ಕವಿತಾಳ : ಕನಕದಾಸರ ಸಮಾನತೆಯ ಸಂದೇಶ ಹಾಗೂ ಜಾತಿ ವಿರುದ್ಧದ ಹೋರಾಟ ಪ್ರೇರಣೆಯಾಗಬೇಕು ಅವರ ಕೀರ್ತನೆಗಳು ಸಮಾಜದ ಬದಲಾವಣೆಗೆ ದಾರಿದೀಪವಾಗಿವೆ. ಮೌಢ್ಯತೆ, ಅಜ್ಞಾನ, ಅಸ್ಪೃಶ್ಯತೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಬುದ್ಧ, ಬಸವಣ್ಣ, ಕನಕದಾಸರು ಜಾತಿ ವ್ಯವಸ್ಥೆ ಹೋಗಲಾಡಿಸಲು ಜನಜಾಗೃತಿ ನಡೆಸಿದ್ದಾರೆ. ಇದು ಯುವ ಸಮುದಾಯಕ್ಕೆ ಮಾರ್ಗದರ್ಶನವಾಗಬೇಕು. ಯುವಕರು ಜಾಗೃತರಾಗಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಸಣ್ಣ ನೀರಾವರಿ, ವಿಜ್ಞಾನ & ತಂತ್ರಜ್ಞಾನ ಸಚಿವರು ಎನ್.ಎಸ್ ಬೋಸರಾಜು ಹೇಳಿದರು.
ಅವರು ಇಂದು ಪಟ್ಟಣದ ಕನಕನಗರದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ೫೩೮ನೇ ಜಯಂತೋತ್ಸವ ಮತ್ತು ಕನಕದಾಸರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
`ಪಟ್ಟಣದ ಶಿವಪ್ಪ ತಾತನ ಮಠ ದೇವಸ್ಥಾನಕ್ಕೆ ರಸ್ತೆ ಅಗಲೀಕರಣದಿಂದ ತೆರವು ಮಾಡಲಾಗಿದ್ದು ಶಾಸಕರ ಅನುಧಾನದಲ್ಲಿ ಕಟ್ಟಡ ನಿರ್ಮಾಣ ಹಾಗೂ ಶಿವಪ್ಪ ಮಠದ ಅಭಿವೃದ್ಧಿಗೆ 50 ಲಕ್ಷ ರೂ.ಗಳು ಮೀಸಲಿಡಲಾಗಿದೆ. ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯ ಬೆಳೆಸಲು ಶ್ರಮಿಸಿದ ಮಹಾನ ಪುರುಷ ಕನಕದಾಸರು. ಎಲ್ಲ ಶರಣರು, ಸಂತರು, ಮಹಾನ್ ನಾಯಕರುಗಳು ಹುಟ್ಟು ಜಾತಿ ಪರಿಗಣಿಸದೆ ತಮ್ಮದೆ ಆದ ಮನುಕುಲ ಸನ್ಮಾರ್ಗದಲ್ಲಿ ನಡೆಯಲು ನೀಡಿದ ತತ್ವಾದರ್ಶಗಳು ಎಂದೆಂದಿಗೂ ನಮಗೆ ದಾರಿದೀಪ ‘ಎಂದರು.
ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿ `16ನೇ ಶತಮಾನದ ಸಂತ ಕವಿ ಕನಕದಾಸರು, ತಮ್ಮ ಕೀರ್ತನೆ, ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೆಳವರ್ಗದಲ್ಲಿ ಜನಿಸಿದರೂ, ತಮ್ಮ ಭಕ್ತಿ ಜ್ಞಾನ ದಿಂದ ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠರಾಗಿದ್ದಾರೆ. ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮಾಜದ ನಾಯಕಲ್ಲ. ಶೋಷಿತ ವರ್ಗದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಅಪಾರವಾದ ಗೌರವವಿದೆ. ಈ ನಾಡು ಕಂಡ ಶ್ರೇಷ್ಠ ನಾಯಕ’ಎಂದು ಹೇಳಿದರು.
`ಕುಲಕುಲ ವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ಎಂದು ಹೇಳಿ ಮನುಷ್ಯರೆಲ್ಲರೂ ಒಂದೇ ಎಂದು ಸಾರಿದರು. ತಮ್ಮ ಕೀರ್ತನೆ, ಹಾಡುಗಳ ಮೂಲಕ ಈ ಸಂದೇಶವನ್ನು ತಿಳಿಸಿದವರು’ ಎಂದು ನಿರುಪಾದೇಪ್ಪ ವಕೀಲರು ಹೇಳಿದರು.
ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ `ಜಾತಿ ಮತ ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತವರೇಣ್ಯರು ಕನಕದಾಸರು’ ಎಂದು ತಿಳಿಸಿದರು.
ಮಾಜಿ ಸಂಸದರು ಕೆ.ವಿರುಪಾಕ್ಷಪ್ಪ, ಎಂ ಈರಣ್ಣ ಇನ್ನಿತರರು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿವರಾಜ ಡೊಣಮರಡು ಮಾಡಿದರು.
ಕಾರ್ಯಕ್ರಮದ ಸಾನಿದ್ಯವನ್ನು ಬೀರಲಿಂಗೇಶ್ವರ ಸ್ವಾಮೀಜಿ ಕಾಗಿನೆಲೆ ಪೀಠ, ಕರಿಯಪ್ಪ ತಾತ, ಶಿವಪ್ಪ ತಾತ, ನಾಗಯ್ಯಗುರುವಿನ, ಸದಾಶಿವ ತಾತ ಮುಂಡರಗಿರವರು ವಹಿಸಿದ್ದರು.
ವೇದಿಕೆ ಮೇಲೆ ಕೆ. ಬಸವಂತಪ್ಪ, ಶರಣಯ್ಯ ಗುಡದಿನ್ನಿ, ಬಿಕೆ ಅಮರೇಶಪ್ಪ ವಕೀಲರು, ಬಸವರಾಜ ಡೋಣಮರಡಿ, ಕಿರಿಲಿಂಗಪ್ಪ, ಮಾಳಪ್ಪ ತೋಳದ್, ಶಿವಣ್ಣ ವಕೀಲರು, ಯುಮನಪ್ಪ ದಿನ್ನಿ, ಪಟ್ಟಣಪ ಪಂಚಾಯತಿ ಮಾಜಿ ಸದಸ್ಯರಾದ ಗಂಗಪ್ಪ ದಿನ್ನಿ,ಮೌನೇಶ ಪೂಜಾರಿ, ಕರೀಂ ಸಾಬ್, ಭೀಮಣ್ಣ ನಾಯಕ ಕಾಚಪೂರು, ಮಲ್ಲಯ್ಯ ಅಂಬಾಡಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಚಾಂದಪಾಶ, ಕರಿಯಪ್ಪ ಯಕ್ಲಾಸ್‌ಪುರು, ಸೇರಿದಂತೆ ಅನೇಕ ಸಮಾಜದ ಯುವಕರು, ಬಂಧುಗಳು ಇದ್ದರು.


