ಲಿಂಗಸಗೂರು.ಡಿ.1:
ತಾಲೂಕಿನ ಬಸ್ ನಿಲ್ದಾಣ ಹಾಗೂ ಬಸ್ ಡಿಪೋ ಗೆ ಭೇಟಿ ನೀಡಿ ವೀಕ್ಷಣೆ ಮಾಡಿ
ಬಸ್ ಘಟಕ ಹಾಗೂ ನಿಲ್ದಾಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ಇಲ್ಲಿಯ ಬಸ್ ನಿಲ್ದಾಣ, ಶೌಚಾಲಯ ಹಾಗೂ ಬಸ್ ನಿಲ್ದಾಣದ ಸುತ್ತ ಕಂಪೌಂಡ್ ಗೋಡೆಗೆ ಕಾಂಪ್ಲೆಕ್ಸ್ ನಿರ್ಮಿಸಿ ಇಲಾಖೆಗೆ ಹೆಚ್ಚಿನ ಆದಾಯ ಬರುವಂತೆ ಕ್ರಮವಹಿಸಿ, ಶಕ್ತಿ ಯೋಜನೆಯ ಸಾವಲಂಬಿ ಮಹಿಳೆಯರ ಪ್ರಯಾಣದಿಂದ ಬದುಕು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದೆ. ಲಿಂಗಸಗೂರು ಘಟಕಕ್ಕೆ ಹೊಸ ಬಸ್ ಬಿಡಲು ಕ್ರಮವಹಿಸಲಾಗುವುದು ಎಂದು ಸಾರಿಗೆ ನಿಗಮದ ಅಧ್ಯಕ್ಷರಾದ ಅರುಣ್ ಕುಮಾರ್ ಪಾಟೀಲ್ ಹೇಳಿದರು.
ಅವರು ಬಸ್ ನಿಲ್ದಾಣವನ್ನು ವೀಕ್ಷಣೆ ಮಾಡಿ ವಿದ್ಯಾರ್ಥಿಗಳ ಮತ್ತು ಪ್ರಯಾಣಿಕರ ಜೊತೆ ಸಮಾಲೋಚನೆ ಮಾಡಿ ಸರಿಯಾದ ರೀತಿ ಸಂಚಾರ ಸುಗಮಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಅತಿ ದೊಡ್ಡ ಘಟಕವೆಂದು ಹೆಸರುವಾಸಿ ಯಾಗಿರುವ ಘಟಕವಾಗಿದ್ದು, ತಾಲೂಕಿನಲ್ಲಿ 133 ಸಂಚಾರ ರೂಟ್ ಗಳಲ್ಲಿ ಎಲ್ಲಾ ರೂಟ್ ಗಳ ಬಸ್ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಸರಿಯಾದ ಸಮಯಕ್ಕೆ ಬಸ್ ಬಿಡುವ ಹೊಸ ಪ್ರಯತ್ನಕ್ಕೆ ಇಲಾಖೆ ಮುಂದಾಗಿದ್ದು, ಲಿಂಗಸಗೂರು ಘಟಕಕ್ಕೆ ಬೇಡಿಕೆಯಂತೆ ಹೊಸ
ಬಸುಗಳನ್ನು ಖರೀದಿಸಲು ಸರ್ಕಾರದ ಪ್ರಸ್ತಾವನೆಯಲ್ಲಿ ಈಗಾಗಲೇ 600 ಬಸ್ಸು ಗಳ ಖರೀದಿಗೆ ಆಡಳಿತ ಅನುಮೋದನೆ ನೀಡಿದ್ದು ಇಲಾಖೆಗೆ ಹೊಸಬಸ್ಸು ಗಳು ಬಂದ ತಕ್ಷಣ ತಾಲೂಕಿಗೆ ಕಳಿಸಲು ಕ್ರಮವಹಿಸುತ್ತೇವೆ ಎಂದು ಹೇಳಿದರು. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆಯಿಂದ, ಮಹಿಳೆಯರ ಸಾವಲಂಬಿ ಬದುಕಿಗೆ ದಾರಿ ದೀಪವಾಗಿದ್ದು ಶಕ್ತಿ ಯೋಜನೆಗೆ ದೇಶಾದ್ಯಂತ ಉತ್ತಮ ಪ್ರಶಂಸೆ ಬಂದಿದ್ದು.. ಮಾದರಿ ಯೋಜನೆಯಾಗಿ ಬೇರೆ ಬೇರೆ ರಾಜ್ಯದ ಸರ್ಕಾರಗಳು ಇದರ ಅನುಷ್ಠಾನವನ್ನು ಪ್ರಶಂಸೆ ಮಾಡುತ್ತಿದ್ದಾರೆ. ತಾಲೂಕಿನ ಬಸ್ ನಿಲ್ದಾಣ ಜಾಗ ದೊಡ್ಡದಾಗಿದ್ದು ಶೌಚಾಲಯ ಸ್ವಲ್ಪ ಚಿಕ್ಕದಾಗಿದ್ದು ಅದನ್ನು ತೀವ್ರವಾಗಿ ಹೊಸ ಶೌಚಾಲಯ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು. ಲಿಂಗಸಗೂರು ಪಟ್ಟಣದಿಂದ ದೊಡ್ಡ ದೊಡ್ಡ ನಗರಗಳಿಗೆ ಸಂಚರಿಸಲು ನೂತನ ಸಿಸ್ಟರ್ ಬಸ್ ನೀಡಲು ಮಾಜಿ ಶಾಸಕ ಡಿ.ಎಸ್ ಹುಲಗೇರಿ ಯವರು ಸರ್ಕಾರಕ್ಕೆ ಪತ್ರ ಬರೆದಿದ್ದು, ಆದಷ್ಟು ಬೇಗನೆ ಹೊಸ ಬಸ್ಸು ಗಳನ್ನು ನೀಡಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಮಾಡುವ ರೀತಿ ಕ್ರಮ ವಹಿಸಲಾಗುವುದು, ಪ್ರಯಾಣಿಕರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ಮತ್ತು ತಮ್ಮ ಗ್ರಾಮಕ್ಕೆ ಹೊರಡಲು ಹಳೆ ಬಸ್ ಗಳನ್ನು ತೆಗೆದು ಹೊಸ ಬಸ್ಸು ಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಸ್ಟೇಜ್ ಒಂದರಿಂದ ಇನ್ನೊಂದು ಸ್ಟೇಜ್ ಬಸ್ಸಿನ ದರ ದುಬಾರಿಯಾಗಿದ್ದು ಪ್ರಯಾಣಿಸುವ ದರದಲ್ಲಿ ಹೆಚ್ಚು ಕಾಣುತ್ತಿದ್ದು, ಬೇರೆ ಮೂರು ನಿಗಮದಲ್ಲಿ ಹೋಲಿಸಿದರೆ ಕಲ್ಯಾಣ ಕರ್ನಾಟಕದ ಸಾರಿಗೆ ನಿಗಮದ ದರದಲ್ಲಿ ವ್ಯತ್ಯಾಸವಿದ್ದು ನಮ್ಮ ಕಲ್ಯಾಣ ಕರ್ನಾಟಕ ಪ್ರಯಾಣದ ದರವನ್ನು ಪರಿಶೀಲಿಸಲು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ.? ಉತ್ತರಿಸಿದ ಸಾರಿಗೆ ನಿಗಮದ ಅಧ್ಯಕ್ಷರು ಇದನ್ನು ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ್, ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ವೆಂಕಟೇಶ್ ಆರ್ ಗುತ್ತೇದ್ದಾರ್, ಎಪಿಎಂಸಿ ಅಧ್ಯಕ್ಷ ಅಮರೇಶ್ ಹೆಸರೂರ, ಪ್ರಚಾರ ಸಮಿತಿ ಅಧ್ಯಕ್ಷ ಮೊಹಮ್ಮದ್ ರಫಿ, ಮುಖಂಡರಾದ ಬಾಬಾಖಾಜಿ, ಖಾಜಾ ಹುಸೇನ್ ಪುಲಾವಲೆ, ಉಮೇಶ ಹುನುಕುಂಟ ಗದ್ದನಗೌಡ ನಂದಿಹಾಳ್, ಅಮರೇಶ್ ಮಡ್ಡಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.

