಮಾರಕ ರೋಗಗಳು, ಇದರ ಮುನ್ನೆಚ್ಚರಿಕೆ ವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಸಂಚಾಲಕರಾ ಪ್ರಾಸ್ತಾವಿಕ ನುಡಿ ಸೈಯದ್‌ ಮುಜೀಬ್ ಅಹ್ಮದ್ ಮಾತಾಡಿ ಇತ್ತೀಚಿನ ದಿನಗಳಲ್ಲಿ ಏಡ್ಸ್ ಅತಿಹೆಚ್ಚು ಹರಡುತ್ತಿರುವುದು ಯುವಜನರಲ್ಲಿ ಆದ್ದರಿಂದ ಈ ಜಾಗೃತಿ ಕಾರ್ಯಕ್ರಮವು ಕಾಲೇಜಿನ ವಿದ್ಯಾರ್ಥಿಗಳಿಗೆ ಅತ್ಯಾವಶ್ಯಕ ಎಂದರು. ರೆಡ್ ರಿಬ್ಬನ್ ಕ್ಲಬ್ ಸಂಚಾಲಕರಾದ ಚಂದ್ರು ವಂದಿಸಿದರು. ಈ ಸಂಧರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಕಾಲೇಜಿನ ಸಂಸ್ಕೃತಿಕಾ ಸಂಚಾಲಕರಾದ ಚನ್ನಬಸವ, ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *