ಪೋತ್ನಾಳ್ -: ರಾಗಲಪರ್ವಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭಿಮಾನಿ ಬಳಗದಿಂದ ಹಾಗೂ ಕಾಂಗ್ರೇಸ್ ಕಾರ್ಯಕರ್ತರಿಂದ ರಾಗಲಪರ್ವಿ ಕ್ರಾಸಿನಿಂದ ಮಂಗಳವಾರ ಪಾದಯಾತ್ರೆ ಮೂಲಕ ಐದು ಕೀ.ಮೀ ದೂರದ ಪೊತ್ನಾಳ್ ಸೀಮೆ ವ್ಯಾಪ್ತಿಗೆ ಬರುವ ರಾಯಚೂರು ಸಿಂಧನೂರು ಮುಖ್ಯ ರಸ್ತೆಯಲ್ಲಿರುವ ಗಾಳಿ ದುರಗಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಹಂಪನಗೌಡ ಬಾದರ್ಲಿಯವರು ಜಿಲ್ಲೆಯ ಹಿರಿಯ ಶಾಸಕರಾಗಿದ್ದು, ಶಿಕ್ಷಣ ಹಾಗೂ ನೀರಾವರಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಸಿಂಧನೂರು ತಾಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದ ಹೊಸ ಕಟ್ಟಡ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಅನುದಾನವನ್ನು ತರುವ ಮೂಲಕ ಶಕ್ತಿ ಪೀಠ ಅಂಬಾಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಇಂತಹವರಿಗೆ ಸಚಿವ ಸ್ಥಾನವನ್ನು ನೀಡಿದಲ್ಲಿ ತಾಲೂಕು ಸೇರಿದಂತೆ ಇಡೀ ರಾಯಚೂರು ಜಿಲ್ಲೆ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಈಗಿನ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಬಿ.ಕೆ. ಹರಿಪ್ರಸಾದರವರು ಶಾಸಕ ಹಂಪನಗೌಡರಿಗೆ ಸಚಿವ ಸ್ಥಾನ ನೀಡಲು ಮನಸ್ಸು ಮಾಡಬೇಕೆಂದು ಅವರಲ್ಲಿ ಮನವಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹನುಮರೆಡ್ಡೆಪ್ಪಗೌಡ ರಾಮತ್ನಾಳ್, ದೊಡ್ಡಅಮರಯ್ಯ ವಲಕಮದಿನ್ನಿ, ನಾಗರಾಜ ರಾಮತ್ನಾಳ್, ರಾಮಣ್ಣ ಗೊನವಾರ, ಅರುಣಕುಮಾರ ನಾಯಕ ಯಾಪಲಪರ್ವಿ, ದುರಗಪ್ಪ ದಿದ್ದಿಗಿ, ಸಾಲುಮನ್ ವಕೀಲರು, ಸೂಗನಗೌಡ ಪೊಲೀಸ್ ಪಾಟೀಲ್ ಬನ್ನಿಗನೂರು, ಯಾಪಲಪರ್ವಿ ಗ್ರಾಮದ ಶರಣಪ್ಪ, ಚಂದ್ರಶೇಖರ, ನಾಗರೆಡ್ಡಿ, ಸಾಬಣ್ಣ, ಹಾಗೂ ಬಸವರಾಜ ಪುಲದಿನ್ನಿ ಸೇರಿದಂತೆ ಅನೇಕರಿದ್ದರು.

