ತಿಮ್ಮಾಪುರ ಎ 14 : ಎ 02 ರಿಂದ ಎ 14 ರವರೆಗೆ ಶ್ರೀ ವೇ. ಮೂ. ಜಗದೀಶ್ವರ ಶಾಸ್ತ್ರಿಗಳು ಹಿರೇಮಠ್ ಮದ್ಲಾಪುರ್
ಸಂಗೀತ ಶ್ರೀ ವೀರಭದ್ರಯ್ಯ ಬೆಣಕಲ್ ತಬಲವಾದಕರು ಶ್ರೀ ವಿಕಾಸ್ ಹುನುಗುಂದ ಹಾಗೂ ನಾಡಿನ ಅರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸಮ್ಮುಖದಲ್ಲಿ
ಜವಳಗೇರ ಸಂಸ್ಥಾನಕ್ಕೆ ಸೇರಿದ ತಿಮ್ಮಪೂರಿನಲ್ಲಿ
ಶ್ರೀ ಅವಧೂತ ಅಯ್ಯಪ್ಪ ತಾತನವರ 131ನೇ ಪುಣ್ಯರಾಧನೆ ಮಹೋತ್ಸವವು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ
ಕೊಪ್ಪಳ ಗವಿಸಿದ್ದೇಶ್ವರ ಪುರಾಣ ಮಹಾಮಂಗಳ ಮತ್ತು
ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದವು.
ಬೆಳಗಿನ ಜಾವದಲ್ಲಿ
ಶ್ರೀ ಅವಧೂತ ಅಯ್ಯಪ್ಪ ತಾತನವರಿಗೆ ಶ್ರೀ ಸಿದ್ದಯ್ಯ ತಾತನವರು ಹಾಗೂ ಶ್ರೀ ವೀರೇಶ್ ತಾತನವರಿಂದ ರುದ್ರಾಭಿಷೇಕ ಪೂಜೆ ಭಕ್ತಿಭಾವದಿಂದ ನೆರವೇರಿತು.
ತದನಂತರ
ಪರಮ ಪೂಜ್ಯ ಶ್ರೀ ಮಹೇಶ್ ತಾತನವರಿಂದ ಮತ್ತು ಶರಣರಿಂದ 20 ನವ ಜೋಡಿ ದಂಪತಿಗಳಿಗೆ ಆಶೀರ್ವದಿಸಿದರು ತದನಂತರ ಆಗಮಿಸಿರುವ
ಶರಣರಿಗೆ ಹಾಗೂ ಗಣ್ಯರಿಗೆ ಪೂಜ್ಯಶ್ರೀ ಮಹೇಶ್ ತಾತನವರಿಂದ ಗೌರವ ಸಮರ್ಪಣೆ ಮಾಡಲಾಯಿತು ಹಾಗೂ ಊರಿನ ಗುರು ಹಿರಿಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಅತ್ಯಂತ ಭವ್ಯವಾಗಿ ಜರುಗಿದವು.
ಸಾವಿರಾರು ಭಕ್ತರು ಈ ಪವಿತ್ರ ಸಂದರ್ಭದಲ್ಲಿ ಭಾಗವಹಿಸಿ
ತಾತನವರ ದರ್ಶನವನ್ನು ಪಡೆದು ಧನ್ಯರಾದರು.
ಕಾರ್ಯಕ್ರಮದ ಅಂತ್ಯದಲ್ಲಿ
ಭಕ್ತರಿಗೆ ಮಹಾ ಪ್ರಸಾದ ದಾಸೋಹ ಏರ್ಪಡಿಸಲಾಗಿತ್ತು, ಎಲ್ಲರೂ ಭಕ್ತಿಪೂರ್ಣವಾಗಿ ಸ್ವೀಕರಿಸಿದರು. ಹಾಗೂ ಊರಿನ ಗುರು ಹಿರಿಯರು ತಾಯಿಯಂದಿರು ಸಾವಿರಾರು ಸಕಲ ಸದ್ಭಕ್ತಾದಿಗಳು ಸೇರಿ ಆ ತಾತನ ಕೃಪೆಗೆ ಪಾತ್ರರಾದರು

Leave a Reply

Your email address will not be published. Required fields are marked *