ರಾಯಚೂರು: ಕ್ರಿಸ್ಮಸ್ ಪ್ರಯುಕ್ತ ಬೆಂಗಳೂರು ಕ್ಯಾಂಟೋನ್ಮೆಂಟ್ – ಬೀದರ್ – ವಾಯಾ ಕಲಬುರಗಿ ವಿಶೇಷ ಎಕ್ಸ ಪ್ರೆಸ್ ರೈಲು ಕ್ರಿಸ್ಮಸ್  ಪ್ರಯುಕ್ತ ಸಂಚರಿಸಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಂಗಳೂರು ಕ್ಯಾಂಟೊನ್ಮೆಂಟ್ – ಬಿದಾರ್ ವಿಶೇಷ ಎಕ್ಸ್ಪ್ರೆಸ್ ರೈಲು (06291)  ಡಿಸೆಂಬರ್ 24ರಂದು ರಾತ್ರಿ 9:15ಕ್ಕೆ ಬೆಂಗಳೂರು ಕ್ಯಾಂಟೊನ್ಮೆಂಟ್ ರೈಲು ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 11:30ಕ್ಕೆ ಬೀದರ್ ತಲುಪಲಿದೆ.
ಬೀದರ್ – ಬೆಂಗಳೂರು ಕ್ಯಾಂಟೊನ್ಮೆಂಟ್ ವಿಶೇಷ ಎಕ್ಸ್ಪ್ರೆಸ್ ರೈಲು (06292)  ಡಿಸೆಂಬರ್ 25ರಂದು ಮಧ್ಯಾಹ್ನ 1:00ಕ್ಕೆ ಬೀದರ ನಿಲ್ದಾಣದಿಂದ ನಿರ್ಗಮಿಸಿ ಮರುದಿನ ಬೆಳಗ್ಗೆ 4:00ಕ್ಕೆ ಬೆಂಗಳೂರು ಕ್ಯಾಂಟೊನ್ಮೆಂಟ್ನಲ್ಲಿ ತಲುಪಲಿದೆ.
ರೈಲು ನಿಲ್ದಾಣಗಳಲ್ಲಿ ನಿಲ್ಲುವುದು:- ಯಲಹಂಕ, ಹಿಂದೂಪೂರ, ಧರ್ಮವರಂ, ಅನಂತಪುರ, ಗುಂತಕಲ್, ಆದೋನಿ, ಮಂದರಾಳ್ಯಂ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಹುಮನಬಾದ್ ರೈಲು ನಿಲ್ದಾಣದಲ್ಲಿ ಎರಡು ಕಡೆಯ ಸಂಚಾರದಲ್ಲಿ ನಿಲುಗಡೆಯಾಗಲಿವೆ.ಎರಡು ಕಡೆ ಪ್ರಯಾಣದ ಬುಕ್ಕಿಂಗ್ ವ್ಯವಸ್ಥೆ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *