ಸಿಂಧನೂರು ಜು.7 ಲೋಕೋಪಯೋಗಿ ಇಲಾಖೆಯ ಅಧಿಕಾರಿಯಾದ ಇಇ ವೆಂಕಟೇಶ ಗಲಗ ಇವರ ಮೇಲೆ ವಿನಾಕಾರಣ ಪತ್ರಿಕಾ ಮಾಧ್ಯಮ ಹಾಗೂ ಮೀಡಿಯಾದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಹೆಸರಿಗೆ ಮಸಿ ಬಡಿಯುವಂತಹ ಕೆಲಸಗಳು ಆಗುತ್ತಿವೆ. ವಿನಾಕಾರಣ ಕಿರುಕುಳ ನೀಡುವುದರ ಜೊತೆಗೆ ಕೆಲಸದ ಮೇಲೆ ಒತ್ತಡ ಏರಿ, ಅಧಿಕಾರದಿಂದ ಕೆಳಗಿಳಿಸಬೇಕೆಂಬ ಉದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ಆಂಜನೇಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಜು.7 ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇಲ್ಲ ಸಲ್ಲದ ಆರೋಪ ಮಾಡುತ್ತಾ, ಹಿಂದುಳಿದ ವರ್ಗದ ವ್ಯಕ್ತಿ ಉನ್ನತ ಹುದ್ದೆಯಲ್ಲಿರುವುದನ್ನ ಸಹಿಸಿಕೊಳ್ಳದೆ, ಉದ್ದೇಶ ಪೂರ್ವಕವಾಗಿ ಇವರನ್ನು ತೇಜೋವಧೆ ಮಾಡುವಂತಹ ಕೆಲಸ ನಡೆಯುತ್ತಿದೆ. ಯಾವುದೇ ಒಂದು ಟೆಂಡರ್ ಕರೆಯಲು ಸಂಬಂಧಪಟ್ಟ ಕಾಮಗಾರಿ ಪ್ರಮಾಣ ಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ತಾಂತ್ರಿಕವಾಗಿ ಕೆಳಹಂತದ ಅಧಿಕಾರಿಗಳಿಂದ ಹಿಡಿದು, ಮೇಲಿನ ಅಧಿಕಾರಿಗಳವರೆಗೆ
ಪರಿಶೀಲನೆ ಮಾಡುವ ಅಧಿಕಾರ ಇರುತ್ತದೆ.
ಆದರೆ ಇಇ ವೆಂಕಟೇಶ ಗಲಗ ಇವರನ್ನು ಮಾತ್ರ ಟಾರ್ಗೆಟ್ ಮಾಡಿದ್ದು, ಅನುಮಾನ ಮೂಡಿಸಿದೆ,
ಜವಾಬ್ದಾರಿ ಸ್ಥಾನದಲ್ಲಿರುವ ಇವರು ರಾಜಕೀಯವಾಗಿ, ಸಾಮಾಜಿಕವಾಗಿ, ಕೆಲಸ ಮಾಡುತ್ತಾ ಬಂದಿದ್ದಾರೆ. ತಮ್ಮ ಕೆಲಸದಲ್ಲಿ ಶಿಸ್ತು ರೂಢಿಸಿಕೊಂಡು ಕೆಲಸ ನಿರ್ವಹಿಸುವ ಇವರ ಮೇಲೆ ಮಾಡಿದ ಆರೋಪ ಸತ್ಯಕ್ಕೆ ದೂರವಾದದು ಎಂದರು.
ಈ ಸಂದರ್ಭದಲ್ಲಿ: ಆಂಜನೇಯ ರಾಗಲಪರ್ವಿ, ಹುಸೇನಪ್ಪ, ನಾರಾಯಣಸ್ವಾಮಿ ದುಮತಿ, ಮೌನೇಶ ನಾಯಕ, ಮಹಾದೇವಪ್ಪ ದುಮತಿ, ಬಸವರಾಜ ಕೆಸರಟ್ಟಿ, ಚಂದ್ರಶೇಖರ ಯಾಪಲಪರ್ವಿ, ಪಾವಯ್ಯ ಮನುಸೂರು, ದೇವೇಗೌಡ ಉದ್ಬಾಳ, ಸೇರಿದಂತೆ ಅನೇಕರಿದ್ದರು.

