ಬಳ್ಳಾರಿ / ಕಂಪ್ಲಿ : ರಾಜ್ಯಾದ್ಯಂತ ಏಕಕಾಲಕ್ಕೆ ಶಾಲೆಗಳು ಪುನರಾಂಭಗೊಂಡ ಹಿನ್ನಲೆ ಪಟ್ಟಣದ ಸಕ್ಕರೆ ಕಾರ್ಖಾನೆಯ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರು ಹನುಮಂತಪ್ಪ ನೇತೃತ್ವದಲ್ಲಿ ಸಹ ಶಿಕ್ಷಕರು ಶಾಲೆಗೆ ಬಂದಂತಹ ಮಕ್ಕಳಿಗೆ ಹೂಗುಚ್ಚ ನೀಡುವ ಮೂಲಕ ಸೋಮವಾರ ಅದ್ಧೂರಿಯಾಗಿ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಕಳೆದ ಒಂದುವರೆ ತಿಂಗಳು ಶಾಲೆಗಳ ಬಿಡುವು ನೀಡಲಾಗಿತ್ತು. ಆದರೆ, ಈಗ ಶಾಲೆಗಳು ಆರಂಭಗೊಂಡ ಹಿನ್ನಲೆ ಮಕ್ಕಳು ಶಾಲೆಗಳತ್ತಾ ಮುಖ ಮಾಡುತ್ತಿರುವುದು ಕಂಡು ಬಂತು. ಇಲ್ಲಿನ ಶಾಲೆಯಲ್ಲಿ ಮಕ್ಕಳಿಗೆ ಹೂಗಳನ್ನು ನೀಡಲಾಯಿತು. ಒಂದುವರೆ ತಿಂಗಳ ನಂತರ ಮಕ್ಕಳು ಶಾಲೆಗೆ ಬಂದ ಹಿನ್ನಲೆ ಶಾಲೆಗಳಲ್ಲಿ ಮಕ್ಕಳ ಕಲರವ ಕಂಡು ಬಂತು.
ನಂತರ ಮುಖ್ಯಗುರು ಹನುಮಂತಪ್ಪ ಮಾತನಾಡಿ, ಕಂಪ್ಲಿ ಸೇರಿದಂತೆ ರಾಜ್ಯದಲ್ಲಿ ಶಾಲೆಗಳು ಪುನರಾಂಭಗೊಂಡಿವೆ. ಇದರಿಂದ ಶಾಲೆಗೆ ಬಂದಂತಹ ಮಕ್ಕಳನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಮಕ್ಕಳ ಭವಿಷ್ಯ ಶಿಕ್ಷಣದಲ್ಲಿದ್ದು, ಪ್ರತಿ ಹಂತದಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆಗಳ ಸದುಪಯೋಗದೊಂದಿಗೆ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಬೇಕಾಗಿದೆ. ರಜೆ ದಿನಗಳಲ್ಲಿ ಮನೆಯಲ್ಲಿ ಕಾಲ ಕಳೆದಿದ್ದರು. ಆದರೆ, ಈಗ ಶಾಲೆಗಳಲ್ಲಿ ಪಾಠ, ಪ್ರಚನದೊಂದಿಗೆ ಆಟೋಟದೊಂದಿಗೆ ಶಿಕ್ಷಣವಂತರಾಗಬೇಕಾಗಿದೆ. ಈ ದಿಸೆಯಲ್ಲಿ ಮಕ್ಕಳು ಶಾಲೆಯನ್ನು ತಪ್ಪಿಸದೇ ನಿರಂತರವಾಗಿ ಬಂದು ಶಿಕ್ಷಕರ ಬೋಧನೆಗಳನ್ನು ಆಲಿಸಿ, ಕಲಿಯಬೇಕು. ಮೊದಲ ದಿನವೇ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಬಂದಿದ್ದು, ಇನ್ನೂಳಿದ ಮಕ್ಕಳು ಸಹ ಶಾಲೆಗಳಿಗೆ ಬರಬೇಕು. ಶಾಲೆಗೆ ಬಂದ ಮಕ್ಕಳಿಗೆ ಪಠ್ಯೇ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು ಎಂದರು.
ನಂತರ ಮಕ್ಕಳು ರುಚಿಕರವಾದ ಸಿಹಿ ಊಟ ಸವಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಾಮಲಿಂಗ, ಮುಖಂಡರಾದ ನಾಗರಾಜ, ಶೇಖರ್, ಆದಿನಾರಾಯಣ, ಮರಿಸ್ವಾಮಿ, ಸಹ ಶಿಕ್ಷಕರಾದ ಡಿ.ಪ್ರಭಾಕರ, ಐ.ಗಂಗಮ್ಮ, ದಿದ್ಲಿ ಗೌರಮ್ಮ, ಆರ್.ಎಚ್.ರೇಣುಕಾ, ರೆಹಮತ್ ಬೀ, ಜೆ.ಎಂ.ತಿಪ್ಪಮ್ಮ, ಕೆ.ಪ್ರೀತಿ, ವಾಣಿ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.
ಎಸ್‌ಎನ್‌ಪೇಟೆ: ಸ್ಥಳೀಯ ಎಸ್‌ಎನ್‌ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಳಿರು ತೋರಣಗಳಿಂದ ಶೃಂಗರಿಸಿ, ಶಾಲೆಗೆ ಬಂದ ಮಕ್ಕಳಿಗೆ ಹೂಗಳನ್ನು ನೀಡಿ ಸ್ವಾಗತಿಸಿದರು. ನಂತರ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಶಶಿಧರ್ ಅಕ್ಕಸಾಲಿ, ಜಿ.ಪಂಪಯ್ಯ, ಆರ್.ವಿರುಪಾಕ್ಷಪ್ಪ, ಎಚ್.ಯಶೋಧ, ಬಡಿಗೇರ ರತ್ನಮ್ಮ, ಕೆ.ಮಂಜುಳಾ, ಎನ್.ಮಂಜುನಾಥ ಸೇರಿದಂತೆ ಶಾಲಾ ಮಕ್ಕಳಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *