ರಾಯಚೂರು ಜೂನ್.01 (ಕರ್ನಾಟಕ ವಾರ್ತೆ): ಸ್ವಚ್ಛ್ ಭಾರತ ಮಿಷನ್ ಯೋಜನೆಯ ಮಾರ್ಗಸೂಚಿಗಳನ್ವಯ ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾಡ್‌ಗಳಲ್ಲಿ ಬಲ್ಕ್ ವೆಸ್ಟ್ ಜನರೇಟರ್ ಘೋಷಿಸಲು ನಿರ್ಧಾರಿಸಲಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಬೃಹತ್ ಘನತ್ಯಾಜ್ಯೋತ್ಪಾದಕರು ಮತ್ತು ನಿರ್ಧಿಷ್ಠಪಡಿಸಿದ ನೂತನ ನಿರ್ಮಾಣಗಳನ್ನು ಕೈಗೊಳ್ಳುವವರು ಕೆಲವು ಘನತ್ಯಾಜ್ಯ ನಿರ್ವಹಣಾ ಕರ್ತವ್ಯಗಳನ್ನು ತಾವೇ ನಿರ್ವಹಿಸಬೇಕು.
ದಿನವೊಂದಕ್ಕೆ 100 ಕೆ.ಜಿ ಅಥವಾ ಅದಕ್ಕೂ ಹೆಚ್ಚಿನ ಘನತ್ಯಾಜ್ಯವನ್ನು ಉತ್ಪಾದಿಸುವಂತಹ ಉತ್ಪಾದಕರುಗಳು ಎಲ್ಲಾ ತ್ಯಾಜ್ಯ ಮೂಲಗಳಿಂದ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸಾನಿಟರಿ ತ್ಯಾಜ್ಯ ಹಾಗೂ ವಿಶೇಷ ತ್ಯಾಜ್ಯ ಎಲ್ಲಾ 4 ವಿಭಾಗದ ವಿಂಗಡಿತ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಣೆ ಹಾಗೂ ವಿಲೇವಾರಿ ಮಾಡುವುದು ಮಾಡಬೇಕು.
20000 ಚದರ ಮೀಟರುಗಳು ಅಥವಾ ಅದಕ್ಕೂ ಹೆಚ್ಚಿನ ಪ್ರದೇಶವನ್ನು ಹೊಂದಿರುವಂತಹ ರಕ್ಷಿತ (ಗೇಟೆಡ್) ಸಮುದಾಯಗಳು, ಕಾರ್ಪೊರೇಟ್ ಅವರಣಗಳು, ತಂತ್ರಜ್ಞಾನ ಪಾರ್ಕ್ಗಳು ಮತ್ತು ಸಂಸ್ಥೆಗಳೆಂದು ಪರಿಭಾಷಿಸಲಾದ ಎಲ್ಲಾ ಬೃಹತ್ ತ್ಯಾಜ್ಯೋತ್ಪಾದಕರು ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026ರ ಮತ್ತು ಅದರನ್ವಯ ರಾಯಚೂರು ಮಹಾನಗರ ಪಾಲಿಕೆಯು ಅಧಿಸೂಚಿಸಿದ ಉಪವಿಧಿಗಳ ಉಪಬಂಧಗಳೇ ಅನ್ವಯ, ಅಥವಾ 40000 ಸಾವಿರ ಲೀಟರ್ ದಿನವೊಂದಕ್ಕೆ ನೀರು ಬಳಕೆ ಮಾಡುವಂತಹ ಯಾವುದೇ ಪ್ರದೇಶಗಳು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ, ಕಾಲೇಜು ಆವರಣಗಳು, ವಾಣ್ಯಜ್ಯ ಪ್ರದೇಶಗಳು, ಬಹು ಮಹಡಿ ಕಟ್ಟಡಗಳು ಹಾಗೂ ಇತರೆ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಳಕೆದಾರರು ಈ ಅಧಿಸೂಚನೆಯಲ್ಲಿ ಸೂಚಿಸಿದಂತೆ ಘನತ್ಯಾಜ್ಯ ವಸ್ತು ನಿರ್ವಾಹಣೆ ಕಾಯ್ದೆ-2026ರ ಅಧ್ಯಾಯ-2ರ ಉಪ ವಿಧಿ (6) ರಲ್ಲಿ ಸೂಚಿಸಿರುವ ಬೃಹತ್ ತ್ಯಾಜ್ಯೋತ್ಪಾದಕರ ಕರ್ತವ್ಯಗಳ ಕುರಿತು ನಿರ್ದೇಶನಗಳನ್ನು ನೀಡಲಾದೆ.
ಬೃಹತ್ ತ್ಯಾಜ್ಯೋತ್ಪಾದಕರ ಪರಿಭಾಷೆಯಡಿಯಲ್ಲಿ ಬರುವಂತಹ ಎಲ್ಲಾ ತ್ಯಾಜ್ಯೋತ್ಪಾದಕರೂ ಸಹ ಅವರುಗಳು ನೋಟೀಸನ್ನು ಜಾರಿ ಮಾಡಿದ ಅವಧಿಯೊಳಗೆ ಪ್ರತಿ ದಿನವೊಂದಕ್ಕೆ ಅವರುಗಳು ತಮ್ಮ ಆವರಣದಿಂದ 100 ಕೆ.ಜಿಗಿಂತ ಕಡಿಮೆ ಅಥವಾ ಅಧಿಕ ತ್ಯಾಜ್ಯ 20000 ಚ.ಮೀಟರ್ ಕಟ್ಟಡ ಅಥವಾ ನಿವೇಶನ 40000 ಲೀಟರ್ ನೀರು ಬಳಸುತ್ತಿರುವವರು ಎಂದು ಸ್ವಯಂ ಘೋಷಣೆಯನ್ನು ಸಲ್ಲಿಸಿದ ಹೊರತು ಅವರನ್ನು ಅದೇ ರೀತಿಯಲ್ಲಿಯೇ ವರ್ಗೀಕರಿಸಲಾಗುವುದು. ಅಂತಹ ಸ್ವಯಂ ಘೋಷಣೆಯು ಪರಿಶೀಲನೆಗೆ ಒಳಪಡತಕ್ಕದು, ಮತ್ತು ಒಂದು ವೇಳೆ ಅದು ಸುಳ್ಳೆಂದು ಕಂಡುಬಂದರೆ ಅನ್ವಯವಾಗುವಂತಹ ದಂಡಕ್ಕೆ ಒಳಪಡುತ್ತದೆ. ಅಂತಹ ಸ್ವಯಂ ಘೋಷಣೆಯನ್ನು ಪರಿಶೀಲನೆ ಮಾಡುವ ಸಲುವಾಗಿ ನೋಟೀಸನ್ನು ಜಾರಿಗೊಳಿಸಿದ 07 ದಿವಸಗಳೊಳಗೆ ರಾಯಚೂರು ಮಹಾನಗರ ಪಾಲಿಕೆಯು ಸೂಚಿಸುವ ಆನ್‌ಲೈನ್ ವೈಬ್ ಸೈಟ್ ವಿಳಾಸ: www.raichurcity.mrc.gov.in/downloads/forms ಮುಖಾಂತರ ಮಾಹಿತಿಯನ್ನು ಪಡೆದು ಸಲ್ಲಿಸತಕ್ಕದ್ದು. ಈ ದಿನಾಂಕದ ನಂತರ ಸಲ್ಲಿಸಲಾಗುವ ಸ್ವಯಂ ಘೋಷಣೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗುವುದು.
ಈ ನೋಟೀಸನ್ನು ಜಾರಿಗೊಳಿಸಲಾದ 07 ದಿನಗಳ ನಂತರ ಬೃಹತ್ ತ್ಯಾಜ್ಯೋತ್ಪಾದಕರುಗಳು ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026 ಮತ್ತು ಈ ಉಪವಿಧಿಗಳನ್ನು ಉಲ್ಲಂಘಿಸಿದಲ್ಲಿ ಅವರಿಗೆ ರಾಯಚೂರು ಮಹಾನಗರ ಪಾಲಿಕೆಯ ಉಪ ವಿಧಿಗಳಡಿಯಲ್ಲಿ ನಮೂದಿಸಲಾದ ಅನ್ವಯವಾಗಬಹುದಾದ ದಂಡದ ದರಗಳನ್ನು/ಜುಲ್ಮಾನಗಳನ್ನು ವಿಧಿಸಲಾಗುವುದು.
ತರುವಾಯದ ದಿನಾಂಕದಲ್ಲಿ ಈ ಘೋಷಣೆಯು ಸುಳ್ಳೆಂದು ಕಂಡು ಬಂದಲ್ಲಿ ಮಹಾನಗರ ಪಾಲಿಕೆಗಳ ಉಪವಿಧಿಗಳ ಅನುಸಾರ ದಂಡವನ್ನು ವಿಧಿಸಲಾಗುವುದು. ಸಾರ್ವಜನಿಕರು ಸ್ವಯಂ ಘೋಷಣೆ ಮಾದರಿ ಅನುಬಂಧವನ್ನು ಪಾಲಿಕೆಗೆ ಸಲ್ಲಿಸಲು ಪಾಲಿಕೆಯ ವೈಬ್ ಸೈಟ್ ವಿಳಾಸ: www.raichurcity.mrc.gov.in/downloads/forms ಮುಖಾಂತರ ಪಡೆಯಬಹುದಾಗಿದೆ.
ಸ್ವಯಂ ಘೋಷಣೆ ಅನುಬಂಧದ ಕುರಿತು ಹಾಗೂ ಬೃಹತ್ ತ್ಯಾಜ್ಯೋತ್ಪಾದಕರ ಕುರಿತು ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ದೂರವಾಣಿ ಸಂಖ್ಯೆ: 08532-221136 ಅಥವಾ 9448195967ಗೆ ಸಂಪರ್ಕಿಸಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿಸದ್ದಾರೆ.

Leave a Reply

Your email address will not be published. Required fields are marked *