ನೈಜ್ಯ ದೆಸೆ : ಲಿಂಗಸಗೂರು :- ಡಿ 1 ತಾಲೂಕಿನ ಶ್ರೀ ವಿಜಯ ಮಾಂತೇಶ್ವರ ಮಠ ದಲ್ಲಿ ರಾಯಚೂರು ಜಿಲ್ಲೆಯ ಗೋರ್ ಬಂಜಾರ ನೌಕರರ ಬಳಗದ ವತಿಯಿಂದ ಜಿಲ್ಲಾ ಮತ್ತು ಲಿಂಗಸಗೂರು ತಾಲೂಕಿನ ಸಂಯುಕ್ತ ಆಶ್ರಯದಲ್ಲಿ ರಾಯಚೂರು ಜಿಲ್ಲಾ ಗೋರ್ ಬಂಜಾರ ನೌಕರರ ಬಳಗದ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇಯ ಜಿಲ್ಲಾ ಸಮಾವೇಶದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಪ್ರತಿಭಾವಂತ ಸಾಧಕರು ಗಳಿಗೆ ಸನ್ಮಾನ ಕಾರ್ಯಕ್ರಮ ವನ್ನು ಡೊಳ್ಳು ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಉಪನ್ಯಾಸಕರಾದ ಭೋಜರಾಜ್ ಎಸ್ ನಾಯ್ಕ ರವರು
ಯಾರಿಗೂ ಒಲಿಯದ ದೇವರು ನಮ್ಮ ಬಂಜಾರ ಧರ್ಮಕ್ಕೆ ಆಶೀರ್ವದಿಸಿದ್ದಾನೆ .
ಈ ನಮ್ಮ ಗೋರ್ ಬಂಜಾರ ಸಮಾಜವು ತುಂಬಾ ಪ್ರಾಚೀನ ಕಾಲದ ಸಮಾಜ ವಾಗಿದೆ . ಈ ಸಮುದಾಯವನ್ನು ಸಮಾಜದ ಗುರುಗಳು , ನೌಕರರು , ದೊಡ್ಡ ದೊಡ್ಡ ವ್ಯಕ್ತಿಗಳು ಈ ಸಮಾಜವನ್ನು ಮುನ್ನಡೆಸ ಬೇಕಿದೆ . ಹಸಿವಾದವರಿಗೆ ಅನ್ನ , ಭಾಯಾರಿಸಿದವರಿಗೆ ನೀರು , ಆಶ್ರಯ ಬಯಸಿ ಬಂದವರಿಗೆ ಆಶ್ರಯ ಕೊಡಬೇಕೆಂದು ನಮ್ಮ ಗುರುಗಳು ಹೇಳಿದ್ದಾರೆ . ಇತಿಹಾಸ ತೆಗೆಯುತ್ತ ಹೋದರೆ ನಮ್ಮ ಬಂಜಾರ ಸಮಾಜಕ್ಕೆ ದೇವರ ಕೃಪೆ ಇದೆ. ಅದರ ಜೊತೆಗೆ ಸಂತ ಸೇವಾಲಾಲರು ಯಾವ ಬೇರೆ ಬೇರೆ ಧರ್ಮದ ರೂಪದಲ್ಲಿ ಪವಾಡ ಮಾಡಿದ್ದಾರೋ ಗೊತ್ತಿಲ್ಲ ಆದರೆ ಇವರು ಭೂಮಿಮೇಲೆ ಹಲವಾರು ಪವಾಡವಂತು ಮಾಡಿದ್ದಾರೆ . ಸಂತ ಸೇವಾಲಾಲರು ಹಾಗೂ ಎರಡು ವರ್ಷದ ಹಿಂದೆ ಲಿಂಗಕ್ಯರಾದ ಭಗವಾನ್ ಶ್ರೀ ರಾಮರಾವ್ ಇವರು ಪ್ರತ್ಯಕ್ಷ ಪವಾಡ ಮಾಡಿದ್ದಾರೆ . ಗೋರ್ ಬಂಜಾರ ಸಮಾಜದಲ್ಲಿನ ಸಂಸ್ಕೃತಿ.