ಸಿಂಧನೂರು – ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಸದಸ್ಯರಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಅವರ ಜನ್ಮದಿನದ ಅಂಗವಾಗಿ ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದ ಪ್ರಸಿದ್ಧ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಗೆ ವಿಶೇಷ ಪೂಜೆ ಪ್ರಾರ್ಥಿಸಿ ಕೊಳ್ಳಲಾಯಿತು. ನಂತರ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಸಿಂಧನೂರಿನ ಕಾರುಣ್ಯ ಆಶ್ರಮದ ಸಂಸ್ಥಾಪಕರಾದ ವೇ.ಮೂ.ಅಮರಯ್ಯ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿಯವರು ಅಂಗವಿಕಲರಾದರು ಸಹ ಅನೇಕ ಜನಪರ ಸಮಾಜಪರ ಕಾರ್ಯಗಳನ್ನು ಮಾಡುತ್ತಾ ನೊಂದವರಿಗೆ ಬಡವರಿಗೆ ತಮ್ಮ ಕೈಯಿಂದಾದಂತಹ ಸಹಾಯ ಸಹಕಾರ ಮಾಡುತ್ತಾ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ದೇವರು ಮನುಷ್ಯರಿಗೆ ಎಲ್ಲವನ್ನು ಕೊಟ್ಟರೂ ಸಹ ದೇಹದ ತುಂಬಾ ಮದ ಮತ್ಸರ ಅಹಂಕಾರ ತುಂಬಿಕೊಂಡಿರುವವರೇ ನಿಜವಾದ ಅಂಗವಿಕಲರು ಎನ್ನುವ ಭಾವನೆ ನನ್ನದು. ಆದರೆ ನಮ್ಮ ಮಲ್ಲಿಕಾರ್ಜುನ ಅವರು ತಾವು ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ನಮ್ಮ ಕಾರುಣ್ಯ ಕುಟುಂಬದ ಕಾರುಣ್ಯ ಮೂರ್ತಿಗಳ ಜನ್ಮದಿನಕ್ಕೆ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಮತ್ತು ಸಕಲ ದೇವಾನುದೇವತೆಗಳ ಆಶೀರ್ವಾದ ಸದಾವಕಾಲವಿರಲಿ ಅವರ ಹೆತ್ತವರ ಕನಸಿನಂತೆ ಸಮಾಜದ ಮಗನಾಗಿರುವ ಮಲ್ಲಿಕಾರ್ಜುನ ಅವರು ಇನ್ನು ಎತ್ತರಕ್ಕೆ ಬೆಳೆಯಲಿ ಎನ್ನುವುದು ಕಾರುಣ್ಯ ಕುಟುಂಬದ ಮೂಲ ಆಶಯವಾಗಿದೆ ಎಂದು ಮಾತನಾಡಿ ಟ್ರಸ್ಟ್ ನ ಸದಸ್ಯರೊಂದಿಗೆ ಮತ್ತು ಹರೇಟನೂರು ಗ್ರಾಮದ ಸಾರ್ವಜನಿಕರೊಂದಿಗೆ ಮಲ್ಲಿಕಾರ್ಜುನ ಸ್ವಾಮಿಯ ಬಗ್ಗೆ ಜನ್ಮದಿನದ ಶುಭಾಶಯಗಳು ಕೋರಿ ತಮ್ಮ ಅಂತರಾಳದ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವೇ. ಮೂ. ಅಮರಯ್ಯ ಸ್ವಾಮಿ ಹಿರೇಮಠ ಸಂಸ್ಥಾಪಕರು ಕಾರುಣ್ಯ ಆಶ್ರಮ ಸಿಂಧನೂರು.ನಾಗನಗೌಡ ಮೇಟಿ ಗೌಡ್ರು ಹರೇಟನೂರು. ಪಶುಪತಿಗೌಡ ಕೆಸರಕೋಣೆ ಹರೇಟನೂರು. ಅಯ್ಯಪ್ಪ ಹರೇಟನೂರು. ಬಸವ ಸ್ವಾಮಿ ಹರೇಟನೂರು. ಮತ್ತು ಅನೇಕರು ಉಪಸ್ಥಿತರಿದ್ದರು

