ತಾಂತ್ರಿಕ ಜ್ಞಾನ, ಗಣಿತ–ವಿಜ್ಞಾನ ಅನ್ವಯಿಕತೆ ಮತ್ತು ತಂಡಸ್ಫೂರ್ತಿಯ ಪ್ರಾಯೋಗಿಕ ಅನುಭವ
ಸಿಂಧನೂರು: ನೋಬಲ್ ಟೆಕ್ನೋ ಶಾಲೆ ಇತ್ತೀಚೆಗೆ 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಕೈಗಾರಿಕಾ ಭೇಟಿಯನ್ನು ಆಯೋಜಿಸಿತು. ವಿದ್ಯಾರ್ಥಿಗಳು ಪೇಪರ್ ಕಪ್, ಪೇಪರ್ ಪ್ಲೇಟ್, ಸರ್ವಿಸ್ ವೈರ್, ಟ್ರಾನ್ಸ್‌ಫಾರ್ಮರ್ ಮತ್ತು ಐರನ್ ಕೈಗಾರಿಕೆಗಳನ್ನು ಭೇಟಿ ಮಾಡಿ ಉತ್ಪಾದನಾ ಪ್ರಕ್ರಿಯೆಗಳ ಪ್ರಾಯೋಗಿಕ ಅವಲೋಕನ ಮಾಡಿಕೊಂಡರು.
ಸಂಸ್ಥೆಯ ಆಡಳಿತಾಧಿಕಾರಿಯಾದ ಸೈಯ್ಯದ್ ತನವೀರ್ ಕೈಗಾರಿಕಾ ಭೇಟಿಗಳು ನಿಮ್ಮ ಭವಿಷ್ಯ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಪುಸ್ತಕದಲ್ಲಿ ಓದುವ ಜ್ಞಾನಕ್ಕಿಂತಲೂ, ನೈಜವಾಗಿ ನೋಡಿದಾಗ ಅನುಭವದ ಕಲಿಕೆ ಉಂಟಾಗುತ್ತದೆ ಪೇಪರ್ ಪ್ಲೇಟ್ ತಯಾರಿಕಾ ಘಟಕದಲ್ಲಿ ನೀವು ನೋಡಿ ತಿಳಿದುಕೊಂಡಂತೆ — ಸರಳ ಕಾಗದವು ಯಂತ್ರಗಳ ಸಹಾಯದಿಂದ ಒಂದು ನಿಮಿಷದಲ್ಲಿ 80 ಉಪಯುಕ್ತ ಪ್ಲೇಟ್ ಆಗಿ ರೂಪಾಂತರಗೊಳ್ಳುತ್ತದೆ. ಇಲ್ಲಿ ನಿಖರತೆ, ವೇಗ, ಗುಣಮಟ್ಟ ಮತ್ತು ತಂಡದ ಕೆಲಸ ಇದು ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ ವಿದ್ಯಾರ್ಥಿಗಳೇ, ಇಂತಹ ಕೈಗಾರಿಕಾ ಭೇಟಿಗಳು ನಿಮ್ಮಲ್ಲಿ ಜ್ಞಾನವಷ್ಟೇ ಅಲ್ಲ — ಕಾರ್ಯಶೀಲತೆ, ಹೊಣೆಗಾರಿಕೆ, ಪರಿಸರ ಜಾಗೃತಿ ಮತ್ತು ಜೀವನ ಮೌಲ್ಯಗಳನ್ನು ರೂಪಿಸುತ್ತವೆ. ಕಲಿಯಲು ಸಿದ್ಧರಾಗಿರಿ, ಪ್ರಶ್ನಿಸಲು ಹೆದರಬೇಡಿ, ಎಂದರು
ಶಾಲೆಯ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಶಾಜಿಯಾ ಪೇಪರ್ ಕಪ್ ಉತ್ಪಾದನಾ ಘಟಕದಲ್ಲಿ ಮಾತನಾಡಿ ಪೇಪರ್ ಕಪ್ ಗಳ ತಯಾರಿಕಾ ವಿಧಾನ ಮತ್ತು ಶೀಟ್ ಮೋಲ್ಡಿಂಗ್, ಸೀಲ್ ಮಾಡುವ ವಿಧಾನ, ಪ್ಯಾಕೇಜಿಂಗ್ ಪ್ರಕ್ರಿಯ ವಿಸ್ತಾರವಾಗಿ ವಿವರಿಸಿದರು.
ನಂತರ ವಿಷಯಾಧಾರಿತ ಮಾಹಿತಿ ನೀಡಿದರು.
ಗಣಿತ ಶಿಕ್ಷಕಿ ಉಷಾ ಮ್ಯಾಡಂ — ಕೈಗಾರಿಕೆಯಲ್ಲಿ ಗಣಿತದ ಪ್ರಾಯೋಗಿಕ ಬಳಕೆ: ಅಳತೆ, ವಿಸ್ತೀರ್ಣ–ಪರಿಧಿ, ಪ್ರಮಾಣ ಮತ್ತು ಲೆಕ್ಕಾಚಾರಗಳ ಘಟಕದಲ್ಲಿ ಬಳಕೆಯ ಕುರಿತು ವಿವರಿಸಿದರು ನಂತರ ಕನ್ನಡ ಶಿಕ್ಷಕಿ ಶ್ರೀಮತಿ ಗಂಗಮ್ಮ — ಸಂವಹನ, ಜವಾಬ್ದಾರಿ ಹಂಚಿಕೆ ಮತ್ತು ಕೆಲಸದ ನೈತಿಕ ಮೌಲ್ಯಗಳ ಮಹತ್ವವನ್ನು ವಿವರಿಸಿದರು
ವಿಜ್ಞಾನ ಶಿಕ್ಷಕಿ ಹಫ್ಸಾ ಮಾತನಾಡಿ — ತಾಪಮಾನ, ಘರ್ಷಣೆ, ಮೆಕ್ಯಾನಿಕಲ್ ಶಕ್ತಿ, ಮೋಟಾರ್ ಕಾರ್ಯವೈಖರಿ ಮತ್ತು ಇತರ ವೈಜ್ಞಾನಿಕ ತತ್ವಗಳ ಪ್ರಾಯೋಗಿಕ ಅನ್ವಯ ತೋರಿಸಿದರು
ಶ್ರೀಮತಿ ಸುಮಾ — ವೋಲ್ಟೇಜ್ ಪರಿವರ್ತನೆ, ಇನ್ಸುಲೇಷನ್ ವಿಜ್ಞಾನ, ಕಾಯಿಲ್ ವ್ಯವಸ್ಥೆಗಳ ವೈಜ್ಞಾನಿಕ ಹಿನ್ನಲೆ ಬಗ್ಗೆ ವಿವರಿಸಿದರು
ಇಂಗ್ಲಿಷ್ ಶಿಕ್ಷಕಿ ಮುಬೀನಾ— ಕೈಗಾರಿಕೆಗಳಲ್ಲಿ ಬಳಕೆಯಾದ ಇಂಗ್ಲಿಷ್ ಪದಗಳು, ಲೇಬಲಿಂಗ್, safety instructions ಮತ್ತು ಕಾರ್ಮಿಕರು ಬಳಸುವ ಸಮಾನ ಪದಗಳ ಪ್ರಾಯೋಗಿಕ ಮಹತ್ವವನ್ನು ವಿವರಿಸಿದರು.
ಶ್ರೀಮತಿ ಜಯಶ್ರೀ ವಿದ್ಯಾರ್ಥಿಗಳ ಹಾಗೂ ಶಿಕ್ಷಕರು ಭೇಟಿಯ ಸಂದರ್ಭದಲ್ಲಿ ಫೀಲ್ಡ್ ನೋಟ್ಸ್, ಚಿತ್ರ–ವೀಡಿಯೋ ದಾಖಲೆಗಳು ಮತ್ತು ಕೈಗಾರಿಕ ಭೇಟಿ ವರದಿಯನ್ನು ಸಂಗ್ರಹಿಸಿದ್ದರು. ಈ ದಾಖಲೆಗಳು ಮುಂದಿನ project ಕಾರ್ಯಗಳು ಮತ್ತು ತರಗತಿ ಚಟುವಟಿಕೆಗಳಿಗೆ ಮಹತ್ವಪೂರ್ಣ ಸಂಪನ್ಮೂಲವಾಗಿವೆ.
ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು
ಜವೆರಿಯಾ 7ನೇ ತರಗತಿ ವಿದ್ಯಾರ್ಥಿನಿ ಸರ್ವಿಸ್ ವೈರ್ ಉತ್ಪಾದನೆಯ ಪ್ರಕ್ರಿಯೆ, ಇನ್ಸುಲೇಷನ್ ಮತ್ತು ಗುಣಮಟ್ಟ ಪರೀಕ್ಷೆಗಳು ನೇರವಾಗಿ ನೋಡಿ ಉತ್ತಮ ಜ್ಞಾನ ದೊರಕಿತು ಶಿಕ್ಷಕರಿಗೆ ಕೈಗಾರಿಕೆ ಘಟಕದ ಎಲ್ಲಾ ಕಾರ್ಮಿಕರಿಗೆ ಮತ್ತು ಉದ್ಯಮಿಗಳಿಗೆ ಕೈಗಾರಿಕಾ ಭೇಟಿಗಾಗಿ ಕೃತಜ್ಞತೆಯನ್ನು ಹೇಳಿದರು
ಸನ್ನಿಧಿ 6ನೇ ತರಗತಿ: ಟ್ರಾನ್ಸ್‌ಫಾರ್ಮರ್‌ಗಳ ಮೂಲಕ ವೋಲ್ಟೇಜ್ ನಿಯಂತ್ರಣದ ಪ್ರಕ್ರಿಯೆ ವಿಜ್ಞಾನ ಕಲಿಕೆಗೆ ಸ್ಪಷ್ಟತೆ ನೀಡಿತು
ಅಲಿಯಾ 6ನೇ ತರಗತಿ ಪೇಪರ್ ಪ್ಲೇಟ್ ತಯಾರಿಕೆಯ ಹಂತಗಳು—ಶೀಟ್ ಕಟಿಂಗ್, ಪ್ರೆಸ್, ಗುಣಮಟ್ಟ ತಪಾಸಣೆ—ಇವುಗಳನ್ನು ನೋಡಿ ಬಹಳ ಸಂತೋಷವಾಯಿತು ಇನ್ನು ಹೆಚ್ಚು ಹೆಚ್ಚು ಕೈಗಾರಿಗಳ ಭೇಟಿ ನೀಡುತ್ತೇನೆ ಎಂದಳು.
ಶಿಕ್ಷಕಿಯರ ಪ್ರತಿಕ್ರಿಯೆಗಳು
ಈ ಕೈಗಾರಿಕಾ ಯಾತ್ರೆಯು ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕ ಜ್ಞಾನವೇ ನೀಡಲಿಲ್ಲ—ಕೆಲವು ಪ್ರಮುಖ ಮೌಲ್ಯಗಳೂ ಬೆಳೆಸಿಕೊಳ್ಳಲು ಪ್ರೇರಣೆಯಾಯಿತು
ಪರಿಶ್ರಮ ಮತ್ತು ಶ್ರಮದ ಮೌಲ್ಯ
ಶಿಸ್ತು, ಸಮಯಪಾಲನೆ ಮತ್ತು ಕಾರ್ಯಶೀಲತೆ
ತಂಡಸ್ಫೂರ್ತಿ ಮತ್ತು ಸಂವಹನ ಕೌಶಲ್ಯಗಳು,ಜವಾಬ್ದಾರಿತನ
ಸ್ವಚ್ಛತೆ, ಸುರಕ್ಷತಾ ಜಾಗೃತಿ ಮತ್ತು ಸಂಪನ್ಮೂಲ ಸಂರಕ್ಷಣೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಮೂಲಕ ಶಾಲಾ ಆಡಳಿತ ಮಂಡಳಿಗೆ ಧನ್ಯವಾದಗಳು ಅರ್ಪಿಸಿದರು
ನೋಬಲ್ ಟೆಕ್ನೋ ಶಾಲಾ ಕೈಗಾರಿಕಾ ಬೇಟಿಗೆ ಸಹಕರಿಸಿದ ಶಿಕ್ಷಕಿಯರಾದ ಕಾವ್ಯ, ಅಸಿಲಾ,ಭಾಗ್ಯ, ಯಶಸ್ವಿಯಾಗಿ ನಡೆಸಲು ಸಹಕರಿಸಿದ ಕೈಗಾರಿಕಾ ಘಟಕಗಳು, ಮಾರ್ಗದರ್ಶನ ನೀಡಿದ ಎಲ್ಲಾ ಶಿಕ್ಷಕರು ಮತ್ತು ಕಾರ್ಯಕ್ರಮ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಶಾಲೆ ಆಡಳಿತಾಧಿಕಾರಿ ಇವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಂಪೂರ್ಣ ಕಾರ್ಯಕ್ರಮದ ಆಂಕರಿಂಗ್ 7ನೇ ತರಗತಿಯ ಬುಶ್ರಾ ನಿರ್ವಹಿಸಿದರು.
ಮಿಸ್ ಶರನಮ್ಮ ಕಾರ್ಯಕ್ರಮದ ಫೋಟೋ ಹಾಗೂ ವೀಡಿಯೋಗಳನ್ನು ಚಿತ್ರೀಕರಿಸಿ, ಪ್ರೆಸ್ ಮೀಡಿಯಾಗೆ ಮಾಹಿತಿಯನ್ನು ನೀಡಿದರು.

