ಜಿಲ್ಲಾ ಉಪ ಕಾರ್ಯದರ್ಶಿ ಹಾಲ್ ಸಿದ್ದಪ್ಪ ಪೂಜಾರಿಯವರು ಮಹಾತ್ಮಗಾಂಧಿ ಪುರಸ್ಕಾರಕ್ಕೆ ಆಯ್ಕೆಗೊಂಡ ತಾಲೂಕಿನ ಆರ್.ಎಚ್.ಕ್ಯಾಂಪ್, ಬೂತಲದಿನ್ನಿ. ಹಾಗೂ ಪಗಡದಿನ್ನಿ ಗ್ರಾ.ಪಂ.ಗಳಿಗೆ ಭೇಟಿ ನೀಡಿ, ನೋಂದಾಯಿಸಲಾದ ದಾಖಲೆಗಳ ಪರಿಶೀಲನೆ ಮಾಡಿದರು.
ಆರ್.ಎಚ್.ಕ್ಯಾಂಪ್ 1 ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಂಥಾಲಯಕ್ಕೆ ಭೇಟಿ ನೀಡಿ, ಹಾಜರಾತಿ ಪರಿಶೀಲಿಸಿ ಸದಸ್ಯರ ನೋಂದಣಿ ಗಣಕಯಂತ್ರದಲ್ಲಿ ನೋಂದಾಯಿಸಲು ಗ್ರಂಥ ಪಾಲಕರಿಗೆ ಸೂಚಿಸಿ, ಕೂಸಿನ ಮನೆಗೆ ಭೇಟಿ ನೀಡಿ ಮಕ್ಕಳಿಗೆ ವೇಳಾಪಟ್ಟಿ ಪ್ರಕಾರ ಪೌಷ್ಟಿಕ ಆಹಾರ ನೀಡಲು ತಿಳಿಸಿ, ಮುಖ್ಯವಾಗಿ ಸ್ವಚ್ಛತೆಯನ್ನು ಕಾಪಾಡಲು ಕೇರ್ ಟೇಕರ್ ಗಳಿಗೆ ಸಲಹೆ ನೀಡಿದರು.
ಆಯುಷ್ಮಾನ್ ಸಮುದಾಯ ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ಕಾರ್ಯಕಲಾಪದ ಬಗ್ಗೆ ವಿಚಾರಿಸಿ, ಸಿಬ್ಬಂದಿ ವಸತಿ ನಿಲಯದ ಬಗ್ಗೆ ಮಾಹಿತಿ ಪಡೆದು, ಪ್ರಗತಿ ಮುಂದುವರಿಯಲು ತಾಲೂಕು ವೈದ್ಯಾಧಿಕಾರಿ ಅವರ ಗಮನಕ್ಕೆ ತಂದು ಬೇಗ ಪೂರ್ಣಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ: ಸಹಾಯಕ ನಿರ್ದೇಶಕರಾದ ವೆಂಕಪ್ಪ, ಅಮರಗುಂಡಪ್ಪ ಪಂಚಾಯತಿ ಅಧ್ಯಕ್ಷರು ರಹಮದ್ ಪಾಷಾ, ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪ, ಧನ್ಯ ಪ್ರಭು, ಬಿ.ಎಫ್.ಟಿ ವೀರಕುಮಾರ ಸೇರಿದಂತೆ ಪಂಚಾಯತಿ ಸಿಬ್ಬಂದಿಗಳು ಇದ್ದರು.


