ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ 49 ನೇ ಜನ್ಮದಿನದ ಅಂಗವಾಗಿ ನಮ್ಮ ನೀರು, ನಮ್ಮ ಹಕ್ಕು, ನಮ್ಮ ಆರೋಗ್ಯ, ನವಲಿ ಜಲಾಶಯ, ತಿಂಥಿಣಿ ಬ್ರಿಜ್ ಜಲಾಶಯ, ಏಮ್ಸ್ ಆಸ್ಪತ್ರೆಯ ಸಂಕಲ್ಪಕ್ಕಾಗಿ ಜು.14 ರಂದು ಸಿರವಾರ ತಾಲೂಕಿನ ಕವಿತಾಳದಲ್ಲಿ ಸಂಕಲ್ಪ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಎನ್. ಸಾಮಾಜಿಕ ಜನ ಕಲ್ಯಾಣ ಸಮಿತಿಯ ಮುಖಂಡರಾದ ನಿರುಪಾದಿ ಸುಕಾಲಪೇಟೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇದು ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ರೈತರ ಬದುಕಿಗಾಗಿ, ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ, ನಮ್ಮ ಮೂರು ಸಂಕಲ್ಪಗಳಲ್ಲಿ ಮೊದಲನೆಯದ್ದು, ನವಲಿ ಡ್ಯಾಂ ನಿರ್ಮಾಣ, ಟಿಬಿ ಡ್ಯಾಂನ ಹೂಳು ತೆಗೆಯುವುದು, ಎರಡನೇಯದ್ದು, ತಿಂಥಿಣಿ ಬ್ರಿಜ್ ಜಲಾಶಯ ನಿರ್ಮಾಣ, ಮೂರನೇ ಸಂಕಲ್ಪ ಏಮ್ಸ್ ಆಸ್ಪತ್ರೆ ರಾಯಚೂರಿನಲ್ಲಿ ನಿರ್ಮಾಣ
ಈ ಸಂಕಲ್ಪ ಸಮಾಗಮ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ ಇದು ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳ ಜನರ ಮೂಲಭೂತ ಹಕ್ಕುಗಳಿಗಾಗಿ ನಡೆಯುತ್ತಿರುವ ಪಕ್ಷಾತೀತ ಜನಾಂದೋಲನ. ನೀರು, ಆರೋಗ್ಯ, ಅಭಿವೃದ್ಧಿ, ಉದ್ಯೋಗ, ರೈತರ ಬದುಕಿಗೆ ಆಸರೆ, ಯುವಕರಿಗೆ ಭವಿಷ್ಯ ನಿರ್ಮಾಣ, ಮಹಾಸಂಕಲ್ಪದ ಉದ್ದೇಶ ಎಂದರು.
ಈ ಕಾರ್ಯಕ್ರಮದ ಉದ್ಘಾಟನೆ ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಪರಮ ಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ, ಅಧ್ಯಕ್ಷತೆ ತುರ್ವಿಹಾಳ ಪಟ್ಟಣ
ಅಮೋಘ ಸಿದ್ದೇಶ್ವರ ಮಠದ ಮಾದಯ್ಯಸ್ವಾಮಿ ಗುರುವಿನ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಗಂಗಣ್ಣ ಡಿಶ್, ರಾಮಕೃಷ್ಣ ಭಜಂತ್ರಿ, ಬೀರಪ್ಪ ಹೊಸಳ್ಳಿ, ಅಮರೇಶ ಸುಕಾಲಪೇಟೆ, ಮೌನೇಶ ಯಲ್ಲಪ್ಪ, ಮಣಿಕಂಠ, ಮುದಿಯಪ್ಪ, ರಾಮು ಕೆ.ಎಂ.ಎಸ್, ಸೇರಿದಂತೆ ಅನೇಕರಿದ್ದರು.

