ಮಾನ್ವಿ ತಾಲೂಕಿನಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ನಾಗಲಾಂಬಿಕ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಜಯಶ್ರೀ ಶರಣಪ್ಪ ಮೇದಾರ್ ಉದ್ಘಾಟನೆಯಲ್ಲಿ ದ್ವೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಸದರಿ ಕಾರ್ಯಕ್ರಮ ಜಿಲ್ಲಾ ನಿರ್ದೇಶಕ ಮೋಹನ್ ನಾಯಕ್ ಸದಸ್ಯರಿಗೆ ಜ್ಞಾನ ವಿಕಾಸ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು ಕಾರ್ಯಕ್ರಮದಲ್ಲಿ ಪೊಲೀಸ್ ಉಪದೀಕ್ಷಕರಾದ ಚಂದ್ರಶೇಖರ್ ಕಾನೂನು ಸಲಹೆ ಶಿಕ್ಷೆಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಗಿರಿಜಾ ಆಹಾರ ಸಂಸ್ಕರಣ ಘಟಕ ಸಂಸ್ಥಾಪಕೆ ವನಮಾಲದೇವಿ ಆಯುರ್ವೇದಿಕ್ ಕಾಲೇಜ್ ವೈದ್ಯೆ ಸುಶ್ಮಿತಾ ಮಹಿಳೆಯರ ಮುಟ್ಟಿನ ಬಗ್ಗೆ ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು‌. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಮೆಹಬೂಬ್ ಮದ್ಲಾಪುರ ಮತ್ತು ಪಂಚಾಯಿತಿ ಅಧ್ಯಕ್ಷರಾದ ತಿಪ್ಪಣ್ಣ ಬಾಗಲವಾಡ, ತಾಲೂಕ ಯೋಜನಾಧಿಕಾರಿ ಸುನೀತ ಪ್ರಭು, ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ, ಸುಧಾ ಕೊಪ್ಪಳ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ತಾಲೂಕಿನ ಸೇವಾ ಪ್ರತಿನಿಧಿಗಳು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಲಮಂಗಳ ಯೋಜನೆಯಲ್ಲಿ ವೀಲ್ ಚೇರ ವಿತರಣೆ ಮಾಡಲಾಯಿತು, ಮಂಜೂರಾಧ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜುರಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಜೋತಿ ಸಿಬ್ಬಂಧಿಗಳು ಇದ್ದರು

Leave a Reply

Your email address will not be published. Required fields are marked *