ಕಳೆದ ಶತಮಾನದಿಂದ ಇತ್ತಿಚಿಗೆ ಕನ್ನಡ ಪರ ಮನಸ್ಸುಗಳು ಕನ್ನಡ ಸಾಹಿತ್ಯದ ಮೇಲಿನ ಅಭಿಮಾನ ಅಭಿರುಚಿ ಸ್ವಾಭಿಮಾನದ ಪ್ರತೀಕವಾಗಿ ತಮ್ಮ ಮನೆಯ ಹಿರಿಯರ ಸವಿ ನೆನಪಿಗಾಗಿ ದತ್ತಿಯನ್ನು ನೀಡುವುದರ ಮೂಲಕ ಈ ನೆಲದ ಅಸ್ಮಿತೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಕಾರ್ಯಕ್ರಮಗಳ ಸುವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ದತ್ತಿಗಳು ಸಹಾಯಕವಾಗಿವೆ ಹಾಗಾಗಿ ದತ್ತಿಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಪೋಷಿಸುವಲ್ಲಿ ಮಹತ್ತರ ಪಾತ್ರವಹಿಸುವೆ ಎಂದು ದತ್ತಿ ದಾನಿ ಬಿ ಜೆ.ಪಿ ಮುಖಂಡರಾದ ಕೆ ಕರಿಯಪ್ಪ ಅವರು ಎಲ್ ಬಿ ಕೆ ಪದವಿ ಪೂರ್ವ ಮತ್ತು ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 2025-26 ನೇ ಸಾಲಿನ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಡಾ.ಗಂಗಾಧರ ವೀರಘಂಟೆಯವರು ಮಾತಾನಾಡಿ ಪುರಾತನದಿಂದಲೂ ಕುರಿ ಸಾಕಾಣಿಕೆಯನ್ನು ಕೇವಲ ಕುರುಬ ಸಮುದಾಯದ ಅವರು ಮಾತ್ರ ಕುಲ ಕಸಬಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಆಧುನಿಕ ಕಾಲದ ಸಂದರ್ಭದಲ್ಲಿ ಕುಲ ಕಸಬಾಗಿ ಉಳಿಯದೇ ಎಲ್ಲಾ ಜಾತಿ ಧರ್ಮಯರಲ್ಲಿಯೂ ಉಪಜೀವನದ ಒಂದು ಉದ್ದಿಮೆಯಾಗಿ ಮುನ್ನೆಸಿಕೊಂಡಿರವುದು ಆಶದಾಯಕ ಬೆಳವಣಿಗೆ ಇಂತಹ ಕಾರ್ಯ ಕೈಗೂಡವಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಸಾಮಜಿಕವಾಗಿ ಆರ್ಥಿಕವಾಗಿ ಆಧ್ಯಾತ್ಮಿಕವಾಗಿ ಗಟ್ಟಿಯಾದರೆ ಮಾತ್ರ ಸಾದ್ಯ ಎಂದು ಮಕ್ಕಳಿಗೆ ಕರೆ ನೀಡಿದರು.

ಮುಖ್ಯ ಅಥಿತಿಗಳಾದ ಎಸ್ ಶರಣೆಗೌಡ ಮಾತಾಡಿ ,ತಾವು ೨೦೦೩-೪ ರಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾಗಿದ್ದಾಗ ಈ ದತ್ತಿ ಉಪನ್ಯಾಸ ಮಾಲಿಕೆಯ ಹೋಸ ಚಿಂತನ ಕಾರ್ಯಕ್ರಮ ಜಾರಿಗೆ ಬಂದುದ್ದು ಎಂದು ಶ್ಯ್ಲಾಘಿಸಿದರು.ಹನಿಗಳನ್ನು ಹೇಳಿ ಮಕ್ಕಳನ್ನು ಮನರಂಜಿಸಿದರು.ಇದೆ ಸಂದರ್ಭದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಸಭೋಜಿ ಮಾತಾನಾಡಿ ಸಂಸ್ಥೆಯ ಪಠ್ಯ ,ಫಲಿತಾಂಶ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿ, ಚುಟಕಗಳನ್ನು ಹೇಳಿ ಮನರಂಜಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡಮಾಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಾಜಿ ನರಾದ ಶ್ರೀ ಹುಸೇನ್ ಬಾಷಾ ಅವರನ್ನು ಪರಿಷತ್ತಿನಿಂದ ಸನ್ಮಾನಿಸಲಾಯಿತು ಹಾಗೇನೆ ಕೆ ಕರಿಯಪ್ಪ ಬಿಜೆಪಿ ಮುಖಂಡರು ಅವರನ್ನು ಎಲ್ ಬಿ ಕೆ ಮತ್ತು ನೋಬೆಲ್ ಪದವಿ ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದ ಘನ ಅಕ್ಷತೆಯನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಹೆಚ್ ಎಫ್ ಮಸ್ಕಿ ಅವರು ವಹಿಸಿಕೊಂಡು ಮಾತನಾಡುತ್ತಾ, ಕನ್ನಡ ನಾಡು ,,ನುಡಿ ಜಲ ,ವಿಷಯಗಳ ಬಂದಾಗ ನಮ್ಮ ಸ್ವಾಭಿಮಾನದಿಂದ ಕನ್ನಡವನ್ನು ಕಟ್ಟಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಈ ಭಾಗವಾಗಿ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋದರ ಮೂಲಕ ಯಶಸ್ಸಿನ ಕಡೆಗೆ ಹೋಗುತ್ತೇವೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾ ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಅಂಬರೀಶಪ್ಪ ಮೈಲಾರ ಶರಣಪ್ಪ ಬರ್ಸಿ ದೇವಿರಮ್ಮ ಹಾಗೂ ಅಂಬರೀಶ್ ಅಲಬನೂರ್ ವರದಿಗಾರರು ವೇದಿಕೆ ಮೇಲಿದ್ದರು ಪರಿಷತ್ತಿನ ಸದಸ್ಯರಾದ ದುರ್ಗಪ್ಪ ಗುಡೂರು ಪ್ರಸ್ತಾವಿಕವಾಗಿ ಮಾತನಾಡಿದರು ನೊಬೆಲ್ ಪದವಿ ಮಹಾ ವಿದ್ಯಾಲಯದ ಕಾರ್ಯದರ್ಶಿಗಳಾದ ಡಾ. ಅರುಣ್ ಕುಮಾರ್ ಬೆರ್ಗಿ ಉದ್ಘಾಟಿಸಿ ಮಾತನಾಡಿದರು ಉಪನ್ಯಾಸಕಿ ಅಶ್ವಿನಿ ಪ್ರಾರ್ಥಿಸಿದರು ಸುರೇಶ್ ಮುಳ್ಳೂರ್ ಸ್ವಾಗತಿಸಿದರು ನಂದಿನಿ ಗೂಗಿ ನಿರೂಪಿಸಿದ್ರು ಕೃಷ್ಣ ರಾಠೋಡ್ ವಂದಿಸಿದರು.

Leave a Reply

Your email address will not be published. Required fields are marked *