ರಾಯಚೂರು ಏಪ್ರಿಲ್ 16 (ಕರ್ನಾಟಕ ವಾರ್ತೆ): ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಮೋಟಾರು ವಾಹನಗಳ ಬಾಕಿ ತೆರಿಗೆ ವಸೂಲಾತಿ ಸಂಬAಧ 2026ರ ಏಪ್ರಿಲ್ ತಿಂಗಳಿನಿAದ ವಿಶೇಷ ತೆರಿಗೆ ಬಾಕಿ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮಾಲೀಕರು ತೆರಿಗೆಯನ್ನು ತಕ್ಷಣವೇ ಆನ್ ಲೈನ್ ಅಥವಾ ಆರ್. ಟಿ. ಓ. ಕಚೇರಿಗೆ ಖುದ್ದು ಭೇಟಿ ನೀಡಿ ಬಾಕಿ ತೆರಿಗೆಯನ್ನು ಪಾವತಿಸಬೇಕೆಂದು ಕೋರಲಾಗಿದೆ.

ನಿಯಮಾವಳಿಗಳಂತೆ ಯಾವುದೇ ವಾಹನವು ಸಾರ್ವಜನಿಕ ರಸ್ತೆಗೆ ಇಳಿಯುವ ಮೊದಲೇ ಮುಂಗಡವಾಗಿ ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ. ವಾಹನ ಮಾಲೀಕರು ತೆರಿಗೆ ಪಾವತಿ ಮಾಡದಿದ್ದರೆ. ಸಾರಿಗೆ ಇಲಾಖೆಯಿಂದ ಮಾನ್ಯ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡುತ್ತದೆ. ಈ ಪ್ರಕಟಣೆಯನ್ನು ಇಲಾಖಾ ಸೂಚನೆ ಎಂದು ತಿಳಿದುಕೊಳ್ಳಬೇಕು. ಬಾಕಿ ತೆರಿಗೆ ವಾಹನ ಮಾಲೀಕರು ಜವಾಬ್ದಾರಿ ಮೆರೆತು ಬಾಕಿ ತೆರಿಗೆಯನ್ನು ತಕ್ಷಣವೇ ಪಾವತಿ ಮಾಡಬೇಕೆಂದು ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *