1000 ಎಸ್ಸಿ–ಎಸ್ಟಿ ಮತ್ತು ಬಿಸಿಎಂ ವಸತಿನಿಲಯಗಳನ್ನು ಘೋಷಿಸಿ KSN.
ಬಿಸಿಎಂ ವಸತಿನಿಲಯಗಳ ಅರ್ಜಿ ಹಾಗೂ ಸೀಟುಗಳ ಕೊರತೆಯಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟದ ವಿಷಯವು ಮಾಧ್ಯಮಗಳ ಮೂಲಕ ಮಾನ್ಯ ಮುಖ್ಯ ಮಂತ್ರಿ ಯವರಿಗೆ ತಿಳಿದು ಬಂದಿದೆ ಎಂದು ನಾನು ಭಾವಿಸಿರುವೆ.
ನಿಮ್ಮ ಐದು ಗ್ಯಾರೆಂಟಿಗಳ ಜೊತೆಗೆ, ನಾಡಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಹಿತಕ್ಕಾಗಿ—ಅವರ ಭವ್ಯ ಬದುಕಿಗೆ ಬೆಳಕಾಗುವಂತೆ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ವಿದ್ಯಾರ್ಥಿಗಳಿಗೆ ನಿಮ್ಮ ಭರವಸೆಯ ಮತ್ತೊಂದು ಗ್ಯಾರೆಂಟಿಯ ಅಗತ್ಯವಿದೆ..!
ತಾವು ಈ ಚಳಿಗಾಲದ ಅಧಿವೇಶನದಲ್ಲೇ ಬೇಡಿಕೆಗೆ ಅನುಗುಣವಾಗಿ, ರಾಜ್ಯದಾದಂತ ಜಿಲ್ಲಾವಾರು ಹೆಚ್ಚುವರಿ ಒಂದು ಸಾವಿರ (1000) ಎಸ್ಸಿ–ಎಸ್ಟಿ ಮತ್ತು ಬಿಸಿಎಂ ವಸತಿನಿಲಯಗಳನ್ನು ಸ್ಥಾಪನೆಯನ್ನು ಘೋಷಿಸಿ—ನೊಂದವರ, ಬಡವರ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ದಿ ಪರ ನಾಯಕನೆಂದು ನಾಡಿಗೆ ಮತ್ತೊಮ್ಮೆ ನಿರೂಪಿಸಬೇಕೆಂದು ವಿನಂತಿಸುತ್ತೇನೆ.
ಮನೆಯಲ್ಲೇ ತುತ್ತಿನ ಅನ್ನಕ್ಕೂ ಕೊರತೆಯಿರುವ ಅನೇಕ ಮಕ್ಕಳು ಶಿಕ್ಷಣಕ್ಕಾಗಿ ವಸತಿನಿಲಯಗಳನ್ನು ಆಶ್ರಯತಾಣವೆಂದು ನಂಬಿಕೊಂಡಿದ್ದಾರೆ… ಈ ಸತ್ಯವನ್ನು ತಾವು ಮತ್ತೊಮ್ಮೆ ಮನನ ಮಾಡಿಕೊಂಡು, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಧೈರ್ಯದ ನಿರ್ಧಾರ ಕೈಗೊಳ್ಳಬೇಕಾಗಿ ವಿನಯಪೂರ್ವಕ ಮನವಿ.ಬಡ ಮಕ್ಕಳ ಪಾಲಕರ ಸ್ಥಾನದಲ್ಲಿ ನಿಂತು, ತಮ್ಮಲ್ಲಿ ಕೈ ಮುಗಿದು ಪ್ರಾರ್ಥಿಸಿಕೊಳ್ಳುತ್ತೇನೆ.

