ಮಾನ್ವಿ: ಪಟ್ಟಣದ ಕುಬ್ಬ ಮಸೀದಿಯ ಆವರಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಜಿ.ಐ.ಓ. ಸಿ.ಐ.ಓ. ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ನೆರೆಹೊರೆಯವರ ಹಕ್ಕುಗಳು ರಾಷ್ಟçವ್ಯಾಪಿ ಅಭಿಯಾನ 2025 ಅಂಗವಾಗಿ ನಡೆದ ಜಾತ ಕಾರ್ಯಕ್ರಮಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಚಾಲನೆ ನೀಡಿ ಮಾತನಾಡಿ ಇಂದಿನ ಆಧುನಿಕ ಜೀವನ ಪದ್ದತಿಯಿಂದಾಗಿ ಜೀವನ ವಿಧನಗಳು ಬದಲಾಗಿದ್ದು ಜನರಲ್ಲಿ ಏಕಾಂತ ಪ್ರಿಯತೆ, ಸಾಂಸ್ಕೃತಿಕ ಧ್ರುವೀಕರಣ ಹಾಗೂ ಡಿಜಿಟಲ್ ಲೋಕ ಮುಂತಾದವುಗಳಿAದಾಗಿ ನೆರೆಹೊರೆಯವರು ಪರಸ್ಪರ ದೂರವಾಗುತ್ತಿದ್ದಾರೆ ಹಾಗೂ ನೆರೆಹೊರೆಯ ಸಂಬAಧಗಳು ದೂರವಾಗುತ್ತಿವೆ. ಆದ್ದರಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮನೆಯ ಸುತ್ತ ಮುತ್ತಲಿನಲ್ಲಿ ವಾಸಮಾಡುತ್ತಿರುವ ನಿವಾಸಿಗಳೊಂದಿಗೆ ಸೌಹಾರ್ಧಯುತವಾದ ಸಂಬAದಗಳನ್ನು ಮರು ಸ್ಥಾಪಿಸುವುದಕ್ಕಾಗಿ ರಾಷ್ಟ್ರವ್ಯಾಪ್ತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಹಲವು ಕಾರ್ಯಕ್ರಮಗಳ ಮೂಲಕ ನೆರೆಹೊರೆಯವರ ಹಕ್ಕುಗಳ ಅರಿವು ಮೂಡಿಸುವುದರ ಜೊತೆಗೆ ಮಾದರಿ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗೋಣ ಎಂದು ತಿಳಿಸಿದರು
ಜಮಾತೆ ಇಸ್ಲಾಮಿ ಹಿಂದ್ ರಾಯಚೂರು ಜಿಲ್ಲಾ ಸಂಚಾಲಕರಾದ ಅಬ್ದುಲ್ ಕರೀಂ ಖಾನ್ ಮಾತನಾಡಿದರು.
ಪಟ್ಟಣದ ಕುಬ್ಬ ಮಸೀದಿಯಿಂದ ಪ್ರಮುಖ ಬೀದಿಗಳ ಮೂಲಕ ಬಸವ ವೃತ್ತ ದಿಂದ ಟಿ.ಎ.ಪಿ.ಸಿ.ಎಂ.ಎಸ್. ಬಯಲು ಜಾಗದ ವರೆಗೆ ನೆರೆಹೊರೆಯವರ ಹಕ್ಕುಗಳು ರಾಷ್ಟçವ್ಯಾಪಿ ಅಭಿಯಾನ 2025 ಜಾತ ನಡೆಯಿತು.
ಜಾತದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಜಿ.ಐ.ಓ. ಸಿ.ಐ.ಓ. ತಾಲೂಕು ಘಟಕಗಳ ನೂರಾರು ಸದಸ್ಯರು ಭಾಗವಹಿಸಿದರು.
ಕಾರ್ಯದರ್ಶಿಗಳಾದ ಸಬ್ಜಲಿ, ಮಹಿಳಾ ಘಟಕ ಅಧ್ಯಕ್ಷರಾದ ಸೈಯಾದ ಇಶಾರತ್ ಜಹ , ,ಜಿ.ಐ.ಹೆಚ್, ಮಹಿಳಾ ಘಟಕದ ಅಧ್ಯಕ್ಷರಾದ ಆಯಶಾ ಖಾನಮ್ , ಶಂಶದ್ ಬೇಗಂ ಸದಸ್ಯರಾದ ಮೊಹಮ್ಮದ್ ದವೂದ ಸಿದ್ದಿಕಿ, ಉಮರ್ ಫಾರೂಕ್ ದೇವರಮನಿ, ಶೇಕ್ ಬಾಬಾ ಹುಸೇನ್ , ನಾಸೀರ್ ಅಲಿ, ಎಂ.ಎA.ಖಾನ್, ಮೆಹಮೂದ್,ಮಾಹಮ್ಮದ್ ಮುರ್ತುಜ,ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ಪಟ್ಟಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಜಿ.ಐ.ಓ. ಸಿ.ಐ.ಓ. ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ನೆರೆಹೊರೆಯವರ ಹಕ್ಕುಗಳು ರಾಷ್ಟçವ್ಯಾಪಿ ಅಭಿಯಾನ 2025 ಅಂಗವಾಗಿ ಜಾತ ನಡೆಯಿತು.

