ಕವಿತಾಳ:
ಪಟ್ಟಣ ಸಮೀಪದಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ
ಕಾಮಗಾರಿಗೆ ಭೂಮಿ ನೀಡಿರುವ ಅಮೀನಗಡ, ವಟಗಲ್
ಗ್ರಾಮಗಳ ವ್ಯಾಪ್ತಿಯ ರೈತರಿಗೆ ಸೂಕ್ತ ಪರಿಹಾರ
ಸಿಕ್ಕಿಲ್ಲ ಎಂದು ಆರೋಪಿಸಿದ ರೈತರು ಅಧಿಕಾರಿಗಳೊಂದಿಗೆ
ವಾಗ್ವಾದ ನೆಡೆಸಿದ ಘಟನೆ ಇಂದು ಜರುಗಿದೆ.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ಹೆದ್ದಾರಿ ಪ್ರಾಧೀಕಾರದ
ಭೂ ಸ್ವಾಧೀನ ಅಧಿಕಾರಿ ಗುರುಸಿದ್ದಯ್ಯ ಅವರಿಗೆ ಮನವಿ
ಮಾಡಿದ ರೈತರು ಸೂಕ್ತ ಪರಿಹಾರ ನೀಡುವಲ್ಲ
ಇತಾರತಮ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತ
ಪಡಿಸಿದರು.
`ಒಂದು ಜಮೀನಿಗೆ ಒಂದು ಚದರ ಮೀಟರ್‌ಗೆ ರೂ.50000
ರಂತೆ ಪರಿಹಾರ ನಿಗದಿ ಮಾಡಿದ್ದರೆ ಅದರ ಪಕ್ಕದ ಜಮೀನಿಗೆ
ಚದರ ಅಡಿಗೆ 37000 ರೂಪಾಯಿಯಂತೆ ನೀಗದಿ ಮಾಡುವ
ಮುಲಕ ತಾರತಮ್ಯ ಮಾಡಿರುವುದು ಸರಿಯಾದ
ಕ್ರಮವಲ್ಲ ಎಂದು' ರೈತರಾದ ಹುಚ್ಚರಡ್ಡಿ
ಹನಮಾರಡ್ಡಿಮತ್ತಿತರರು ದೂರಿದರು, ಹೊಲದಲ್ಲಿ
ಕೊಳವೆಬಾವಿ ರಸ್ತೆ ನಿರ್ಮಾಣ ಜಾಗದಲ್ಲಿ ಹೋಗಿದೆ ಹಿಗಾಗಿ
ಹೆಚ್ಚಿನ ಪರಿಹಾರ ವಿತರಣೆ ಮಾಡಬೆಕು ಎಂದು ರೈತ
ಹುಸೇನ್ ಸಾಬ್ ಆಗ್ರಹಿಸಿದರು.
ಭೂ ಸ್ವಾಧೀನ ಅಧಿಕಾರಿ ಗುರುಸಿದ್ದಯ್ಯ ಮಾತನಾಡಿ
`ಹೆಚ್ಚಿನ ಪರಿಹಾರ ಪಡೆಯಲು ರೈತರಿಗೆ ಅವಕಾಶವಿದ್ದು
ನ್ಯಾಯಾಲಯದ ಮೂಲಕ ಪಡೆಯಬೇಕು ಮತ್ತು
ಇದುವರೆಗೂ ಪರಿಹಾರ ಪಡೆಯದ ರೈತರು
ನ್ಯಾಯಾಲಯದಲ್ಲಿ ಜಮಾಮಾಡಿದ ಪರಿಹಾರ ಮೊತ್ತವನ್ನು
ಸೂಕ್ತ ದಾಖಲೆಗಳನ್ನು ನೀಡಿ ಪಡೆದುಕೊಳ್ಳಬಹುದು&
ಎಂದು ಸಮಜಾಯಿಸಿ ನೀಡಿದರು. ಮಸ್ಕಿ ತಹಸೀಲ್ದಾರ್
ಮಂಜಿನಾಥ ಭೋಗಾವತಿ, ಸಿಪಿಐ ಶಶಿಕಾಂತ್.ಎಂ, ಸಿರವಾರ ಠಾಣಾ
ಪಿಎಸ್‌ಐ ವೆಂಕಟೇಶ್ ನಾಯಕ್, ಎಜಿಎಂ ರವಿಕುಮಾರ್ ಸೇರಿದಂತೆ
ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

