ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ “ವಿವೇಕ ಪಥ ರಾಷ್ಟ್ರದ ಹಿತ ” 4 ನೇ ಕಾರ್ಯಕ್ರಮವನ್ನು ಸಿಂಧನೂರಿನ ವಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಸಿಂಧನೂರಿನ ಖ್ಯಾತ ನೇತ್ರ ತಜ್ಞರಾದ ಶ್ರೀ ಡಾ. ಚನ್ನನಗೌಡ ಪಾಟೀಲ್ ಇವರು ಮಕ್ಕಳಿಗೆ ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿ, ನೀರಿನ ಅಗತ್ಯತೆ ಬಗ್ಗೆ ಮಾತನಾಡಿದರು..
ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀ ಅಮರೇಶ ಹೂಗಾರ, ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಸುಕಾಲಪೇಟೆ ಸಿಂಧನೂರು ಇವರು ನೀರಿನ ಮಹತ್ವ: ಇಂದಿನ ಸವಾಲುಗಳು & ನಾಳೆಯ ಪರಿಹಾರಗಳು ವಿಷಯದ ಕುರಿತು ವೈಜ್ಞಾನಿಕ ರೀತಿಯಲ್ಲಿ ನೀರಿನ ಪ್ರಾಮುಖ್ಯತೆ, ಬಳಕೆ, ನೀರು ವ್ಯರ್ಥವಾಗದಂತೆ ತಡೆಗಟ್ಟುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಹಿತಿ ನೀಡಿದರು…
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಡಾ. S.V. ಪಾಟೀಲ್, ಚೆರ್ಮನ್, VCB ಪ್ರಾಥಮಿಕ & HVBHP ಪ್ರೌಢ ಶಾಲೆ ಸಿಂಧನೂರು ಇವರು ನೀರು ಜೀವಜಲ ಅದನ್ನು ಮಿತವಾಗಿ ಬಳಸುವುದರ ಕುರಿತು ಮಾತನಾಡಿದರು..
ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ಮಂಜುನಾಥ ಹಿರೇಮಠ, BRP ಸಿಂಧನೂರು ಇವರು ಕಾರ್ಯಕ್ರಮದ ಪ್ರಾಸ್ತವಿಕವಾಗಿ ಮಾತನಾಡಿದರು..
ಕಾರ್ಯಕ್ರಮದ ಅತಿಥಿಗಳಾಗಿ ಶ್ರೀಮತಿ ರಂಗಮ್ಮ , ಸ.ಶಿ. ಶ್ರೀಮತಿ ಹಂಪಮ್ಮ ವೆಂಕಟರಾವ್ ಬಾದರ್ಲಿ ಸ್ಮಾರಕ ಪ್ರೌಢ ಶಾಲೆ ಸಿಂಧನೂರು
ಶ್ರೀ ಪೊಂಪಾಪತಿ ಕೆ ಎಸ್, ಮು.ಗು. ವಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಿಂಧನೂರು ಇವರು ಉಪಸ್ಥಿತರಿದ್ದರು..


