ಲಿಂಗಸಗೂರು : ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ ರಾಯಚೂರು ತಾಲೂಕ್ ಆರೋಗ್ಯ ಅಧಿಕಾರಿಗಳು ಕಚೇರಿ ಲಿಂಗಸೂಗೂರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಲಿಂಗಸುಗೂರು, ಶ್ರೀ ಅಲ್ಲಮಪ್ರಭು ಪ್ಯಾರಾಮೆಡಿಕಲ್ ಕಾಲೇಜ್ ಲಿಂಗಸಗೂರು & ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಲಿಂಗಸೂಗುರು ಇವರುಗಳ ಸಂಯೋಗದೊಂದಿಗೆ ದಿನಾಂಕ 1.12.2025 ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ಬೆಳಿಗ್ಗೆ 10 ಗಂಟೆ ಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶ್ರೀ ಅಂಬರೀಶ್ ಪಾಟೀಲ್ ತಾಲೂಕು ಆರೋಗ್ಯ ಅಧಿಕಾರಿಗಳು.ತಜ್ನ ವೈದ್ಯರು ಚಾಲನೆ ನೀಡಿದರು
ಕಾರ್ಯಕ್ರಮ ಉದ್ದೇಶಿಸಿ ಡಾ. ಖಾಜಾಹುದ್ದೀನ್ ಹಿರಿಯ ವೈದ್ಯಾಧಿಕಾರಿಗಳು ಶಾತನಾಡಿ ಎಚ್ಐವಿ ಇಂದ ದೂರವಿರಲು ಸರಿಯಾಗಿ ಅರಿತುಕೊಳ್ಳಬೇಕು ಹಾಗೂ ಮುಟ್ಟುವುದರಿಂದ, ಜೊತೆಯಲ್ಲಿ ಇರೋದ್ರಿಂದ ಎಚ್ಐವಿ ಹರಡುವುದಿಲ್ಲ ಎಂದು ಮಾಹಿತಿ ನೀಡಿದರು
ತಾಲೂಕು ಆರೋಗ್ಯ ಅಧಿಕಾರಿ ಡಾ: ಅಮರೇಶ ಪಾಟೀಲ್ ರವರು ಎಚ್ಐವಿ/ ಏಡ್ಸ್ ತಡೆಗಟ್ಟಲು ತಾಲೂಕುಸಾರ್ವಜನಿಕ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕರು ಸರಿಯಾದ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡುತ್ತಾರೆ, ಸಹಕರಿಸುತ್ತಾರೆ ಹಾಗೂ ಸರ್ಕಾರದಿಂದ ಎಚ್ಐವಿ ಬಾಧಿತರು ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು
ಡಾ ಶ್ವೇತಾ ನಡುವಿನಮನಿ ನೇತ್ರ ವೈದ್ಯಾಧಿಕಾರಿಗಳು ಹದಿಹರಿಯದ ಮಕ್ಕಳಲ್ಲಿ ಲೈಂಗಿಕ ದೌರ್ಜನ್ಯ ದಿಂದ ಯುವಕ ಯುವತಿಯರಲ್ಲಿ ಎಚ್ಐವಿ ಸೋಂಕು ಹರಡದಂತೆ ತಡೆಗಟ್ಟಲು ಪೋಷಕರು ಜಾಗೃತಿ ವಹಿಸಬೇಕೆಂದು ಮಾತನಾಡಿದರು
ಡಾ.ಆಯೇಶಾ ವೈದ್ಯಾಧಿಕಾರಿಗಳು ಇವರು ಸಹ ಯುವಜನರಲ್ಲಿ ಎಚ್ಐವಿ ಪಿಡುಗು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು ಎಚ್ಐವಿ /ಏಡ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಲೈಂಗಿಕ ರೋಗಗಳ ಬಗ್ಗೆ ಚಿಕಿತ್ಸೆ ತೆಗೆದುಕೊಳ್ಳುವುದು ಹಾಗೂ ತಂದೆ ತಾಯಿಯಿಂದ ಮಕ್ಕಳಿಗೆ ಹೆಚ್ಐವಿ ಬಾರದಂತೆ ಇರವ ಕುರಿತಾಗಿ ಮಾಹಿತಿ ನೀಡಿದರು
