ಬಳ್ಳಾರಿ / ಸಂಡೂರ್ :ಯುವ ಸಮುದಾಯಕ್ಕೆ ಒಳಿತು ಕೆಡುಕುಗಳ ಬಗ್ಗೆ ಮನವರಿಕೆ ಮಾಡಿಕೊಡಲು ಸ್ವಾಸ್ಥ್ಯಸಂಕಲ್ಪ ಕಾರ‌್ಯಕ್ರಮ ರೂಪಿಸಿದ್ದು ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಕೆ. ಹೇಳಿದರು.
ತಾಲೂಕಿನ ಹೊಸ ದರೋಜಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಜನೆಯಲ್ಲಿಯಲ್ಲಿ ಜನ ಜಾಗೃತಿ ವೇದಿಕೆಯ ಮೂಲಕ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಸ್ತುತ ಪ್ರೌಢಶಾಲಾ ಹದಿ ಹರೆಯ ವಯಸ್ಸಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದೆ. ಆದ್ದರಿಂದ ಇಂತಹ ಸ್ವಾಸ್ಥ್ಯ ಕಾರ‌್ಯಕ್ರಮಗಳನ್ನು ನಮ್ಮ ಯೋಜನೆಯ ಮೂಲಕ ತಿಳಿಸಿಕೊಡುತ್ತಿದ್ದೇವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಬಡಿಗೇರ್ ಜಿಲಾನಸಾಬ್ ಮಾತನಾಡಿ ವಿದ್ಯಾರ್ಥಿಗಳಿಗೆ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರು ಇಂತಹ ಹಲವಾರು ಕಾರ‌್ಯಕ್ರಮಗಳ ಮುಖಾಂತರ ವಿದ್ಯಾರ್ಥಿ ಹಾಗೂ ಸಮಾಜವನ್ನು ತಿದ್ದಲು ಪ್ರಯತ್ನ ಮಾಡುತ್ತಿದ್ದಾರೆ.
ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಲು ಇದರ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಉದ್ದೇಶವಾಗಿದೆ, ಈ ದಿಶೆಯಲ್ಲಿ ತಂದೆ-ತಾಯಿ ಹಾಗೂ ಗುರುಗಳು ಹೇಳಿದ ಮಾತುಗಳನ್ನು ವಿದ್ಯಾರ್ಥಿಗಳು ಆಲಿಸಬೇಕು. ಸಮಾಜದಲ್ಲಿ ಗೌರವ ವ್ಯಕ್ತಿಗಳಾಗಿ ಗುರ್ತಿಸಿಕೊಳ್ಳಬೇಕು ಎಂದರು.
ಮುಖ್ಯೋಪಾಧ್ಯಾಯನಿ ಹುಲ್ಲೇಶಿ ಮಾತನಾಡಿ ದುಶ್ಚಟಗಳ ಜೊತೆಗೆ ಮೊಬೈಲ್ ಬಳಕೆ ಸಹ ಒಂದು ದುಶ್ಚಟವಾಗಿ ಪರಿಣಮಿಸಿದ್ದು ಇದನ್ನು ಮಿತಿಯೊಳಗೆ ಬಳಕೆ ಮಾಡುವುದರ ಮೂಲಕ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಕಾರ‌್ಯಕ್ರಮದಲ್ಲಿ ಪ್ರಮುಖರಾದ ಕೆಎಸ್ ಗುರುಮೂರ್ತಿ, ಮಲ್ಲಿಕಾರ್ಜುನ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಮಾಯಣ್ಣ, ಶಿಕ್ಷಕಿಯರಾದ ಜ್ಯೋತಿ, ಕಲಾವತಿ, ವಲಯ ಮೇಲ್ ವಿಚಾರಕರಾದ ಎಚ್. ಮಂಜಣ್ಣ ಸೇವಾ ಪ್ರತಿನಿಧಿಗಳಾದ ಗೌರಮ್ಮ, ಸರೋಜಾ, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


