ಸಿಂಧನೂರು ಡಿಸೆಂಬರ್ ೦1: ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.ಜಿಲ್ಲಾ ಏಡ್ಸ್ ನಿಯಂತ್ರಣ ಸೊಸೈಟಿ ರಾಯಚೂರು ಸರ್ಕಾರಿ ಪದವಿ ಪೂರ್ವ ಕಾಲೇಜ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಜವಳಗೇರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮವನ್ನು ವೈದ್ಯಾಧಿಕಾರಿಗಳಾದ ಉಮೇಮಾ ಅಮೇರಾ ಅವರು ಉದ್ಘಾಟನೆ ಮಾಡಿ ಮಾತನಾಡಿದರು ಎಚ್ಐವಿ ಮತ್ತು ಏಡ್ಸ್ ನಾಲ್ಕು ವಿಧಾನಗಳು ಮೂಲಕ ಮನುಷ್ಯನ ದೇಹವನ್ನು ಸೇರುತ್ತದೆ. ಎಚ್ಐವಿ ಪೀಡಿತ ತಾಯಿಯಿಂದ ಮಗುವಿಗೆ ಆ ಸುರಕ್ಷತಾ ರಕ್ತವನ್ನು ಪಡೆಯುವುದರಿಂದ ಅಸುರಕ್ಷಿತ ಲೈಂಗಿಕತೆಯಿಂದ ಅ ಸುರಕ್ಷಿತ ಸೂಜಿ ಮತ್ತು ಸಿರಂಜಿ ಬಳಸುವುದರಿಂದ ಬರುವ ಸಾಧ್ಯತೆ ಹೆಚ್ಚಿರುತ್ತದೆ .ಸೋಂಕು ಪೀಡಿತ ವ್ಯಕ್ತಿಯೊಂದಿಗೆ ಮಾತನಾಡುವುದು, ಜೊತೆ ಕೂತು ಊಟ ಮಾಡುವುದು, ಅವರೊಂದಿಗೆ ಬಟ್ಟೆ, ಹೊದಿಕೆಗಳನ್ನು ಹಂಚಿಕೊಳ್ಳುವುದರಿಂದ ಏಡ್ಸ್ ಬರುವುದಿಲ್ಲ.‌ ಹಾಗಾಗಿ ಏಚ್ ಐ ವಿ ಏಡ್ಸ್ ಬಗ್ಗೆ ನೀವು ಅರಿಯಿರಿ, ನಿಮ್ಮ ನೆರೆಹೊರೆಯವರಿಗೂ ಜಾಗೃತಿ ಮೂಡಿಸಿ. ಸೋಂಕಿತ ವ್ಯಕ್ತಿಯನ್ನು ಗೌರವದಿಂದ ನೆಡೆಸಿಕೊಳ್ಳಬೇಕು. ಎಂದರು.
ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿದರು, ಎಚ್ಐವಿ ಒಂದು ಹ್ಯೂಮನ್ ಇಮ್ಯೂನ್ ವೈರಸ್ ಹೆಚ್ಚಾಗಿ ಅಸುರಕ್ಷಿತ ಲೈಂಗಿಕತೆಯಿಂದ ಹರಡುತ್ತದೆ ಇದು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಾ ಹೋಗುತ್ತದೆ ನಂತರದಲ್ಲಿ ಏಡ್ಸ್ ಎಂದು ಸ್ವಾಧೀನ ಪಡಿಸಿಕೊಂಡ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೋಮ್ ಆಗಿ ಪರಿವರ್ತನೆಯಾಗಿ ಅವಕಾಶವಾದಿ ಸೋಂಕುಗಳಿಗೆ ದಾರಿ ಮಾಡಿಕೊಡುತ್ತದೆ ಇದರಿಂದ ಮನುಷ್ಯನ ದೇಹ ಹೊಂದಿಸುತ್ತಾ ಹೋಗುತ್ತದೆ ಅದಕ್ಕಾಗಿ ತಾಲೂಕ ಆಸ್ಪತ್ರೆಯ ಏ. ಆರ್. ಟಿ. ಕೇಂದ್ರದಲ್ಲಿ. ಆಪ್ತ ಸಮಾಲೋಚನೆ ನೆಡೆಸಿ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುವಂತಹ ಚಿಕಿತ್ಸೆಯನ್ನು ನೀಡಲಾಗುತ್ತದೆ ಎ ಆರ್ ಟಿ ಚಿಕಿತ್ಸೆಯನ್ನು ನೀಡಲಾಗುತ್ತದೆ, ಅದಕ್ಕಾಗಿ ಎಚ್ಐವಿ ಮತ್ತು ಏಡ್ಸ್ ರೋಗಿಗಳಿಗೆ ಮಾನಸಿಕ ಧೈರ್ಯವನ್ನು ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶಂಕರಪ್ಪ , ಸಾಬಣ್ಣ , ಶಾಹೀನ್ ಶಿಲ್ಪಾ ಮತ್ತು ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಮಹೇಶ ಮತ್ತು ಅಂಬಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *