ಸಿಂಧನೂರು ಗೆಳೆಯರ ಬಳಗ ಸಂಘಟನೆಯು ಸ್ಥಾಪನೆಗೊಂಡು 5 ವರ್ಷ ತುಂಬಿದ ಹಿನ್ನೆಲೆ ವಾರ್ಷಿಕೋತ್ಸವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸರ್ಕಾರಿ ನೌಕರರ ಭವನದಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆರ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ ಬಾದರ್ಲಿ, ಮುಖಂಡರಾದ ಶಿವು ಗುಂಜಳ್ಳಿ, ಸೈಯಾದ್ ಆರೂನ್ ಸಾಬ್, ಎಂ.ಡಿ.ನದಿಮುಲ್ಲಾ, ಮರಿಯಪ್ಪ ಡಿಎಸ್ಪಿ, ಅಮರೇಶ ಗಿರಿಜಾಲಿ, ಹೊಳೆಯಪ್ಪ ದಿದ್ದಿಗಿ, ಶಿಕ್ಷಕ ವೀರೇಶ ಸಾಸಲಮರಿ, ವೀರೇಶ ಉಪ್ಪಲದೊಡ್ಡಿ, ದವಲಸಾಬ್ ದೊಡ್ಮನಿ, ಮೌನೇಶ ಜಾಲವಾಡಗಿ, ವೆಂಕಟೇಶ ನಾಯಕ, ಸೇರಿದಂತೆ ಅನೇಕರು ಈ ಪೋಸ್ಟರ್ ಬಿಡುಗಡೆ ಅತಿಥಿಗಳಾಗಿ ಭಾಗವಹಿಸಿ ಪೋಸ್ಟರ್ ಬಿಡುಗಡೆ ಗೊಳಿಸಿದರು.

ತದನಂತರ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ಜಾತಿಗೊಂದು ಸಂಘಟನೆ, ಧರ್ಮಕ್ಕೊಂದು ಸಂಘಟನೆ ಹುಟ್ಟಿಕೊಳ್ಳುತ್ತಿರುವುದು ಹೆಚ್ಚಾಗಿದ್ದು, ಜಾತಿ ರಹಿತ ಧರ್ಮ ರಹಿತ ಸಾಮರಸ್ಯ ಬದುಕಿಗಾಗಿ ಗೆಳೆಯರ ಬಳಗ ಹುಟ್ಟಿಕೊಂಡಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ ಇಷ್ಡು ದಿನಗಳ ಕಾಲ ತೆರೆಮರೆಯಲ್ಲಿ ಪ್ರಚಾರ ಪಡೆಯದೆ ಸೇವೆ ಸಲ್ಲಿಸಿದ ಈ ಬಳಗವು 28 ಜನವರಿ 2026 ರಂದು ರಂಗಮಂದಿರದಲ್ಲಿ 5 ನೇ ವರ್ಷದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಜೊತೆಗೆ ಪ್ರಬಂಧ ಸ್ಪರ್ಧೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾಕೂಟ ಮತ್ತು ಜಿ ಟಿವಿ ಕಾಮಿಡಿ ಕಲಾವಿದರಿಂದ ಖ್ಯಾತ ಜನಪದ ಕಲಾವಿದರಿಂದ ಹಾಸ್ಯಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಗೆ ಎಲ್ಲಾರು ಸಹಕರಿಸಲು ಕೋರಿದರು.

ಈ ವೇಳೆ: ಬಳಗದ ಅಧ್ಯಕ್ಷ ಸೈಯಾದ್ ಬಂದೇನವಾಜ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ, ಸಂಚಾಲಕ ವೀರೇಂದ್ರ ಶೆಟ್ಟಿ, ಖಜಾಂಚಿ ಬಸವರಾಜ ಬುಕನಹಟ್ಟಿ, ಸದಸ್ಯರಾದ ರಾಜು ನಾಯಕ, ಶ್ರೀಷಾ ಮೆಲೋಡಿಸ ಸಂಸ್ಥಾಪಕ ಅಲ್ಲಾಭಕ್ಷಿ, ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಇದ್ದರು. ಕಾರ್ಯಕ್ರಮದ ನಿರೂಪಣೆ ಉಮೇಶ ಕಲ್ಮಂಗಿ ನೆರವೇರಿಸಿದರು.

Leave a Reply

Your email address will not be published. Required fields are marked *