ಸಿಂಧನೂರು – ನಗರದ ಜನತಾ ಕಾಲೋನಿಯ ರಜಿಯಾ ಬೇಗಂ ಮೈಬೂಬ್ ಸಾಬ್ ಈ ದಂಪತಿಗಳ ಮಗಳಾದ ಹೈಫಾ ಮೊಹಮ್ಮದಿ ಅವರ ಪ್ರಥಮ ವರ್ಷದ ಜನ್ಮ ಸಾರ್ಥಕ ದಿನದ ಅಂಗವಾಗಿ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಸಲ್ಲಿಸಿ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಸರಳವಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ ಮೈಬೂಬ್ ಸಾಬ್ ಅವರ ಕುಟುಂಬವನ್ನು ಗೌರವಿಸಿ ಆಶೀರ್ವದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪತ್ರಕರ್ತರಾದ ಖಾಜಾ ಹುಸೇನ್ ಬನ್ನಿಗನೂರು ಮಾತನಾಡಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆಶಯದಂತೆ ಕಾರುಣ್ಯ ಆಶ್ರಮದ ಸೇವೆ ಜರುಗುತ್ತಿದೆ. ಮನುಕುಲದ ಮಾನವೀಯತೆಯ ಪಾಠಶಾಲೆಯೇ ನಮ್ಮ ಕಾರುಣ್ಯಾಮವಾಗಿದೆ. ಮನುಷ್ಯನಲ್ಲಿರುವ ಅಹಂಕಾರ ಗರ್ವ ಮತ್ಸರ ಗುಣಗಳು ಅಳಿಯಬೇಕಾದರೆ ಒಮ್ಮೆ ಕಾರುಣ್ಯ ಕುಟುಂಬಕ್ಕೆ ಭೇಟಿ ಕೊಡಿ. ಮನುಷ್ಯನ ಹುಟ್ಟು ಸಾವಿನ ಮಧ್ಯೆ ಬದುಕಿನ ಪಾಠಶಾಲೆಯಾಗಿ ನಮ್ಮ ಸಿಂಧನೂರಿನ ಕಾರುಣ್ಯ ಕುಟುಂಬ ನಮ್ಮ ರಾಜ್ಯವಲ್ಲದೆ ದೇಶಕ್ಕೆ ಕರುಣೆಯ ಕುಟುಂಬವಾಗಿರುವುದು ಸಮಸ್ತ ಸಿಂಧನೂರಿನ ಜನತೆಯ ಗೌರವಕ್ಕೆ ಕಾರಣವಾಗಿದೆ. ಇಂತಹ ಸತ್ಯ ಪ್ರಾಮಾಣಿಕ ಸೇವೆ ಮಾಡುವ ಕಾರುಣ್ಯಾಶ್ರಮಕ್ಕೆ ಸ್ವಂತ ಜಾಗ ಕಲ್ಪಿಸುವಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹರೇಟನೂರು ಗ್ರಾಮದ ಬಡಜಂಗಮ ಕುಟುಂಬ ನಿಸ್ವಾರ್ಥತೆಯ ಸಂಸ್ಥೆಯನ್ನು ಹುಟ್ಟುಹಾಕಿ ಅದೆಷ್ಟೋ ಅಂದ ಅನಾಥರ ಬಾಳಿಗೆ ಬೆಳಕಾಗಿರುವುದು ಪ್ರವಾದಿಯವರ ಆಶಯದಂತೆ ಸಮಾಜಕ್ಕೆ ಮಾದರಿಯಾಗಿದೆ. ಸಹಾಯ ಮಾಡುವವರು ಸಹಾಯ ಮಾಡಿ ಹೋಗುತ್ತಾರೆ. ಆದರೆ ನಿತ್ಯ ನಿರಂತರ ಇಂತಹ ನೊಂದ ವೃದ್ಧರ ಹಾಗೂ ವಯಸ್ಕರ ಬುದ್ಧಿಮಾಂದ್ಯರ ಜೊತೆಗೆ ನಿಲ್ಲುವುದು ಸರಳ ಸಾಮಾನ್ಯ ಕಾರ್ಯವಲ್ಲ ಇವೆಲ್ಲವುಗಳ ಮಧ್ಯೆಯೂ ಸಹ ಸಮಾಜದಲ್ಲಿನ ಟೀಕೆ ಟಿಪ್ಪಣಿ ಅವಮಾನ ಅಪಪ್ರಚಾರ ಸೂಕ್ತ ಉತ್ತರ ನೀಡುವುದು ಮತ್ತು ಸಂಸ್ಥೆಯ ನಿರ್ವಹಣೆ ಮಾಡುವುದು ಸುಲಭದ ಮಾತಲ್ಲ ಪ್ರವಾದಿ ಭಗವಂತನ ಆಶೀರ್ವಾದ ಕಾರುಣ್ಯ ಕುಟುಂಬಕ್ಕಿರುವುದರಿಂದ ಇಂತಹ ಕೇಳರಿಯದ ಕಂಡರಿಯದ ಕಾರುಣ್ಯ ಕುಟುಂಬದ ಸೇವೆ ಸಿಂಧನೂರಿನಲ್ಲಿ ನಡೆಯುತ್ತಿದೆ. ಈ ಆಶ್ರಮಕ್ಕೆ ಸಹಾಯ ಸಹಕಾರ ಮಾಡುವ ಪ್ರತಿಯೊಬ್ಬ ದಾನಿಗಳು ಕೂಡ ಈ ಕುಟುಂಬದ ಯಜಮಾನರುಗಳಾಗಿ ಆಶ್ರಮಕ್ಕೆ ಸ್ವಂತ ಜಾಗ ಕಲ್ಪಿಸುವಲ್ಲಿ ಮನಸ್ಸು ಮಾಡಲಿ ಎನ್ನುವುದು ನಮ್ಮ ನಿಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ಭಾವನಾತ್ಮಕವಾಗಿ ಮಾತನಾಡಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಜಿಯಾ ಬೇಗಂ. ಮೈಬೂಬ್ ಸಾಬ್. ಹೈಫಾ ಮೊಹಮ್ಮದಿ. ರೇಷ್ಮಾ ಬೇಗಂ. ಮಹಮ್ಮದ್ ರಫಿ. ಹುಸೇನ್ ಬಿ. ತಸ್ಲೀಮ್. ಆಯಿಷಾ. ಮಿನಜಾ. ಶಾಹಿಸ್ತಾ. ಶೈಯಾನ್. ರಿಯಾನ್. ಶಾನ್ ವಾಜ್. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಶ್ರೀ ಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಮತ್ತು ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ.ಮೀನಾಕ್ಷಮ್ಮ. ಲಕ್ಷ್ಮಿ. ಅನೇಕರು ಭಾಗವಹಿಸಿದ್ದರು.