ಆಚರಣೆ ಮೂಲತವಾಗಿಪ್ರಾಚೀನ ಇತಿಹಾಸ ಹೊಂದಿರುವದ ಗೋರ್ ಬಂಜಾರ ಸಮುದಾಯವು ಪ್ರಾಚೀನತೆ ಹೊಂದಿರುತ್ತದೆ ಇತಿಹಾಸ ಗೊತ್ತಿಲ್ಲದವರಿಗೆ ಇತಿಹಾಸ ಬರೆಯಲು ಸಾಧ್ಯವಿಲ್ಲ ಎಂಬಂತೆ ಸಿಂದೂ ನದಿಯ ಕಣಿವೆಯಲ್ಲಿ ವಾಸಿಸುತ್ತಿರುವುದು ಮೂಲತಃ ಗೋರ್ ಬಂಜಾರ ಸಮಾಜದವರಾಗಿರುತ್ತಾರೆ ಎಂದು ಹೇಳಿದರು.ಅದರಂತೆ ಶೈಕ್ಷಣಿಕ ವಾಗಿ ಆರ್ಥಿಕವಾಗಿ ಧಾರ್ಮಿಕ ವಾಗಿ ಸಾಮಾಜಿಕ ವಾಗಿ ಪ್ರಗತಿ ಪಥ ದತ್ತ ಸಾಗುತ್ತಿರುವ ಅತ್ಯುನ್ನತಿಯ ಜನಾಂಗದವರಾಗಿ ಜನ ಜಾಗೃತಿ ಹೊಂದುತ್ತಿರುವ ಸಮಾಜವು.ಸುಧಾರಣೆ ಕಾಣುತ್ತ ಸಾಕಷ್ಟು ಅರಿವು ಪಡೆಯುತ್ತಾ ಸಂಸ್ಕೃತಿ ಆಚರಣೆ ಮೂಲಕ ಅಭಿವೃದ್ಧಿ ಪಥದ ಮಾರ್ಗ ದರ್ಶಿನದಲ್ಲಿ ಮಾದರಿಯಾಗಿ ಸಂತರು ಶರಣರು ಬಂದಿದ್ದಾರೆ ಎಂದರು . ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳು ವಹಿಸಿದ್ದರು ಅಧ್ಯಕ್ಷತೆಯನ್ನು ಶಂಕರ್ ರಾಥೋಡ್ ಪ್ರಾಚಾರ್ಯರು ಸ.ಪ. ಪೂರ್ವ ಕಾಲೇಜು ಗುರುಗುಂಟಾ ವಹಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಅಮರೇಶ ನಾಯಕ ಕೆಎಎಸ್ ನಿರ್ದೇಶಕರು ಪಂಚಾಯತ್ ರಾಜ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರುರವರು ವಹಿಸಿದ್ದರು. ನಂತರ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾವಂತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚೆನ್ನಪ್ಪ ರಾಥೋಡ್ ಸೋಮನಾಥ ಕೃಷ್ಣ ಜಾದವ್ ಶಂಕರ್ ರಾಥೋಡ್ ಲಕ್ಷ್ಮಿಪತಿ ನಾಯಕ್ ಶರಣಪ್ಪ ಚವ್ಹಾನ್ ಚಂದ್ರಶೇಖರ್ ಪವಾರ್ ಟಿ ನಾಯಕ ಬೋಜರಾಜ ಎಸ್ ನಾಯಕ್ ಶೆಟ್ಟಪ್ಪ ನಾಯಕ ಶಿವಪ್ಪ ಶಿವಾನಂದ ನಾಯಕ ಗಂಗಪ್ಪ ಪವಾರ್ ರಾಜು ಪವಾರ್ ಹಾಗೂ ಗೋರ್ ಬಂಜಾರ ಸಮಾಜದ ಗುರುಹಿರಿಯರು ಮಹಿಳೆಯರು , ಯುವಕರು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

