ಅರಕೇರಾ :
ಅರಕೇರಾ ಪಟ್ಟಣದಲ್ಲಿನ ಸ್ಪಂದನ ಸಿರಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ., ಅರಕೇರಾ ತಾ|| ದೇವದುರ್ಗ ,ಜಿಲ್ಲೆ||ರಾಯಚೂರು ಸಹಕಾರಿಯ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯು ಸಹಕಾರಿಯ ಕಛೇರಿಯಲ್ಲಿ ದಿನಾಂಕ:15-12-2025 ಸೋಮವಾರ ರಂದು ನಡೆಯಲಿದೆ ಎಂದು ಜಗದೀಶ ಲೆಕ್ಕಪರಿಶೋಧಕರು ರಿಟರ್ನಿಂಗ ಅಧಿಕಾರಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಮ ಪತ್ರ ಸಲ್ಲಿಸಲು ಆಕಾಂಕ್ಷೆವುಳ್ಳ ಅಭ್ಯರ್ಥಿಗಳಿಂದ ನಾಮಪತ್ರ ಪಡೆಯಲು ಪ್ರಾರಂಭದ ದಿನಾಂಕ: 1-12-2025 ಕೊನೆಯ ದಿನಾಂಕ:8-.12.-2025 ರ ಮದ್ಯಾಹ್ನ 3-00 ಗಂಟೆಯವರೆಗೆ,
ದಿನಾಂಕ:9-12.2025 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ದಿನಾಂಕ:10-12-2025 ರಂದು ಮದ್ಯಾಹ್ನ 3-00 ಗಂಟೆಯವರೆಗೆ ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿರುತ್ತದೆ.
ಸಹಕಾರಿಯ ಸದಸ್ಯರುಗಳಿಗೆ ಈಗಾಗಲೇ ಚುನಾವಣಾ ವೇಳಾ ಪಟ್ಟಿಯನ್ನು ಕಳುಹಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಕಾರಿ ಕಛೇರಿಯಲ್ಲಿ ರಿಟರ್ನಿಂಗ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆಯೆಂದು ಪ್ರಕಟಣೆಯ ಮೂಲಕ ತಿಳಿಸಿದೆ.

Leave a Reply

Your email address will not be published. Required fields are marked *