ಮಾನ್ವಿ:
ಮಾನ್ವಿ ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಸೈಯದ್ ಮಿನ್ಹಾಜ್ ಉಲ್ ಹಸನ್ ಅವರಿಗೆ ಉತ್ತರ ಪ್ರದೇಶದ ಅಲಿಗಢ್ ನಲ್ಲಿರುವ ಮಂಗಲಯಾತನ ವಿಶ್ವವಿದ್ಯಾಲಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪಿಎಚ್‌ಡಿ ಪದವಿ ನೀಡಿದೆ.
ಸೈಯದ್ ಮಿನ್ಹಾಜ್ ಉಲ್ ಹಸನ್ ಅವರು
ಡಾ. ಮೀನಾ ಚೌಧರಿ ಮತ್ತು ಡಾ. ಜಾವೇದ್ ವಸೀಮ್ ಅವರ ಮಾರ್ಗದರ್ಶನದಲ್ಲಿ ‘ಭಾರತೀಯ ಐಟಿ ಉದ್ಯಮಕ್ಕೆ ಸಂಬಂಧಿಸಿದಂತೆ ಕ್ಲೌಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸೈಬರ್ ಭದ್ರತಾ ಅಪಾಯಗಳ ತಡೆಗೆ ಕೃತಕ ಬುದ್ಧಿಮತ್ತೆ(‘Artificial Intelligence in cyber security risk on cloud platforms with reference to Indian IT industry)’ ಎಂಬ ವಿಷಯದ ಕುರಿತು ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಈ ಕುರಿತು ನ.27ರಂದು ಮಂಗಲಯಾತನ ವಿಶ್ವವಿದ್ಯಾಲಯ ಪ್ರಮಾಣ ಪತ್ರ ನೀಡಿದ್ದು, ಮುಂಬರುವ ಘಟಿಕೋತ್ಸವದಲ್ಲಿ ಸೈಯದ್ ಮಿನ್ಹಾಜ್ ಉಲ್ ಹಸನ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಭಿನಂದನೆ: ಪಿಎಚ್‌ಡಿ ಪದವಿಯನ್ನು ಯಶಸ್ವಿಯಾಗಿ ಪೂರೈಸಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿರುವ ಸಹ ಪ್ರಾಧ್ಯಾಪಕ ಸೈಯದ್ ಮಿನ್ಹಾಜ್ ಉಲ್ ಹಸನ್ ಅವರನ್ನು ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಎಲ್.ಈರಣ್ಣ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

