ಬಳ್ಳಾರಿ / ಕಂಪ್ಲಿ : ಪಟ್ಟಣದ ಸತ್ಯನಾರಾಯಣ ಪೇಟೆಯಲ್ಲಿ 1969ರಲ್ಲಿ ನಿರ್ಮಾಣ ಮಾಡಲಾದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿಗೆ ವಿವಿಧ ಅಬಿಷೇಕ,ವಿಶೇಷ ಪೂಜೆ, ವಿವಿಧ
ಹೋಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಬೆಳಿಗ್ಗೆ ಅಮೃತ ಶಿಲೆಯ ಶ್ರೀ ಸತ್ಯನಾರಾಯಣ ಶಿಲಾ ಪ್ರತಿಮೆಗೆ ವಿವಿಧ ಅಬಿಷೇಕಗಳು ನೆರವೇರಿದ ನಂತರ ನೂತನ ವಸ್ತ್ರ, ವಿವಿಧ ಹೂಗಳು, ಚಿನ್ನಾಭರಣಗಳಿಂದ ಅಲಂಕರಿಸಿದ ಪುರೋಹಿತರಾದ ಗಂಗಾವತಿಯ ಸುಜ್ಞಾನಮೂತಿ, ಕಂಪ್ಲಿಯ ಗ್ರಾಮ ಪುರೋಹಿತ ಜೆ.ನಾಗಾರಾಚಾರ್ ಲೋಕ ಕಲ್ಯಾಣರ್ಥವಾಗಿ ನವಗ್ರಹ ಹೋಮ, ವಾಸ್ತುಹೋಮ, ಸೇರಿದಂತೆ ಇತರೆ ಹೋಮಗಳನ್ನು ನಡೆಸಿ, ಹೋಮದ ಕುಂಡಕ್ಕೆ ದೇವಸ್ಥಾನದ ಮುಖ್ಯಸ್ಥರಾದ ಜಿ.ವಿ.ಸತ್ಯನರಾಯಣಬಾಬು ದಂಪತಿಗಳು, ಜಿ.ಬಿ.ಕೋಟೇಶ ದಂಪತಿಗಳು ಪೂರ್ಣಾಹುತಿ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಶ್ರೀ ಸತ್ಯನರಾಯಣ ಸ್ವಾಮಿಯ ಕಥೆಯ ಪ್ರವಚನ ಜರುಗಿತು. ನಂತರ ಸ್ವಾಮಿಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಜರುಗಿದ ನಂತರ ಆಗಮಿಸಿದ್ದ ಸಕಲ ಸದ್ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ದೇವಸ್ಥಾನ ಪದಾಧಿಕಾರಿಗಳು ಸೇರಿದಂತೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *