ಮಾನ್ವಿ: ಪಟ್ಟಣದ ನಗರಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾನ್ವಿ ತಾಲೂಕು ಘಟಕದಿಂದ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷರಿಗೆ ಕಚೇರಿಯ ಸಿಬ್ಬಂದಿ ಗುಲಾಂ ಗೌಸ್ ರವರ ಮೂಲಕ ಕನಿಪ ಸಂಘದ ತಾಲೂಕು ಅಧ್ಯಕ್ಷರಾದ ಆಶೋಕ ತಡಕಲ್ ಮನವಿ ಸಲ್ಲಿಸಿ ಮಾತನಾಡಿ ಪಟ್ಟಣದಲ್ಲಿ ಪತ್ರಕರ್ತರಿಗೆ ಸಾರ್ವಜನಿಕರ ಕೆಲಸಗಳಿಗಾಗಿ ಹಾಗೂ ಸುದ್ದಿಗೋಷ್ಠಿ ಸೇರಿದಂತೆ ಅಗತ್ಯ ಕರ್ತವ್ಯ ನಿರ್ವಹಿಸುವುದಕ್ಕೆ ಪತ್ರಿಕಾ ಭವನ ಅವಶ್ಯಕವಿರುವುದರಿಂದ ಪಟ್ಟಣದ ವಿವಿಧ ಅನುಮೋದಿತ ಬಡವಣೆಗಳಲ್ಲಿ ಲಭ್ಯವಿರುವ ಸಿ.ಎ.ಸೈಟ್‌ಅನ್ನು ಪತ್ರಿಕಾ ಭವನ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಕೋರಿದರು.
ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ತಾಯಪ್ಪ ಬಿ.ಹೋಸೂರು, ಕಾರ್ಯದರ್ಶಿ ರವಿಅಲ್ದಾಳ್ ಸೇರಿದಂತೆ ವಿಜಯಕುಮಾರ,ಗಯಾಸ್, ನವೀನ್‌ಕುಮಾರ, ರಾಜಶೇಖರ, ಶ್ರೀನಿವಾಸರೆಡ್ಡಿ, ಸಿದ್ದಾರಾಮಯ್ಯಸ್ವಾಮಿ, ದೇವರಾಜ, ಹುಸೇನಪ್ಪ ನಂದಿಹಾಳ್, ರಾಜಶೇಖರ್‌ಸ್ವಾಮಿ, ರಾಜಶೇಖರ್,ನಾಗರಾಜ ತಡಕಲ್,ಬಸವರಾಜ ತಡಕಲ್,ಮೈನುದಿನ್ನ್,ಚಂದ್ರಶೇಖರ್, ಶಿವುಸಜ್ಜನ್, ಜಿತೇಂದ್ರಸ್ವಾಮಿ ಇದ್ದರು.

Leave a Reply

Your email address will not be published. Required fields are marked *