ತಾಳಿಕೋಟಿ: ರೈತ ಸಂಪರ್ಕ ಕೇಂದ್ರದಲ್ಲಿ ಸನ್ 2026-27 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಸ್ಥಳದಲ್ಲಿ ತೊಗರಿ ಬೀಜಗಳಿಗೆ ಬೀಜೋಪಚಾರದ ಪ್ರಾತ್ಯಕ್ಷಿತೆಯನ್ನು ಕೈಗೊಂಡು ರೈತರಿಗೆ ಅದರಿಂದಾಗುವ ಅನುಕೂಲಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.
ರೈತರು ತೊಗರಿ ಬೆಳೆಯಲ್ಲಿ ಅಗಲ ಸಾಲು ಬಿತ್ತನೆ, ಅಂತರ ಬೇಸಾಯ ಪದ್ಧತಿ, 45 ದಿನಗಳ ನಂತರ ಕುಡಿ ಚಿವುಟುವದು ಮತ್ತು ಪಲ್ಸ್ ಮ್ಯಾಜಿಕ್ ಪಲ್ಸ್ ಬುಸ್ಟರ್ ಉಪಯೋಗದಿಂದಾಗಿ ತೊಗರಿ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಬಹುದೆಂದು ತಿಳಿಸಲಾಯಿತು.
ಸದ್ಯ ಕೇಂದ್ರದಲ್ಲಿ 114 ಕ್ವಿಂಟಲ ತೊಗರಿ, 60 ಕೆಜಿ ಹೆಸರು, 960 ಕೆಜಿ ಮೆಕ್ಕೆಜೋಳ, 150 ಕೆಜಿ ಸೂರ್ಯಕಾಂತಿ, 150 ಕೆಜಿ ಹೈಬ್ರಿಡ್ ಸಜ್ಜೆ ದಾಸ್ತಾನಿಕರಿಸಲಾಗಿದೆ.
ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಡಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್,ರವಿ ಗೌಡ ಪಾಟೀಲ, ಹನುಮಂತರಾಯಗೌಡ ಗೂಗಲ್, ಕೃಷಿ ಅಧಿಕಾರಿಗಳಾದ ಮಹೇಶ ಜೋಶಿ ಸಿಬ್ಬಂದಿಗಳಾದ ಸಂಗಮೇಶ ಪಾಟೀಲ, ಕಿರಣ ಬೊಮ್ಮನಹಳ್ಳಿ, ಹನುಮಂತರಾಯ ಕುಂಟರೆಡ್ಡಿ, ವಿರುಪಾಕ್ಷಿ ನಂದಿಕೋಲ, ಬಸವರಾಜ ಜಾಲವಾದಿ, ಹಿರಗಪ್ಪ ಅರಳಿಕಟ್ಟಿ ಹೋಬಳಿ ವ್ಯಾಪ್ತಿಯ ರೈತರು ಮತ್ತು ಕೃಷಿ ಸಖಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *