ಮಸ್ಕಿ : ಇಂದು ದಿನಾಂಕ 01/12/2025 ರಂದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕ ತಹಶೀಲ್ದಾರ್ ರವರಿಗೆ ಮಸ್ಕಿ ತಾಲೂಕಿನಲ್ಲಿ ತೊಗರಿ ಖರೀದಿ ಕೇಂದ್ರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಖರೀದಿ ಕೇಂದ್ರಗಳನ್ನು ತೆರೆದು ಖರೀದಿಸಬೇಕು
ತಾಲೂಕಿನಲ್ಲಿ ಕೊರತೆ ಇರುವ ಇಲಾಖೆಗಳು ಮತ್ತು ಸಿಬ್ಬಂದಿಗಳ ಭರ್ತಿಗೆ ಕ್ರಮ ವಹಿಸುವಂತೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿ ಸಾಲ ವಸತಿಗಾಗಿ ಲೀಗಲ್ ನೋಟಿಸ್ ಕಳಿಸುವುದು ನ್ಯಾಯಾಲಯಗಳಲ್ಲಿ ದಾವೆ ಕೊಡುವುದನ್ನು ಮುಂದುವರಿಸಿದ್ದಾರೆ ಸತತ ಬರಗಾಲ ಈ ವರ್ಷ ಅತಿವೃಷ್ಟಿ ಅಲ್ಲದೆ ಮಾರುಕಟ್ಟೆಯಲ್ಲಿ ರೈತರ ಯಾವುದೇ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕೂಡ ಸಿಗುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಸಾಲಮರು ಪಾವತಿಸುವುದು ಹೇಗೆ ಕಾರಣಕ್ಕಾಗಿ ಬ್ಯಾಂಕುಗಳಿಗೆ ತಮ್ಮ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದು ರೈತರ ನೆರವಿಗೆ ಧಾವಿಸಬೇಕೆಂದು ಇನ್ನಿತರ ವಿಷಯಗಳ ಕುರಿತು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಮರಳಿ ಸುಲ್ತಾನಪುರ,
ಜಿಲ್ಲಾಧ್ಯಕ್ಷರಾದ ರಾಮಯ್ಯ ಜವಳಗೆರೆ,
ಮಸ್ಕಿ ತಾಲೂಕ ಅಧ್ಯಕ್ಷರಾದ ವೆಂಕಟೇಶ ಸಂತೆಕೆಲ್ಲೂರು,
ಜಿಲ್ಲಾ ಕಾರ್ಯಾಧ್ಯಕ್ಷರಾದ ವೆಂಕಟೇಶ ರತ್ನಾಪುರ ಹಟ್ಟಿ,
ಮಸ್ಕಿ ತಾಲೂಕು ಗೌರವಾಧ್ಯಕ್ಷರಾದ ಲಾಲಸಾಬ ನಾಡಗೌಡ,
ಸಿಂಧನೂರು ತಾಲೂಕು ಗೌರವಾಧ್ಯಕ್ಷರಾದ ಪರಯ್ಯ ಸ್ವಾಮಿ,
ಸೇರಿದಂತೆ ಹಲವು ಗ್ರಾಮಗಳ ರೈತ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.

