ಮಸ್ಕಿ: ಪ್ರತಿಯೊಬ್ಬರು ಬುದ್ಧ, ಬಸವಣ್ಣನನ್ನು ಡಾ.ಆರ್.ಅಂಬೇಡ್ಕರ್‌ರೊಳಗೆ ಕಂಡಾಗ ಮಾತ್ರ ಬಹುತ್ವ ಸಂಸ್ಕೃತಿ ಕಾಪಾಡಿಕೊಂಡು ಸಮಾನತೆಯೊಂದಿಗೆ ಪ್ರಗತಿಸಾಧಿಸುತ್ತದೆ. ಸಂವಿಧಾನ ದೇಶದ ಭದ್ರ ಬುನಾದಿ ಒದಗಿಸಿದೆ ಎಂದು ಆರ್.ಮಾನಸಯ್ಯ ಹೇಳಿದರು.
ಪಟ್ಟಣದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖಯಿಂದ ಹಮ್ಮಿಕೊಂಡಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ೧೩೫ ಮತ್ತು ಡಾ.ಬಾಬು ಜಗಜೀವನ್‌ರಾಮ್ ಅವರ ೧೧೯ ಜಯಂತಿ ಕಾರ್ಯಾಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ಅಸ್ಪೃಶ್ಯತೆಯ ಕಾರಣಕ್ಕೆ ಕುಡಿಯಲು ನೀರು ಸಿಗದೇ, ಓದುವ ವಿದ್ಯೆ ದೂರವಾಗಿ, ಜನರು ತಮ್ಮ ಹಕ್ಕುಗಳಿಗಾಗಿ ಒದ್ದಾಟ ನಡೆಸುತ್ತಿದ್ದ ಸಂದರ್ಭವನ್ನು ಕಣ್ಣಾರೆ, ಕಂಡು ತಾವೂ ಅದನ್ನು ಅನುಭವಿಸಿ ಮುಂದೆ ಶಿಕ್ಷಣ ಎಂಬ ಸಂಜೀವಿನಿಯ ಮೂಲಕವೇ ದೇಶದ ಜನರಿಗೆ ಅದರಲ್ಲೂ ಶೋಷಿತ ವರ್ಗದ ಜನರಿಗೆ ಸಮಾನ ಹಕ್ಕುಗಳನ್ನು ಒದಗಿಸುವ ಕೆಲಸವನ್ನು ಯಾರಾದರೂ ಮಾಡಿದ್ದರೆ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಅವರು ಹೇಳಿದರು.
ದೇಶದ ಬಹು ಜನರ ಬದುಕಿನ ಆಶಯಕ್ಕೆ ವಿರುದ್ಧವಾಗಿದ್ಧಂತಹ ಧಾರ್ಮಿಕ ವಿಷದ ಕಂತೆಯಾಗಿದ್ದ ಮನುಸ್ಮೃತಿಯನ್ನು ಸುಟ್ಟ ಬಾಬಾ ಸಾಹೇಬರು, ಕುಡಿಯುವ ನೀರಿಗಾಗಿ ನಡೆದ ಜಗತ್ತಿನ ಮೊದಲ ಹೋರಾಟವಾದ ಮಹಾಡ್ ಚಳುವಳಿಯ ನೇತೃತ್ವವನ್ನು ವಹಿಸಿದ್ದರು. ಬಹುಜನರ ಪರವಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಬಹುದೊಡ್ಡ ಧರ್ಮಯುದ್ಧ ಮಾಡಿದ ಜಗತ್ತಿನ ಮಹಾನ್ ನಾಯಕ ಎಂದು ಹೇಳಿದರು.
ನಮ್ಮ ದೇಶ ಇತಿಹಾಸವನ್ನು ಅರಿವಿಲ್ಲದಂತೆ ತಿರುಚುವ ಕೆಲಸವಾಗಿದೆ. ಹಿಂದಿನ ವಿದ್ಯಾರ್ಥಿಗಳು, ಯುವಕರು ಮೂರನೇ ಪಂಚಚಾರ್ಷಿಕ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಮಹಿಳೆಯರಿಗೆ ಅವಕಾಶ ನೀಡಿದ ಜಾಗದಲ್ಲಿ ಮಹಿಳೆಯರೇ ಇರುವುದಿಲ್ಲ. ಯಾವ ಜಾಗದಲ್ಲಿ ದೇವಾದಾಸಿ ಎಂಬ ಪಟ್ಟಕಟ್ಟಿರೋ ಅಂತಹ ಜಾಗದಲ್ಲಿ ಮಹಿಳೆಯರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆಂದು ವಿಷಾದ ವ್ಯಕ್ತಪಡಿಸಿದರು. ಈ ದೇಶದಲ್ಲಿ ಎಲ್ಲಾರಿಗೂ ಮಾತನಾಡುವ ಸ್ವಾತಂತ್ರ ಸಿಕ್ಕಿಲ್ಲ. ಅದು ಕೇವರಿಗೆ ಮಾತ್ರ ಸೀಮಿತವಾಗಿದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಜೀವಂತ ಇದೆ. ಆದರೆ ಆದರ ಸ್ವರೂಪ ಬಸಲಾಗಿದೆ. ದೇಶದಲ್ಲಿ ಜಾತಿ ಯಾರಿಗೆ ವರವಾಗಿದೆ ಅಂತಹವರು ಜಾತಿಯನ್ನು ಬೆಳಸುತ್ತಿದ್ದಾರೆ. ಯಾರಿಗೆ ವರವಾಗಿಲ್ಲ ಅವರು ಜಾತಿಗೆ ವಿನಾಶ ಮಾಡಲಿಕ್ಕೆ ಹೊರಟಿದ್ದಾರೆಂದು ಹೇಳಿದರು.
ನಂತರ ಖಾದಿ ಗ್ರಾಮೊದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ ಮಾತನಾಡಿ ಬಾಬಾ ಸಾಹೇಬರು ನೀಡಿದ ಸಂವಿಧಾನದಡಿಯಲ್ಲಿ ನಾನು ಶಾಸಕನಾಗಿದ್ದು, ಸಮಾಜದಲ್ಲಿ ಸಮಾನತೆಯಿಂದ ಜನರು ಜೀವನ ಸಾಗಿಸಬೇಕೆಂಬ ದ್ಯೇಯದೊಂದಿಗೆ ಶ್ರೇಷ್ಠ ಸಂವಿಧಾನವನ್ನು ಬಾಬಾ ಸಾಹೇಬರು ನೀಡಿದ್ದಾರೆ. ಆದ್ದರಿಂದ ನಾವೆಲ್ಲಾರೂ ಸಂವಿಧಾನದ ಆಸೆಯದಂತೆ ಅಂಬೇಡ್ಕರ್ ಅವರ ತತ್ವ ಅದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾ.ಪಂ ಇಒ ಅಮರೇಶ ಯಾದವ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಮೈಬುಸಾಬ ಮುದ್ದಾಪೂರು, ಪಂಪಾಪತಿ ಹೂಗಾರ, ರಾಚಯ್ಯ, ಗುರುಮೂರ್ತಿ, ಶರಣಪ್ಪ, ದಾವೂದ್, ಸಿಪಿಐ ರಾಮಣ್ಣ ಜಲಿಗೇರಿ ಸೇರಿದಂತೆ ದಲಿತ ಸಮಾಜದ ಮುಖಂಡರು, ಯುವಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿದ್ದರು.
ಮೆರವಣಿಗೆ: ಪಟ್ಟಣದ ಗಾಂಧಿನಗರದಿಂದ ಭ್ರಮರಾಂಬ ಕಲ್ಯಾಣ ಮಂಟಪದವರೆಗೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್‌ರಾಮ್ ಭಾವಚಿತ್ರದ ಮೆರವಣಿಗೆಯನ್ನು ಶಾಸಕ ಆರ್.ಬಸನಗೌಡ ತುರವಿಹಾಳ ಮತ್ತು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು.
ವಿವಿಧಡೆ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ತಾಲೂಕು ಪಂಚಾಯಿತಿ, ನೀರಾವರಿ ಇಲಾಖೆ, ನಗರ ಯೋಜನಾ ಪ್ರಾಧಿಕಾರ ಕಛೇರಿ, ರೈತ ಸಂಪರ್ಕ ಕೇಂದ್ರ, ಸರ್ವೆ ಮತ್ತು ಭೂ ದಾಖಲೆ ಇಲಾಖೆ, ಮಸ್ಕಿ ನಾಲಾ ಯೋಜನಾ ಕಛೇರಿ, ಶಾಸಕರ ಕಾರ್ಯಾಲಯ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಾಲಯ ಸೇರಿದಂತೆ ಇನ್ನಿತೆರ ಸರಕಾರಿ ಕಛೇರಿ, ಶಾಲಾ-ಕಾಲೇಜ್ ಡಾ. ಬಿ.ಆರ್.ಅಂಬೇಡ್ಕರ್ ೧೩೫ನೇ ಜಯಂತಿಯನ್ನು ಆಚರಿಸಿದರು.

ಕೋಟ್:–

ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಇನ್ನು ಜೀವಂತ ಇದೆ. ಆದರೆ ಆದರ ಸ್ವರೂಪ ಬಸಲಾಗಿದೆ. ದೇಶದಲ್ಲಿ ಜಾತಿ ಯಾರಿಗೆ ವರವಾಗಿದೆ ಅಂತಹವರು ಜಾತಿಯನ್ನು ಬೆಳಸುತ್ತಿದ್ದಾರೆ.- ಆರ್ ಮಾನಸಯ್ಯ

Leave a Reply

Your email address will not be published. Required fields are marked *