ಮಾನ್ವಿ: ಪಟ್ಟಣದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ತಾಲೂಕು ಸಮಿತಿ ವತಿಯಿಂದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್.ಡಿ. ರವರಿಗೆ ಮನವಿ ಸಲ್ಲಿಸಿ ಎ.ಐ.ಡಿ.ಎಸ್.ಓ. ಜಿಲ್ಲಾ ಕಾರ್ಯದರ್ಶಿ ಬಸವರಾಜ ಮಾತನಾಡಿ ಕರ್ನಾಟಕ ರಾಜ್ಯ ಸರಕಾರವು ಬಜೆಟ್‌ನಲ್ಲಿ ಘೋಷಿಸಿರುವಂತೆ ಜೂನ್ ತಿಂಗಳಲ್ಲಿಯೇ ತಾಲೂಕಿನಲ್ಲಿ ಹೋಸ ಕೆ.ಪಿ.ಎಸ್. ಶಾಲೆಗಳನ್ನು ಪ್ರಾರಂಭಿಸಿ ಶಾಲೆಯ ವ್ಯಾಪ್ತಿಯಲ್ಲಿನ 5ಕಿ.ಮೀ ಒಳಗಿರುವ ಸರಕಾರಿ ಶಾಲೆಗಳನ್ನು ವಿಲೀನಗೊಳಿಸಿರುವುದಕ್ಕೆ ಮುಂದಾಗಿರುವುದರಿAದ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಪ್ರಾರಂಭವಾಗಲಿಸಿರುವ ಕೆ.ಪಿ.ಎಸ್. ಶಾಲೆಯ ವ್ಯಾಪ್ತಿಯಲ್ಲಿನ 5ಕಿ.ಮೀ ಒಳಗಿರುವ ಗ್ರಾಮಗಳಾದ ಸಿದ್ದಾಗರ್ಜ ಗ್ರಾಮ, ಬಲ್ಲಟಗಿ ಜನಾತಕಾಲೋನಿ, ಎನ್.ಹೋಸೂರು ಗ್ರಾಮ, ಡಾಕ್ಟರ್ ಕ್ಯಾಂಪ್, ಬಲ್ಲಟಗಿ ತಾಂಡದಲ್ಲಿನ ಸರಕಾರಿ ಶಾಲೆಗಳು ವಿಲೀನಗೊಳ್ಳುವುದರಿಂದ ಈ ಶಾಲೆಯಲ್ಲಿ ಅಭ್ಯಾಸಮಾಡುವ ಆರ್ಥಿಕವಾಗಿ ಅತ್ಯಂತ ಹಿಂದುಳಿದ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಬಲ್ಲಟಗಿ ಗ್ರಾಮಕ್ಕೆ ಮಕ್ಕಳು ನಿತ್ಯ ಬರುವುದಕ್ಕೆ ತೊಂದರೆಯಾಗುತ್ತದೆ .ರಾಜ್ಯ ಸರಕಾರವು ದ್ವಿಭಾಷಾ ಮಾಧ್ಯಮದ ಹೆಸರಿನಲ್ಲಿ 1 ನೇತರಗತಿಯಲ್ಲಿ ಕನ್ನಡದೊಂದಿಗೆ ಅಂಗ್ಲಮಾಧ್ಯಮವನ್ನು ಬೋದಿಸುವುದಕ್ಕೆ ಮುಂದಾಗಿರುವುದರಿAದ ವಿದ್ಯಾರ್ಥಿಗಳ ಮಾತೃಭಾಷೆಯಾದ ಕನ್ನಡ ಭಾಷೆಯ ಕಲಿಕೆಯ ಮೇಲೆ ಪರಿಣಾಮವಾಗಲಿದೆ ಅದ್ದರಿಂದ ಸರಕಾರಿ ಕನ್ನಡ ಮಾಧ್ಯಮಶಾಲೆಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕು,ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಬಾರದು.ಇಂಗ್ಲೀಷ್ ಮಾಧ್ಯಮಕ್ಕಾಗಿ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡಬೇಕು .ಕೆ.ಪಿ.ಎಸ್. ಮ್ಯಾಗ್ಬೆಟ್ ಯೋಜನೆಯನ್ನು ಹಿಂಪಡೆಯಬೇಕು. ನಮ್ಮೂರಶಾಲೆ ವಿಲೀನ ಕೈಬಿಟ್ಟು ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್.ಡಿ. ಮಾತನಾಡಿ .ಕೆ.ಪಿ.ಎಸ್. ಮ್ಯಾಗ್ಬೆಟ್ ಯೋಜನೆಯು ಇನ್ನೂ ಸರಕಾರದ ಹಂತದಲ್ಲಿದು ಇನ್ನೂ ಕೂಡ ಜಾರಿಯಾಗಿಲ್ಲ. ತಾಲೂಕಿನ ಯಾವುದೆ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ, ಸರಕಾರಿ ಶಾಲೆಗಳ ಉಳಿವಿಗಾಗಿ ಶಿಕ್ಷಣ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟದ ಬಸವ ವೃತ್ತದಿಂದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ಮೂಲಕ ಆಗಮಿಸಿ ನೂರಾರು ಗ್ರಾಮಸ್ಥಾರು ಮನವಿ ಸಲ್ಲಿಸಿದರು.
ಎ.ಐ.ಡಿ.ಎಸ್.ಓ. ಜಿಲ್ಲಾ ಪದಾಧಿಕಾರಿ ಮಲ್ಲನಗೌಡ, ಕಲ್ಯಾಣಕುಮಾರ, ಬಸವರಾಜ, ರಂಗಣ್ಣ ಹೂನೂರು, ಸೇರಿದಂತೆ ವಿವಿಧ ಗ್ರಾಮಗಳ ಪಾಲಕರು ಆಗಮಿಸಿದರು.

