ಅಲಬನೂರು, ದಿದ್ದಿಗಿ, ಜಾಲಿಹಾಳ, ಪಗಡದಿನ್ನಿ, ಬಾದರ್ಲಿ, ಮಾಡಸಿರವಾರ, ರೌಡಕುಂದ, ಮುಕ್ಕುಂದ,
ಜವಳಗೇರಾ, ಆಯನೂರು, ಸಾಲಗುಂದ, ಗ್ರಾಮಗಳಿಗೆ ಸಿಂಧನೂರು ತಾಲೂಕಿನ ಇತಿಹಾಸದಲ್ಲಿ ಸರ್ಕಾರ ಮೊಟ್ಟಮೊದಲ ಬಾರಿಗೆ 11 ಪಬ್ಲಿಕ್ ಶಾಲೆಗಳನ್ನು
ಮಂಜೂರು ಮಾಡಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನೂತನವಾಗಿ ಪ್ರಾರಂಭವಾದ ಶಾಸಕರ ಕಚೇರಿಯಲ್ಲಿ ಇಂದು ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಪ್ರತಿವರ್ಷ 15 ಕೋಟಿ ಅನುದಾನ ನೀಡುತ್ತಿದೆ. ಸಿಂಧನೂರು ತಾಲೂಕಿಗೆ
ಈ ವರ್ಷ 6 ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
1 ನೇ ತರಗತಿಯಿಂದ 12ನೇ ತರಗತಿಯವರೆಗೆ ಶಿಕ್ಷಣ ನೀಡುವ ಪಬ್ಲಿಕ್ ಶಾಲೆಯಲ್ಲಿ ಒಟ್ಟು 12 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಒಂದೇ ಸೂರಿನ ಅಡಿಯಲ್ಲಿ ಪಬ್ಲಿಕ್ ಶಾಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.
ಒಂದು ಪಬ್ಲಿಕ್ ಶಾಲೆಗೆ 6 ರಿಂದ 7 ಕೋಟಿ ತನಕ ಅನುದಾನ ನೀಡಲಾಗಿದೆ. ತಾಲೂಕಿನ ಅಲಬನೂರು, ಬಾದರ್ಲಿ, ಪಗಡದಿನ್ನಿ, ದಿದ್ದಿಗಿ, ಜಾಲಿಹಾಳ, 6 ಪಬ್ಲಿಕ್ ಶಾಲೆಗಳ ಸೇರಿದಂತೆ ತಾಲೂಕಿಗೆ ಒಟ್ಟು ಸರ್ಕಾರ 11 ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿದೆ. ಅಲ್ಲದೆ ತಾಲೂಕಿನಲ್ಲಿ ಈಗಾಗಲೇ 60 ಎಲ್.ಕೆಜಿ, ಯುಕೆಜಿ, ಸಹ ಆರಂಭವಾಗಿದೆ. ರಾಜ್ಯದಾದ್ಯಂತ ಪಬ್ಲಿಕ್ ಶಾಲೆಗಳಿಗೆ ಮೊದಲನೇ ವರ್ಷ 750 ಕೋಟಿ, ಎರಡನೇ ವರ್ಷವು ಸಹ 750 ಕೋಟಿ ಒಟ್ಟು 1500 ಕೋಟಿ ವೆಚ್ಚದಲ್ಲಿ ಪಬ್ಲಿಕ್ ಶಾಲೆಗಳ ಕಾಮಗಾರಿ ಪ್ರಾರಂಭ ಮಾಡಲಾಗಿದೆಂದರು.
ಈ ವೇಳೆ: ಪ್ರಭುರಾಜ, ವಕೀಲರಾದ ಖಾಜಿ ಮಲ್ಲಿಕ್, ಮರಿಯಪ್ಪ ಧಡೇಸೂಗೂರು ಇದ್ದರು.

