ಸಿಂಧನೂರು 01 ಡಿಸೆಂಬರ್ : ತಾಲೂಕು ಕಾನೂನು ಸೇವಾ ಸಮಿತಿ ಸಿಂಧನೂರು ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ತಾಲೂಕ ಆರೋಗ್ಯ ಇಲಾಖೆ ಮತ್ತು ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಡಿ –ಫಾರ್ಮಸಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಇವರ ಸಂಯುಕ್ತಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಜಾಗೃತಿ ಜಾತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಸನ್ಮಾನ್ಯ ಶ್ರೀಮತಿ ರೂಪ ಪ್ರಧಾನ ಸಿವಿಲ್ ನ್ಯಾಯಾಧೀಶರು ಜೆಎಂಎಫ್ ಸಿ ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಸಿಂಧನೂರು ಹಸಿರು ಧ್ವಜಾ ಹಾರಿಸುವುದರ ಮುಖಾಂತರ ಎಚ್ಐವಿ ಏಡ್ಸ್ ಜಾಗೃತಿ ಜಾತ ನಡೆಗೆ ಚಾಲನೆ ನೀಡಿದರು ಹಾಗೂ ಅವರು ಮಾತನಾಡಿ ಈ ಜಾಗೃತಿ ಕೇವಲ ಈ ಒಂದು ದಿನಕ್ಕೆ ಸೀಮಿತವಾಗದೆ ವರ್ಷದ 365 ದಿನವೂ ಜಾಗೃತ ಕೊಂಡು ಸಾರ್ವಜನಿಕರಿಗೆ ಕಾಲೇಜು ಮಕ್ಕಳಿಗೆ ಸತತವಾಗಿ ಜಾಗೃತಿ ನೀಡಬೇಕಾಗಿ ಕರೆ ನೀಡಿದರು ಮತ್ತೂರ್ವ ಸನ್ಮಾನ್ಯ ಶ್ರೀ ಗೌರವಾನಿತ ಶ್ರೀಮತಿ ಸರಸ್ವತಿ ಹೋಟಕರ್ ಒಂದನೇ ಅಪಾರ ಸಿವಿಲ್ ನ್ಯಾಯಾಧೀಶರು ಜೆಎಂಎಫ್‌ಸಿ ಸಿಂಧನೂರು ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಕೆ ಭೀಮನ್ ಗೌಡ ವಕೀಲರು ಹಾಗೂ ಅಧ್ಯಕ್ಷರು ತಾಲೂಕು ನ್ಯಾಯವಾದಿಗಳ ಸಿಂಧನೂರು ವಹಿಸಿಕೊಂಡಿದ್ದರು ಶ್ರೀ ಡಾ. ಅಯ್ಯನಗೌಡ ತಾಲೂಕ ಆರೋಗ್ಯ ಅಧಿಕಾರಿಗಳು ಸಿಂಧನೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಶ್ವ ಜಾಗೃತ ನಡೆ ನಗರದ ಕನಕದಾಸ ವೃತ್ತ ತಲುಪಿದಾಗ ಮಾತನಾಡಿ ಸಾರ್ವಜನಿಕರು ಏಡ್ಸ್ ಬಗ್ಗೆ ಭಯಗೊಳ್ಳದೆ ಜಾಗೃತಿಯನ್ನು ಹೊಂದಬೇಕು ಹಾಗೂ ಎಚ್ಐವಿ ಕಾಯಿಲೆಗೆ ರೋಗ ಉಲ್ಬನ ಗೊಳ್ಳದಂತೆ ಚಿಕಿತ್ಸೆ ಇದೆ ಎಚ್ಐವಿ ರೋಗಿಯ ಜೊತೆ ತಾರತಮ್ಯವನ್ನು ಮಾಡಬಾರದು ಹಾಗೂ ಹೆಚ್ಐವಿ ರೋಗಿಯ ಬಗ್ಗೆ ಗೌಪ್ಯತೆಯನ್ನು ಸಹ ಕಾಪಾಡಬೇಕು ಎಂದು ತಿಳಿಸಿದರು ಮತ್ತೂರ್ವ ಅತಿಥಿಯಾಗಿ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷರಾದ ಶ್ರೀ ಇರ್ಫಾನ್ ಕೆ ಅತ್ತಾರ್ ಅವರು ಮಾತನಾಡಿ ಕೇವಲ ಏಡ್ಸ್ ಕಾರ್ಯಕ್ರಮ ಮಾತ್ರವಲ್ಲದೆ ಎಲ್ಲಾ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹಾಗೂ ನರ್ಸಿಂಗ್ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ನಗರದ ವಿವಿಧ ಕಾಲೇಜುಗಳಿಗೆ ತೆರಳಿ ಇದರ ಬಗ್ಗೆ ಮಾಹಿತಿಯನ್ನು ನೀಡುವುದು ಹಾಗೂ ಜಾಗೃತಿಗೊಳಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಸಾರ್ವಜನಿಕರು ಎಚ್ಐವಿ ಕಾಯಿಲೆ ಬಗ್ಗೆ ಭಯಪಡದೆ ಸರಿಯಾದ ಚಿಕಿತ್ಸಾ ಕ್ರಮಗಳನ್ನು ಅನುಸರಿಸಿ ಎಲ್ಲಾ ಸಮ ಸಮಾಜದ ಸರಾಸರಿ ವ್ಯಕ್ತಿಗಳ ಹಾಗೆ ನೀವು ಸಹ ಜೀವಿಸಬಹುದು ಎಂದು ತಿಳಿಸಿದರು ಸಮಾಜವು ಮಾನಸಿಕ ಬೆಂಬಲ ನೀಡುವುದರ ಜೊತೆಗೆ ಜೊತೆ ಸೇರಿ ನಡೆಯಬೇಕು ಎಂದು ತಿಳಿಸಿದರು ಮತ್ತೋರ್ವ ಅತಿಥಿಯಾದ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ಪ್ರಾಚಾರ್ಯರಾದಂತಹ ಸಿರಿಲ್ ಅವರು ಹೆಚ್ಐವಿ ಹರಡುವ ನಾಲ್ಕು ಮಾರ್ಗಗಳ ಬಗ್ಗೆ ತಿಳಿಸಿದರು ಹೆಚ್ಐವಿ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಸಾಹಸನಿಕರಿಗೆ ಮಾಹಿತಿ ನೀಡಿದರು ಕಾಲೇಜು ಹಾಗೂ ವಿವಿಧ ಸಂಸ್ಥೆಗಳಲ್ಲಿ ಜಾಗೃತಿಗೊಳಿಸಬೇಕಾದಾಗ ನಮ್ಮ ಸಹಕಾರವೂ ಇರುತ್ತದೆ ಎಂದು ಅಧ್ಯಕ್ಷರ ಅಪ್ಪಣೆಯ ಮೇರೆಗೆ ತಾಲೂಕ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು ವಿಶ್ವ ಏಡ್ಸ್ ದಿನಾಚರಣೆಯ ಜಾಗೃತ ಜಾತವು ನಗರದ ಕೋರ್ಟ್( ನ್ಯಾಯಾಲಯಗಳ ಸಂಕೀರ್ಣ ಸಿಂಧನೂರು ) ಆವರಣದಿಂದ ಪ್ರಾರಂಭವಾಗಿ ಮಹಾತ್ಮ ಗಾಂಧೀಜಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕ ಜಾಗೃತ ಕರೆ ನೀಡಲಾಯಿತು ವಿದ್ಯಾರ್ಥಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಗೂ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ ಎಆರ್‌ಟಿ ಸೆಂಟರ್ ಸಿಬ್ಬಂದಿಗಳು ಘೋಷಣೆ ಕೂಗುವುದರ ಮುಖಾಂತರ ನಗರದ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವರೆಗೆ ವಿಶ್ವ ಏಡ್ಸ್ ಜಾಗೃತಿ ನಡೆಗೆ ಹೆಜ್ಜೆ ಹಾಕಿದರು