ಲಿಂಗಸಗೂರು : ಏ . 10 – 2011ರಿಂದ 2022 ರವರೆಗೆ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗ್ರಾಚುಟಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ನೌಕರರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
2023 ರಿಂದ ಸಹಾಯಕಿಯರಿಗೆ ಬರಬೇಕಾದ ಮಾತೃವಂದನಾ ಪ್ರೋತ್ಸಾಹಧನ ಮತ್ತು ಕಾರ್ಯಕರ್ತೆಯರಿಗೆ 2025 ರ ಮಾತೃ ವಂದನಾ ಪ್ರೋತ್ಸಾಹ ಧನ ಬಿಡಗಡೆ ಮಾಡಬೇಕು. ಕಾರ್ಯಕರ್ತೆಯರಿಗೆ ಬಿಎಲ್‌ಒ ಕೆಲಸ, ಎಫ್‌ಆರ್‌ಎಸ ಕೆಲಸ ಮತ್ತು ಬೇರೆ ಇಲಾಖೆ ಕೆಲಸಗಳ ಒತ್ತಡದಿಂದ ಅನಾರೋಗ್ಯದಿಂದ ಬಳಲುವಂತಾಗಿದೆ. ಕಾರಣ ಸದರಿ ಕೆಲಸಗಳಿಂದ ಮುಕ್ತಗೊಳಿಸಬೇಕು. ಪ್ರತಿ ತಿಂಗಳು ಕೇಂದ್ರಗಳ
ಬೇಡಿಕೆಗಳಿಗೆ ತಕ್ಕಂತೆ ಉತ್ತಮ ಗುಣಮಟ್ಟದ ರೇಷನ್ ಬೆಲ್ಲ, ರವ, ಹಾಲಿನ ಪೌಡರ್ ಪೂರೈಸಬೇಕು. ಮೊಟ್ಟೆಗಳ ಖರೀದಿಗೆ ಹಣ ಬಿಡುಗಡೆ ಮಾಡಬೇಕು. ಗುಣಮಟ್ಟದ ಸಮವಸ್ತ್ರ ನೀಡಬೇಕು. 2005 ರ ಬಾಲ ಭವನ, 2017 ರ ಸ್ತ್ರೀ ಶಕ್ತಿ ಭವನ, ಇಲಾಖೆ ಕಟ್ಟಡ ನಿರ್ಮಿಸಲು ಆದೇಶ ನೀಡಬೇಕು. 2020 ರಿಂದ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೌರವಧನ ಧನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ
ಸಂಘದ ಅಧ್ಯಕ್ಷೆ ಸರಸ್ವತಿ ಈಚನಾಳ, ಗೌರವಾಧ್ಯಕ್ಷೆ ಲಕ್ಷ್ಮೀ ನಗನೂರು, ಕಾರ್ಯದರ್ಶಿ ಮಹೇಶ್ವರಿ ಹಟ್ಟಿ, ಮಲ್ಲಯ್ಯ ಹೊನ್ನಳೆ, ಸುಮಿತ್ರಾ ಗುರುಗುಂಟಾ, ಸಾವಿತ್ರಿಭೂಪುರ, ಹನುಮಂತ, ಹನುಮನಗೌಡ, ಮಲ್ಲನಗೌಡ ಪಾಟೀಲ್ ಇದ್ದರು.