ಡಾ. ರುದ್ರಮುನಿ ಗದ್ದಿ ಇವರು ಸಹ ಎಚ್ಐವಿ/ ಏಡ್ಸ್ ಬರೋದಕ್ಕಿಂತ ಮುಂಚೆ ಸ್ವಚ್ಛತೆ ಮತ್ತು ಜಾಗೃತರಾಗಿರೋಣ ಎಂದು ಮಾಹಿತಿ ನೀಡಿದರು
ಶ್ರೀ ಅಲ್ಲಮ್ಮ ಪ್ರಭು ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎಚ್ಐವಿ /ಏಡ್ಸ್ ಬಗ್ಗೆ ಘೋಷಣೆ ,ಯೊಂದಿಗೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ವಿಶ್ವ ಏಡ್ಸ್ ದಿನಾಚರಣೆ ಜಾಗೃತಿಯ ಜಾಥ ವನ್ನು ಘೋಷಣೆ ಮೂಲಕ ತಾಲೂಕು ಸಾರ್ವಜನಿಕ ಆಸ್ಪತ್ರೆಯಿಂದ, ಹನುಮಾನ್ ಮಂದಿರ್, ಗಡಿಯಾರ ಚೌಕ್, ಯಮನೂರಪ್ಪ ದರ್ಗಾ ಮತ್ತು ಬಳಿಗಾರ ಓಣಿ ಮರಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊನೆಗೊಳಿಸಲಾಯಿತು
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೆಂಟ್ ಲುಕ್ ಮೆಡಿಕಲ್ ಸೊಸೈಟಿ ಮತ್ತು ಹೊಸ ಬೆಳಕು ಸಂಸ್ಥೆ ಸಿಬ್ಬಂದಿಗಳು ಭಾಗವಹಿಸಿದ್ದರು,ಶ್ರೀ ಪ್ರಾಣೇಶ್ ಜೋಶಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಸರಕಾರಿ ನೌಕರರ ಸಂಘ ದ ಅಧ್ಯಕ್ಷ ಹಾಜಿಬಾಬು ಕಲ್ಯಾಣಿ ಶಿವಲೀಲಾ ಮೇಟಿ. ಪದ್ಮಾವತಿ ನಾಯಕ್. ವಸೀಂರೆಹಮಾನ್. ಶ್ರೀ ಸತೀಶ್ ದರ್ಶನಕರ್, ಶ್ರೀ ರವಿಬೆಳಿಗಾರ್, ಶ್ರೀ ಸಣ್ಣ ಉಪ್ಪಳಪ್ಪ, ಎ. ಆರ್. ಟಿ ಸಿಬ್ಬಂದಿಗಳಾದ ಶ್ರೀ ಮಹೇಶ್ ಗೌಡ,ಶ್ರೀ ಮತಿ ವಿಜಯಲಕ್ಷ್ಮಿ, ಶ್ರೀ ರವಿ ಎ ಆರ್ ಟಿ,ಶ್ರೀ ವೀರೇಶ್,ಶ್ರೀ ಮತಿ ಭವಾನಿ
ಎನ್‌ಟಿಇಪಿ ಸಿಬ್ಬಂದಿಗಳಾದ ಶ್ರೀ ರವಿ ಹೂಗಾರ್, ಶ್ರೀ ಅಂಬರೀಶ್ ಎಲಿಗಾರ್ ಮತ್ತು ಮಹಾಂತೇಶ್ ಬ್ಯಾಳಿ.ಇಲಿಯಾಸ.ಸತ್ತಾರ ಪಾಶಾ. ಮತ್ತು ಆರೋಗ್ಯ ಇಲಾಖೆ ಎಲ್ಲಾ ಸಿಬ್ಬಂದಿಗಳು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯು ಸದಸ್ಯರಾದ ಶಾಮೀದಸಾಬ.ಮರ್ತುಜಸಾಬ.ಬಾಬುಕರಡಿ.ಜಾವಿದ್.ಶಹಜಾದ ಸಲಿಂ.ವಿರುಪಾಕ್ಷಿ ವಾಸೀಮ್.ಅಮರೇಶ.ಇನ್ನಿತರರಿದ್ದರು.