ಹಾಗೂ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಅಯ್ಯನಗೌಡ ತಾಲೂಕ ಆರೋಗ್ಯ ಅಧಿಕಾರಿಗಳು ಶ್ರೀ ಹನುಮೇಶ್ ರಾಗಲಪರ್ವಿ ಸಹಾಯಕ ಸರಕಾರಿ ಅಭಿಯೋಜಕರು ಸಿಂಧನೂರು ಶ್ರೀ ಇರ್ಫಾನ್ ಕೆ ಅಧ್ಯಕ್ಷರು ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಿಂದನೂರು ಶ್ರೀ ಲಾರ್ಜರ್ ಸಿರಿಲ್ ಪ್ರಾಚಾರ್ಯರು ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ಸಿಂಧನೂರು ಶ್ರೀ ವಶಿಮ್ ಹುಸೇನ್ ಪ್ರಾಚಾರ್ಯರು ಸನ್ ರೈಸ್ ಕಾಲೇಜ್ ಆಫ್ ಫಾರ್ಮಸಿ ಸಿಂಧನೂರು ಹಾಗೂ ಶ್ರೀ ಚಕ್ರವರ್ತಿ ಡಿ ಪ್ರಾಚಾರ್ಯರು ಸನ್ರೈಸ್ ಪ್ಯಾರಾಮೆಡಿಕಲ್ ಕಾಲೇಜ್ ಸಿಂಧನೂರು ವಕೀಲರು ಸಿಂಧನೂರು ಶ್ರೀ ಕೆ ಜಗದೀಶ್ ವಕೀಲರು ಉಪಾಧ್ಯಕ್ಷರು ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ಶ್ರೀ ದುರ್ಗೇಶ್ ವಕೀಲರು ಕಾರ್ಯದರ್ಶಿಗಳು ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ಕುಮಾರಿ ಹೀನ ಅಂಬರೀಶ್ ಜಂಟಿ ಕಾರ್ಯದರ್ಶಿಗಳು ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ಶ್ರೀ ಶೇಖರಪ್ಪ ಗಡೇದ್ ವಕೀಲರು ಖಜಾಂಚಿಗಳು ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ಶ್ರೀ ಅಳ್ಳಪ್ಪ ವಕೀಲರು ಸಹಾಯಕ ಕಾನೂನು ಅಭಿ ರಕ್ಷಕರು ಸಿಂಧನೂರು ವಿಶೇಷ ಉಪನ್ಯಾಸಕರಾಗಿ ಶ್ರೀಮತಿ ಗೀತಾ ಹಿರೇಮಠ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಸಿಂಧನೂರು ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಾರ್ವಜನಿಕ ಆಸ್ಪತ್ರೆ ಐಸಿಟಿಸಿ ವಿಭಾಗದ ಸಿಬ್ಬಂದಿಗಳು ಎಆರ್‌ಟಿ ವಿಭಾಗದ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಅಂಗನವಾಡಿ ಸನ್ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿದ್ಯಾರ್ಥಿಗಳು ಶ್ರೀ ರೇಣುಕಾ ಕಾಲೇಜ್ ಆಫ್ ನರ್ಸಿಂಗ್ ಪ್ರಾಚಾರ್ಯರು ಸಿಬ್ಬಂದಿಗಳು ವಿದ್ಯಾರ್ಥಿಗಳು ಶ್ರೀ ಬಸವ ಪ್ಯಾರಾಮೆಡಿಕಲ್ ನರ್ಸಿಂಗ್ ಕಾಲೇಜ್ ಆಡಳಿತ ಮಂಡಳಿ ಪ್ರಾಚಾರ್ಯರು ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು…..


